»   » 'ಆಪರೇಷನ್ ಅಲುಮೇಲಮ್ಮ'ನ ಆಗಮನಕ್ಕೆ ಒಳ್ಳೆ ದಿನ ಯಾವಾಗ!

'ಆಪರೇಷನ್ ಅಲುಮೇಲಮ್ಮ'ನ ಆಗಮನಕ್ಕೆ ಒಳ್ಳೆ ದಿನ ಯಾವಾಗ!

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೊತ್ತಿಗಾಗಲೇ 'ಆಪರೇಷನ್ ಅಲುಮೇಲಮ್ಮ' ಚಿತ್ರಮಂದಿರಕ್ಕೆ ಬರಬೇಕಾಗಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್, ಪ್ರಚಾರ ಹಾಗೂ ಇನ್ನಿತರ ಕೆಲಸಗಳು ಅಂತ ಹಿಂದೆ ಹಿಂದೆ ಸರಿಯುತ್ತಲೇ ಇತ್ತು.

ಇದೀಗ, 'ಆಪರೇಷನ್ ಅಲುಮೇಲಮ್ಮ'ನ ಆಗಮನಕ್ಕೆ ಒಂದೊಳ್ಳೆ ದಿನ ಬಂದಿದ್ದು ಆದಷ್ಟೂ ಬೇಗ ಚಂದನವನದ ತೆರೆ ಮೇಲೆ 'ಅನನ್ಯ' ಟೀಚರ್ ಬರಲಿದ್ದಾರಂತೆ. ಹೌದು, ಈ ತಿಂಗಳು ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಜೂನ್ ತಿಂಗಳಲ್ಲಿ 'ಆಪರೇಷನ್ ಅಲುಮೇಲಮ್ಮ' ಬಿಡುಗಡೆಯಾಗಲಿದೆಯಂತೆ. ಇನ್ನು ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ವಿಶ್ವದಾದ್ಯಂತ ವಿತರಣೆ ಮಾಡಲಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಮತ್ತು 'ರಾಜಕುಮಾರ', ಯಶ್ ಅಭಿನಯದ 'ಮಾಸ್ಟರ್ ಪೀಸ್' ಚಿತ್ರಗಳನ್ನು ನಿರ್ಮಾಣ ಮಾಡಿತ್ತು.

Operation Alamelamma is all set to release on June

ಸದ್ಯ, ಟೀಸರ್ ಮತ್ತು ಹಾಡುಗಳ ಮೂಲಕ ಕನ್ನಡ ಪ್ರೇಕ್ಷಕರನ್ನ ಸೆಳೆಯುತ್ತಿರುವ 'ಆಪರೇಷನ್ ಅಲುಮೇಲಮ್ಮ' ಚಿತ್ರದ ಮೇಲೆ ಒಂದು ರೀತಿಯ ಭರವಸೆ ಹುಟ್ಟಿಕೊಂಡಿದೆ.

ಅಂದ್ಹಾಗೆ, ಈ ಚಿತ್ರವನ್ನ ಸಿಂಪಲ್ ಸುನಿ ನಿರ್ದೇಶನ ಮಾಡಿದ್ದು, ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಮತ್ತು ಆರ್ ಜೆ ನೇತ್ರಾ ಸಹೋದರ ರಿಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನು ಬಿ.ಜೆ ಭರತ್ ಸಂಗೀತ ಸಂಯೋಜನೆ ಮಾಡಿದ್ದಾರೆ.

English summary
Kannada Actress Shraddha Srinath starrer Kannada Movie 'Operation Alamelamma' is all set to release on June all over Karnataka. The movie is directed by simple Suni

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada