ಶಿವಣ್ಣನ ಸಿನಿಮಾ ರಿಷಬ್ ಶೆಟ್ಟಿ ನಿರ್ದೇಶನ ಮಾಡುತ್ತಾರಾ ಇಲ್ವಾ? ಸೆಂಚುರಿ ಸ್ಟಾರ್ ಹೇಳಿದ್ದೇನು?

ಸ್ಯಾಂಡಲ್‌ವುಡ್‌ನಲ್ಲಿ ಶಿವರಾಜ್‌ಕುಮಾರ್ ಅಷ್ಟು ಬ್ಯುಸಿಯಾಗಿರುವ ನಟನೇ ಇಲ್ಲ. ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾ ರಿಲೀಸ್ ಆಗೇ ಆಗುತ್ತೆ. 125 ಸಿನಿಮಾಗಳನ್ನು ಪೂರೈಸಿರೋ ಸೆಂಚುರಿ ಸ್ಟಾರ್ 150ನೇ ಸಿನಿಮಾ ಕಡೆ ಮುನ್ನುಗ್ಗುತ್ತಿದ್ದಾರೆ. ಕೈಯಲ್ಲಿ ಕಮ್ಮಿ ಅಂದರೂ ಐದಾರು ಸಿನಿಮಾಗಳಿವೆ.

ಶಿವಣ್ಣ ಪ್ಯಾನ್ ಇಂಡಿಯಾ ಸಿನಿಮಾ 'ಘೋಸ್ಟ್' ರಿಲೀಸ್ ಮಾಡುವ ಉತ್ಸಾಹದಲ್ಲಿದ್ದಾರೆ. ರಿಲೀಸ್‌ಗೆ ಇನ್ನೊಂದು ವಾರ ಇದೆ ಅನ್ನುವಾಗಲೇ ಶಿವಣ್ಣ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಶ್ರೀನಿ ನಿರ್ದೇಶನದ 'ಘೋಸ್ಟ್' ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

Shivarajkumars reaction to the movie that was to be directed by Rishab Shetty

ಶಿವರಾಜ್‌ಕುಮಾರ್ ಬ್ಯುಸಿಯಾಗಿರೋದೇನೋ ನಿಜ. ಆದರೆ, ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಸೆಟ್ಟೇರುತ್ತಾ? ಇಲ್ವಾ? ಅನ್ನೋ ಪ್ರಶ್ನೆಯೀಗ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ರಿಷಬ್ ಶೆಟ್ಟಿ, ಶಿವಣ್ಣನಿಗೆ ಆಕ್ಷನ್ ಕಟ್ ಹೇಳುತ್ತಾರಾ? ಇಲ್ವಾ? ಈ ಪ್ರಶ್ನೆ ಸೆಂಚುರಿ ಸ್ಟಾರ್ ಉತ್ತರ ಕೊಟ್ಟಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಜೊತೆಗಿನ ಸಿನಿಮಾ ಬಗ್ಗೆ ರಿವೀಲ್ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆನೇ ಅನೌನ್ಸ್

ಎರಡು ವರ್ಷಗಳ ಹಿಂದೆನೇ ರಿಷಬ್ ಶೆಟ್ಟಿ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲೊಂದು ಸಿನಿಮಾ ಅನೌನ್ಸ್ ಆಗಿತ್ತು. ಅದು ಶಿವಣ್ಣ 126ನೇ ಸಿನಿಮಾ ಆಗಿತ್ತು. ಕನ್ನಡದ ನಿರ್ಮಾಪಕ ಜಯಣ್ಣ ಈ ರೇರ್ ಕಾಂಬಿನೇಷನ್ ಸಿನಿಮಾಗೆ ಹಣ ಹಾಕುವುದಕ್ಕೆ ಮುಂದೆ ಬಂದಿದ್ದರು. ಇತ್ತ ಶಿವರಾಜ್‌ಕುಮಾರ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ಸಿನಿಮಾ ಏನಾಯ್ತು? ಪೋಸ್ಟ್‌ಪೋನ್ ಆಗಿದೆಯಾ? ಇಲ್ಲ ಇನ್ನು ಚಾಲ್ತಿಯಲ್ಲಿ ಇದೆಯಾ? ಘೋಸ್ಟ್ ಪ್ರಚಾರದ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.

Shivarajkumars reaction to the movie that was to be directed by Rishab Shetty

"ರಿಷಬ್ ಶೆಟ್ಟಿಗೆ ದೊಡ್ಡ ಬ್ರ್ಯಾಂಡ್ ಸಿಕ್ಕಿದೆ"

ಶಿವಣ್ಣನಿಗೆ ರಿಷಬ್ ಶೆಟ್ಟಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಆ ವೇಳೆ ಶಿವಣ್ಣ 125ನೇ ಸಿನಿಮಾ 'ವೇದ' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇತ್ತ ರಿಷಬ್ ಶೆಟ್ಟಿ 'ಕಾಂತಾರ' ಶೂಟಿಂಗ್ ಮಾಡುತ್ತಿದ್ದರು. ಅಂದರೆ, 'ಕಾಂತಾರ' ಬಿಡುಗಡೆಗೂ ಮುನ್ನ ನಡೆದ ಮಾತುಕತೆ. ಆದರೆ, 'ಕಾಂತಾರ' ರಿಷಬ್ ಶೆಟ್ಟಿ ನಸೀಬನ್ನೇ ಬದಲಿಸಿದೆ. ಹೀಗಾಗಿ ಈ ಸಿನಿಮಾ ಆಗುತ್ತಾ ಇಲ್ವಾ? ಅನ್ನೋ ಪ್ರಶ್ನೆಗೆ ಶಿವಣ್ಣ ಉತ್ತರ ಕೊಟ್ಟಿದ್ದಾರೆ. "ಗೊತ್ತಿಲ್ಲ.. ರಿಷಬ್ ಶೆಟ್ಟಿಯದ್ದು ಕಾಂತಾರ ದೊಡ್ಡ ಮಟ್ಟಕ್ಕೆ ಹಿಟ್ ಆಗಿದೆ. ಅವರಿಗೆ ಜವಾಬ್ದಾರಿ ಜಾಸ್ತಿಯಾಗಿದೆ. ಕಾದು ನೋಡೋಣ.. ಅವರಿಗೆ ದೊಡ್ಡ ಬ್ರ್ಯಾಂಡ್ ಸಿಕ್ಕಿದೆ. ಅದನ್ನು ಅವರೂ ಚೆನ್ನಾಗಿಯೇ ಬಳಸಿಕೊಳ್ಳಬೇಕು. ಅವರಿಗೆ ಒಳ್ಳೆಯದಾಗಲಿ ಅಂತ ವಿಶ್ ಮಾಡುತ್ತೇನೆ." ಎಂದು ಶಿವಣ್ಣ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ಹೇಳಿಕೆ ನೀಡಿದ್ದಾರೆ.

"ಚಾನ್ಸ್ ಸಿಕ್ಕರೆ 100 ಪರ್ಸೆಂಟ್ ಮಾಡುತ್ತೇನೆ"

ಇದೇ ಸಂದರ್ಶನದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ನಟಿಸುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ. "ಅವರು ಒಬ್ಬ ಒಳ್ಳೆಯ ನಿರ್ದೇಶಕ. 100 ಪರ್ಸೆಂಟ್ ಅವರಿಗೆ ಚಾನ್ಸ್ ಸಿಕ್ಕರೇ ಮಾಡಿಯೇ ಮಾಡುತ್ತೇನೆ. ಅವರು ಯಾವ ಪ್ಲ್ಯಾನ್‌ನಲ್ಲಿ ಇದ್ದಾರೋ ಗೊತ್ತಿಲ್ಲ. ಕಾದು ನೋಡೋಣ ಅಷ್ಟೇ." ಎಂದು ಶಿವಣ್ಣ ಹೇಳಿದ್ದಾರೆ.

ಕ್ರೇಜ್ ಜೋಡಿ ಆಗಬಹುದೇ?

'ಕಾಂತಾರ' ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇತ್ತ 'ಜೈಲರ್' ಸಿನಿಮಾದಲ್ಲಿ ನಟಿಸಿದ ಅತಿಥಿ ಪಾತ್ರದ ದಕ್ಷಿಣ ಭಾರತದಲ್ಲಿ ಕ್ರೇಜ್ ಹುಟ್ಟಾಕಿದೆ. ಶಿವಣ್ಣನ ಸಿನಿಮಾಗಾಗಿ ಪರಭಾಷಿಗರು ಕಾದು ಕೂತಿದ್ದಾರೆ. ಈ ಸಂದರ್ಭದಲ್ಲಿ ಈ ಕ್ರೇಜಿ ಜೋಡಿ ಒಟ್ಟಿಗೆ ಸೇರಿದರೆ ಬ್ಲಾಕ್ ಬಸ್ಟರ್ ಸಿನಿಮಾ ಸಿಗೋದು ಗ್ಯಾರಂಟಿ.

More from Filmibeat

English summary
What Happened to Shivarajkumar and Rishab Shetty Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X