»   » ಟಾಲಿವುಡ್ ಕಡೆ ಮುಖ ಮಾಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

ಟಾಲಿವುಡ್ ಕಡೆ ಮುಖ ಮಾಡಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್

Posted By:
Subscribe to Filmibeat Kannada

'ಯು-ಟರ್ನ್' ಮತ್ತು 'ಊರ್ವಿ' ಚಿತ್ರಗಳಿಂದ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ 'ಅನನ್ಯ ಟೀಚರ್' ಆಗಿ 'ಆಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ಕನ್ನಡದ ಬೆಳ್ಳಿಪರದೆ ಮೇಲೆ ಮಿನುಗುವುದು ಇನ್ನೂ ಬಾಕಿ ಇದೆ. ಅಷ್ಟರೊಳಗೆ ಶ್ರದ್ಧಾ ಶ್ರೀನಾಥ್ 'ಶಾದಿ ಭಾಗ್ಯ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.[ಇನ್ಮುಂದೆ ಸ್ಕೂಲ್ ಗೆ ಚಕ್ಕರ್ ಹಾಕೋ ಹಾಗಿಲ್ಲ, ಯಾಕಂದ್ರೆ 'ಅನನ್ಯ' ಟೀಚರ್ ಬಂದವ್ರೇ!]

ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ಕಾಲಿವುಡ್ ನಲ್ಲಿಯೂ ನಟಿ ಶ್ರದ್ಧಾ ಶ್ರೀನಾಥ್ ಗೆ ಬೇಡಿಕೆ ಹೆಚ್ಚಾಗಿದೆ. ತಮಿಳಿನ ಒಟ್ಟು ಮೂರು ಚಿತ್ರಗಳಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಈ ನಡುವೆ ಟಾಲಿವುಡ್ ಕಡೆ ಮುಖ ಮಾಡಲು ಶ್ರದ್ಧಾ ಮನಸ್ಸು ಮಾಡಿದ್ದಾರೆ. ಮುಂದೆ ಓದಿ....

ಟಾಲಿವುಡ್ ಗೆ ಜಿಗಿದ ಶ್ರದ್ಧಾ ಶ್ರೀನಾಥ್

ಮೂಲಗಳ ಪ್ರಕಾರ, ನಟಿ ಶ್ರದ್ಧಾ ಶ್ರೀನಾಥ್ ಗೆ ತೆಲುಗು ಸಿನಿ ಅಂಗಳದಿಂದ ಬುಲಾವ್ ಬಂದಿದೆ. ಸದ್ಯದಲ್ಲಿಯೇ ತೆಲುಗು ಚಿತ್ರವೊಂದಕ್ಕೆ ನಾಯಕಿ ಆಗಿ ನಟಿಸಲಿದ್ದಾರೆ ನಟಿ ಶ್ರದ್ಧಾ ಶ್ರೀನಾಥ್.[ಓದುಗರ ನೆಚ್ಚಿನ ಶ್ರದ್ಧಾ ಶ್ರೀನಾಥ್ ಗೆ 'ಉದಯೋನ್ಮುಖ ನಟಿ-2016' ಪ್ರಶಸ್ತಿ]

ಯಾವ ತೆಲುಗು ಚಿತ್ರದಲ್ಲಿ ಶ್ರದ್ಧಾ ನಾಯಕಿ.?

ಅಂದ್ಹಾಗೆ, ಟಾಲಿವುಡ್ ನಿಂದ ಶ್ರದ್ಧಾಗೆ ಬುಲಾವ್ ನೀಡಿರುವವರು ಯಾರು ಎಂಬುದು ಬಹಿರಂಗವಾಗಿಲ್ಲ. ಎಲ್ಲವೂ ಕನ್ಫರ್ಮ್ ಆದ ಬಳಿಕ ಮಾಹಿತಿ ನೀಡುವೆ ಎನ್ನುತ್ತಾರೆ ಶ್ರದ್ಧಾ ಶ್ರೀನಾಥ್.

ತಮಿಳಿನಲ್ಲಿ ಮೂರು ಚಿತ್ರಗಳು

ಇತ್ತ ತಮಿಳಿನಲ್ಲಿ 'ಇವನ್ ತಂತಿರನ್', 'ವಿಕ್ರಂ ವೇದ' ಮತ್ತು 'ರಿಚಿ' ಚಿತ್ರಗಳಲ್ಲಿ ನಟಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ.

ಶ್ರದ್ಧಾಗೆ 'ಶಾದಿ ಭಾಗ್ಯ'

ಶ್ರದ್ಧಾ ಶ್ರೀನಾಥ್ ಅಭಿನಯದ ಕನ್ನಡ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಬಿಡುಗಡೆಗೆ ಸಿದ್ಧವಾಗಿದೆ. 'ಶಾದಿ ಭಾಗ್ಯ' ಚಿತ್ರೀಕರಣದ ಹಂತದಲ್ಲಿದೆ.

English summary
According to the latest buzz, Kannada Actress Shraddha Srinath to make Tollywood Debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada