»   » ಶ್ರದ್ಧಾ ಶ್ರೀನಾಥ್ ಹೊಸ ಚಿತ್ರದ ಬಗ್ಗೆ ಸಿಕ್ಕ ಲೇಟೆಸ್ಟ್ ನ್ಯೂಸ್!

ಶ್ರದ್ಧಾ ಶ್ರೀನಾಥ್ ಹೊಸ ಚಿತ್ರದ ಬಗ್ಗೆ ಸಿಕ್ಕ ಲೇಟೆಸ್ಟ್ ನ್ಯೂಸ್!

Posted By:
Subscribe to Filmibeat Kannada

ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಚಿತ್ರದ ಮೂಲಕ ಚಂದನವನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು ಶ್ರದ್ಧಾ ಶ್ರೀನಾಥ್. ಸದ್ಯದಲ್ಲೇ ಈ ಮೂಗುತಿ ಸುಂದರಿ 'ಅನನ್ಯ ಟೀಚರ್' ಆಗಿ ಕಾಣಿಸಿಕೊಂಡಿರುವ 'ಆಪರೇಷನ್ ಅಲಮೇಲಮ್ಮ' ಚಿತ್ರ ತೆರೆಗೆ ಬರಲು ಸಜ್ಜಾಗಿದೆ.['ಆಪರೇಷನ್ ಅಲುಮೇಲಮ್ಮ'ನ ಆಗಮನಕ್ಕೆ ಒಳ್ಳೆ ದಿನ ಯಾವಾಗ!]

ಅಂದಹಾಗೆ ಸಿಂಪಲ್ ಸುನಿ ನಿರ್ದೇಶನದ ''ಆಪರೇಷನ್ ಅಲಮೇಲಮ್ಮ' ನಂತರ ಶ್ರದ್ಧಾ ಶ್ರೀನಾಥ್ ನಟಿಸುವ ಕನ್ನಡ ಸಿನಿಮಾ ಯಾವುದು ಎಂಬ ಪ್ರಶ್ನೆ ಸಿನಿ ಪ್ರೇಮಿಗಳಲ್ಲಿ ಕಾಡುವ ಮುನ್ನವೇ ಉತ್ತರ ಸಿಕ್ಕಿದೆ. ಹಾಗಿದ್ರೆ ಶ್ರದ್ಧಾ ಶ್ರೀನಾಥ್ ಅಭಿನಯದ ಮುಂದಿನ ಕನ್ನಡ ಸಿನಿಮಾ ಯಾವುದು? ತಿಳಿಯಲು ಮುಂದೆ ಓದಿ..

ನವ ನಿರ್ದೇಶಕನಿಂದ ಶ್ರದ್ಧಾ ಮುಂದಿನ ಚಿತ್ರ

ಹೌದು. ಶ್ರದ್ಧಾ ಶ್ರೀನಾಥ್ ಅಭಿನಯದ ಮುಂದಿನ ಕನ್ನಡ ಚಿತ್ರವನ್ನು ನವ ನಿರ್ದೇಶಕ ಕೆ.ಎಸ್.ನಂದೀಶ ಎಂಬುವವರು ಡೈರೆಕ್ಟ್ ಮಾಡಲಿದ್ದಾರೆ. ಈ ಬಗ್ಗೆ ಮೂಗುತಿ ಸುಂದರಿ ಸ್ವತಃ ಖಚಿತ ಪಡಿಸಿದ್ದಾರೆ.

ಚಿತ್ರದ ಹೆಸರೇನು?

ನವ ನಿರ್ದೇಶಕ ಕೆ.ಎಸ್.ನಂದೀಶ ಶ್ರದ್ಧಾ ಶ್ರೀನಾಥ್ ರವರಿಗೆ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ 'ಗೋಧ್ರ (Godhra)' ಎಂದು ಈಗಾಗಲೇ ಟೈಟಲ್ ಸಹ ಫಿಕ್ಸ್ ಆಗಿದೆ.

ಶ್ರದ್ಧಾಗೆ ಜೊತೆಯಾಗಲಿರುವ ನಟ ಯಾರು?

'ಗೋಧ್ರ (Godhra)' ಚಿತ್ರದಲ್ಲಿ ನಟ ಸತೀಶ್ ನೀನಾಸಂ ರವರು ಶ್ರದ್ಧಾ ಶ್ರೀನಾಥ್ ಜೊತೆ ಅಭಿನಯಿಸಲಿದ್ದು, ಈ ಚಿತ್ರ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಕಾಂಬಿನೇಷನ್ ನ ಮೊದಲ ಚಿತ್ರವಾಗಲಿದೆ.

ಜೂನ್ ನಂತರ ಚಿತ್ರೀಕರಣ ಆರಂಭ

ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಸದ್ಯದಲ್ಲಿ ತೆಲುಗಿನ 'ಹೇ ಕೃಷ್ಣ ಮುಕುಂದ ಮುರಾರಿ' ಚಿತ್ರದಲ್ಲಿ ಬಿಜಿಯಾಗಿದ್ದು, 'ಗೋಧ್ರ' ಚಿತ್ರೀಕರಣ ಜೂನ್ ನಂತರ ಆರಂಭವಾಗಲಿದೆ ಎಂದಿದ್ದಾರೆ ನಟಿ.[ಟಾಲಿವುಡ್ ಕಡೆ ಮುಖ ಮಾಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್]

ಚಿತ್ರದ ತಾರಾಬಳಗ

ನಿರ್ದೇಶಕ ಕೆ.ಎಸ್.ನಂದೀಶ 'ಗೋಧ್ರ' ಚಿತ್ರದ ನಟ-ನಟಿಯನ್ನಷ್ಟೇ ಫೈನಲ್ ಮಾಡಿದ್ದು, ಇನ್ನು ತಾರಾಬಳಗದ ಬಗ್ಗೆ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.

English summary
Kannada Actress Shraddha Srinath's next Kannada movie will direct by debutant director K S Nandeesha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada