»   » ಕಿಚ್ಚ ಸುದೀಪ್-ಪ್ರೇಮ್ ಸೆಲ್ಫಿ ಹಿಂದೆ ಇರೋ ವಿಷ್ಯನೇ ಬೇರೆ .!

ಕಿಚ್ಚ ಸುದೀಪ್-ಪ್ರೇಮ್ ಸೆಲ್ಫಿ ಹಿಂದೆ ಇರೋ ವಿಷ್ಯನೇ ಬೇರೆ .!

Posted By:
Subscribe to Filmibeat Kannada

'ದಿ ವಿಲನ್' ಸಿನಿಮಾದಲ್ಲಿ ಬಿಜಿ ಇರುವ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಒಂದು ಸೆಲ್ಫಿ ತೆಗೆದುಕೊಂಡಿದ್ದಾರೆ. ಸದ್ಯ ಸಿನಿಮಾದ ಚಿತ್ರೀಕರಣಕ್ಕಾಗಿ ಸುದೀಪ್ ಮತ್ತು ಪ್ರೇಮ್ ಬ್ಯಾಂಕಾಕ್ ಗೆ ತೆರಳಿದ್ದಾರೆ.

ನಿನ್ನೆ ಸುದೀಪ್ ಮತ್ತು ಪ್ರೇಮ್ ಬ್ಯಾಂಕಾಕ್ ಗೆ ತಲುಪಿದ್ದಾರೆ. ಮೊದಲು ಚಿತ್ರದ ಚಿತ್ರೀಕರಣ ಲಂಡನ್ ನಲ್ಲಿ ಮಾಡುವುದಕ್ಕೆ ತಯಾರಿ ನಡೆಸಿದ್ದ ಚಿತ್ರತಂಡ ಕಾರಣಾಂತರಗಳಿಂದ ಬ್ಯಾಂಕಾಕ್ ನಲ್ಲಿ ಶೂಟಿಂಗ್ ನಡೆಸಬೇಕಾಗಿ ಬಂದಿದೆ.[ಇದೇ ಕಾರಣಕ್ಕೆ ನೋಡಿ ಕಿಚ್ಚ ಸುದೀಪ್ ಅಂದ್ರೆ ಪ್ರೇಮ್ ಗೆ ಬಲು'ಪ್ರಿಯ'.!]

Sudeep and director prem in Bangkok

ಬ್ಯಾಂಕಾಕ್ ಬಳಿಕ ಲಂಡನ್ ನಲ್ಲಿ 8 ದಿನಗಳ ಕಾಲ ಶೂಟಿಂಗ್ ಮಾಡಿ ಆಸ್ಟ್ರೇಲಿಯಾ ದಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ. ಈ ಭಾಗದ ಚಿತ್ರೀಕರಣದಲ್ಲಿ ನಟಿ ಆಮಿ ಜಾಕ್ಸನ್ ಸಹ ಭಾಗಿಯಾಗಲಿದ್ದಾರೆ.[ಭಯಂಕರ ಬಿರುಗಾಳಿಗೆ ಸಿಲುಕಿದ 'ದಿ ವಿಲನ್' ಚಿತ್ರತಂಡ: ಪಾರಾದ ಕಿಚ್ಚ ಸುದೀಪ್.!]

Sudeep and director prem in Bangkok

ಇಬ್ಬರ ಸೆಲ್ಫಿ ಫೇಸ್ ಬುಕ್ ನಲ್ಲಿ ಸಾವಿರಾರು ಮೆಚ್ಚುಗೆಯನ್ನು ಗಳಿಸಿದೆ. ಅಲ್ಲದೆ, ಬ್ಯಾಂಕಾಕ್ ನಲ್ಲಿ ಸುದೀಪ್ ಪ್ರೇಮ್ ಅವರಿಗೋಸ್ಕರ ತಾವೇ ಒಂದು ಕೇಕ್ ರೆಡಿ ಮಾಡಿ ಕೊಟ್ಟಿದ್ದಾರೆ.

English summary
In pic: Sudeep and Director Pream are in Bangkok for 'The Villain' movie shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada