"ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ಸ್ವೀಕರಿಸುವುದಿಲ್ಲ.. ನನಗೆ ನನ್ನ ಸಿನಿಮಾ ಮುಖ್ಯ" ತಮಿಳು ನಟ ಸಿದ್ಧಾರ್ಥ್!
ಬಹುಭಾಷಾ ನಟ ಸಿದ್ಧಾರ್ಥ್ ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಚಿತ್ತ' ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಹೈದರಾಬಾದ್, ಚೆನ್ನೈ ಸೇರಿದಂತೆ ಹಲವೆಡೆ ಓಡಾಡಿಕೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ 'ಚಿತ್ತ' ಸಕ್ಸಸ್ ಮೀಟ್ ಕೂಡ ಮಾಡಿದ್ದು, ಶಿವಣ್ಣ ಹಾಗೂ ಪ್ರಕಾಶ್ ರಾಜ್ ಕ್ಷಮೆಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
'ಚಿತ್ತ' ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ನಟ ಸಿದ್ಧಾರ್ಥ್ ಭಾಗಿಯಾಗಿದ್ದರು. ಈ ವೇಳೆ ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ ಘಟನೆ ಬಗ್ಗೆ ಮಾತಾಡಿದ್ದಾರೆ. ಸಿದ್ಧಾರ್ಥ್ ಕರ್ನಾಟಕಕ್ಕೆ 'ಚಿತ್ತ' ಸಿನಿಮಾದ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲ ಕನ್ನಡ ಸಂಘಟನೆಯ ಸದಸ್ಯರು ಏಕಾಏಕಿ ನುಗ್ಗಿ ಪ್ರತಿಭಟನೆ ಮಾಡಿದ್ದರು.

ಈ ಘಟನೆ ನಡೆಯುತ್ತಿದ್ದಂತೆ ತಮಿಳು ನಟ ಸಿದ್ಧಾರ್ಥ್‌ಗೆ ಬಹುಭಾಷಾ ನಟ ಸಿದ್ಧಾರ್ಥ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕನ್ನಡಿಗರ ಪರವಾಗಿ ಬಹಿರಂಗ ಕ್ಷಮೆಯನ್ನು ಕೇಳಿದ್ದರು. ಇದೇ ವಿಷಯವಾಗಿ ಸಿದ್ಧಾರ್ಥ್ ಇಬ್ಬರ ಕ್ಷಮೆಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಹೀಗ್ಯಾಕೆ ಅಂದರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಕಾವೇರಿ ಬಗ್ಗೆ ನನ್ನನ್ನು ಕೇಳಬೇಡಿ"
'ಚಿತ್ತ' ಸಿನಿಮಾವನ್ನು ಸ್ವತ: ಸಿದ್ಧಾರ್ಥ್ ನಟಿಸಿ, ನಿರ್ಮಾಣ ಕೂಡ ಮಾಡಿದ್ದಾರೆ. ಹೀಗಾಗಿ ಕಾವೇರಿ ಹಾಗೂ ರಾಜಕೀಯದ ಬಗ್ಗೆ ನನ್ನನ್ನು ಕೇಳಬೇಡಿ ಎಂದು ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದಾರೆ. " ಇದು ನಾನೇ ನಟಿಸಿ, ನಿರ್ಮಿಸಿದ ಸಿನಿಮಾ. ಎರಡು ವರ್ಷಗಳ ಶ್ರಮ. ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ವಾರದ ಬಳಿಕ ಎರಡನೇ ವಾರವೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ನಾನು ಇಲ್ಲಿ ಯಾವುದೇ ರಾಜಕೀಯ ಮಾತಾಡುವುದಕ್ಕೆ ಬಂದಿಲ್ಲ. ಕಾವೇರಿ ವಿಚಾರವಾಗಿ ನನ್ನನ್ನು ಕೇಳಬೇಡಿ. ನನಗೆ ನನ್ನ ಸಿನಿಮಾ ಮುಖ್ಯ." ಎಂದು ಸಿದ್ಧಾರ್ಥ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆ ಸ್ವೀಕರಿಸುವುದಿಲ್ಲ"
ಇದೇ ವೇಳೆ ಕರ್ನಾಟಕದಲ್ಲಿ ನಡೆದ ಘಟನೆ ಬಗ್ಗೆನೂ ಮಾತಾಡಿದ್ದು, ಶಿವರಾಜ್‌ಕುಮಾರ್ ಹಾಗೂ ಪ್ರಕಾಶ್ ರಾಜ್ ಕ್ಷಮೆಯನ್ನು ಸ್ವೀಕರಿಸುವುದಿಲ್ಲ ಎಂದಿದ್ದಾರೆ. "ಕನ್ನಡದ ನಟ ಶಿವರಾಜ್‌ಕುಮಾರ್ ಸರ್, ಪ್ರಕಾಶ್ ರಾಜ್ ಸರ್ ಎಲ್ಲರೂ ದೊಡ್ಡವರು. ಅವರಿಗೂ ಈ ಘಟನೆಗೂ ಸಂಬಂಧವಿಲ್ಲ. ಅವರಿಬ್ಬರೂ ಕ್ಷಮೆ ಕೇಳುವ ಅಗತ್ಯವಿಲ್ಲ. ಶಿವರಾಜ್‌ಕುಮಾರ್ ಸರ್ ಹಾಗೂ ಪ್ರಕಾಶ್ ರಾಜ್ ಸರ್ ಕ್ಷಮೆಯನ್ನು ನಾನು ಎಂದಿಗೂ ಸ್ವೀಕರಿಸುವುದಿಲ್ಲ. ನನ್ನ ಸಿನಿಮಾವನ್ನು ಕನ್ನಡಿಗರು ಕೂಡ ಇಷ್ಟ ಪಡುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನನಗೆ ಯಾವುದೇ ತೊಂದರೆ ಆಗಿಲ್ಲ. ಕೇವಲ ಸಂಘಟನೆಯ 10 ಮಂದಿ ಬಂದು ಬೆದರಿಕೆ ಹಾಕಿದ್ದಾರೆ. ಅದು ಅವರ ಸಮಸ್ಯೆ ಹೊರತು ಬೇರೇನೂ ಅಲ್ಲ" ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
"ಪತ್ರಿಕಾಗೋಷ್ಠಿಗೆ ಅನುಮತಿ ಪಡೆದಿದ್ದೆ"
"ಕರ್ನಾಟಕದಲ್ಲಿ ಪತ್ರಿಕಾಗೋಷ್ಠಿ ಮಾಡುವುದಕ್ಕೆ ಅನುಮತಿಯನ್ನು ಪಡೆದಿದ್ದೆ. ಆ ದಿನ ಅಲ್ಲಿ ಬಂದ್ ಇರಲಿಲ್ಲ. ಮರು ದಿನ ಬಂದ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ಪತ್ರಿಕಾಗೋಷ್ಠಿ ಮಾಡಿದ್ದೆ. ನಾನು ನಿರ್ಮಿಸಿದ ಸಿನಿಮಾವನ್ನು ಜನರಿಗೆ ತಲುಪಿಸುವ ಸಲುವಾಗಿ ಮಾಡಿದ ಪ್ರೆಸ್ ಮೀಟ್ ಆಗಿತ್ತು." ಎಂದು ಸಿದ್ಧಾರ್ಥ್ ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದಾರೆ.
ಎಲ್ಲಿತ್ತು ನಿರ್ಮಾಪಕರ ಸಂಘ?
ಇದೇ ಸಕ್ಸಸ್ ಮೀಟ್‌ನಲ್ಲಿ ಸಿದ್ಧಾರ್ಥ್ ನಿರ್ಮಾಪಕರ ಸಂಘವನ್ನೂ ದೂರಿದ್ದಾರೆ. ಶಿವರಾಜ್ ಕುಮಾರ್ ಮತ್ತು ಪ್ರಕಾಶ್ ರಾಜ್ ಕ್ಷಮೆ ಕೇಳಿದ ಬಳಿಕ ನಿರ್ಮಾಪಕರ ಸಂಘ ಈ ಘಟನೆ ಬಗ್ಗೆ ಏನೂ ಮಾತಾಡಿಲ್ಲ. ಇಲ್ಲಿ ತಾನೊಬ್ಬ ಸಂತ್ರಸ್ತ ನಿರ್ಮಾಪಕ. ಈ ಘಟನೆ ಬಗ್ಗೆ ನಿರ್ಮಾಪಕರ ಸಂಘದವರು ಯಾರೂ ತನ್ನನ್ನು ಸಂಪರ್ಕ ಮಾಡಿಲ್ಲ. ನಾಳೆ ಮತ್ತೊಬ್ಬ ನಿರ್ಮಾಪಕನಿಗೆ ಈ ರೀತಿ ಆಗಬಾರದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











