ನೈಸ್ ರಸ್ತೆಯಲ್ಲಿ ಅಪ್ಪು ಫಿಟ್ನೆಸ್ ಮಂತ್ರ: 'ಕರ್ನಾಟಕ ರತ್ನ'ನಿಗೆ ಗೌರವ ಸೂಚಿಸಲು 'ನಮ್ಮ ಪವರ್‌ ರನ್'

ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಫಿಟ್ನೆಸ್‌ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರು ಅನ್ನೋದು ಗೊತ್ತಿರೋ ವಿಷಯವೇ. ಒಂದು ದಿನ ಶೂಟಿಂಗ್ ಬೇಕಾದರೂ ತಪ್ಪಿಸುತ್ತಿದ್ದರು. ಆದರೆ, ವರ್ಕ್‌ಔಟ್ ಮಾಡೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ನಾವು ಆರೋಗ್ಯವಾಗಿದ್ದರೆ ನಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಬಹುದು ಅನ್ನೋದನ್ನು ಅವರು ಪಾಲಿಸಿಕೊಂಡೇ ಬರುತ್ತಿದ್ದರು. ಅದೆಷ್ಟೋ ಮಂದಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡಿ ದೇಹ ದಂಡಿಸಲು ಮುಂದಾಗಿದ್ದೂ ಇದೆ.

ಈಗ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಸಮೀಪಿಸುತ್ತಿದೆ. ಇದೇ ನೆನಪಲ್ಲಿ ಅಪ್ಪುಗೆ ಗೌರವ ಸೂಚಿಸಲು 'ನಮ್ಮ ಪವರ್‌ ರನ್' ಅನ್ನು ಆಯೋಜನೆ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಸಂಬಂಧಿ ದೀಪ್ತಿ ಬಾಬು ಅವರ ಸೂತ್ರ ಫಿಟ್ನೆಸ್ ಸಂಸ್ಥೆಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿಯೇ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ನಮ್ಮ ಪವರ್ ರನ್' ಅನ್ನು ಲಾಂಚ್ ಮಾಡಿದ್ದರು. ಈಗ ಅದು ಮಾರ್ಚ್ 19ರಂದು ಬೆಂಗಳೂರಿನ ಹೊಸಕೆರೆ ಹಳ್ಳಿಯ ನೈಸ್ ರಸ್ತೆಯಿಂದ ನಡೆಯಲಿದೆ.

To Tribute Puneeth Rajkumar Sutra Fitness Organised Namma Power Run In NICE Road Bengaluru

ಪುನೀತ್ ರಾಜ್‌ಕುಮಾರ್ ಯಾವಾಗಲೂ ಒಳ್ಳೆಯದನ್ನು ಮಾಡಿ, ಒಳ್ಳೆಯವರಾಗಿರಿ, ಒಳ್ಳೆಯದನ್ನೇ ಫೀಲ್ ಮಾಡಿ ಎಂದು ಹೇಳುತ್ತಿದ್ದರು. ಅದು ಅವರ ಬದುಕಿನ ಮಂತ್ರ ಕೂಡ ಆಗಿತ್ತು. ಹೀಗಾಗಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರವ ಸೂಚಿಸುವ ಸಲುವಾಗಿ 'ನಮ್ಮ ಪವರ್‌ ರನ್' ಅನ್ನು ಆಯೋಜನೆ ಮಾಡಲಾಗಿದೆ. ಇದರೊಂದಿಗೆ ಯುವಕರನ್ನು ಫಿಟ್ನೆಸ್‌ ಕಡೆ ಸೆಳೆಯುವ ಪ್ರಯತ್ನ ಮಾಡಲಾಗಿದೆ.

"ಅಪ್ಪು ಮಾಮನನ್ನು ನೋಡಿ ಪ್ರೇರಣೆ ಹೊಂದಿದವರು ಎಷ್ಟೋ ಮಂದಿ ಇದ್ದಾರೆ. ಹಾಗಂತ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ವಿದೇಶದಲ್ಲಿ ಇರುವವರು ನನಗೆ ಫೋನ್ ಮಾಡಿ ಪುನೀತ್ ಅವರಿಂದ ನನ್ನ ಬದುಕೇ ಬದಲಾಗಿದೆ ಎಂದು ಹೇಳುತ್ತಿದ್ದಾರೆ. ಅಪ್ಪು ಮಾಮಾ ಇದ್ದಾಗ ಅದೆಷ್ಟೋ ಮ್ಯಾರಥಾನ್‌ಗಳಲ್ಲಿ ರನ್ ಮಾಡಿದ್ದಾರೆ. ಇದು ಹಲವರಿಗೆ ಪ್ರೇರಣೆಯಾಗಿದೆ. ಹೀಗಾಗಿ ಯುವಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತೆ ನಮ್ಮ ಪವರ್ ರನ್ ಅನ್ನು ಆಯೋಜನೆ ಮಾಡಿದ್ದೇವೆ. ಈ ಮೂಲಕ ಯುವಕರು ಶಿಸ್ತಿನ ಜೀವನ ನಡೆಸುವುದಕ್ಕೆ ಅನುಕೂಲವಾಗಲಿದೆ." ಎಂದು ನಮ್ಮ ಪವರ್ ರನ್ ಆಯೋಜಕರು ಹಾಗೂ ಪುನೀತ್ ಸಂಬಂಧಿಯೂ ಆಗಿರುವ ದೀಪ್ತಿ ಬಾಬು ಅವರು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

To Tribute Puneeth Rajkumar Sutra Fitness Organised Namma Power Run In NICE Road Bengaluru

'ನಮ್ಮ ಪವರ್ ರನ್‌' ಅನ್ನು ಮಾರ್ಚ್ 19ರಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ನೀಡಲಿದ್ದಾರೆ. ಇದರಲ್ಲಿ ಹಲವು ಕ್ಯಾಟಗರಿಗಳಿವೆ. ಇವುಗಳಲ್ಲಿ ಭಾಗವಹಿಸಿಲು ಒಂದೊಂದು ಬೆಲೆಯನ್ನು ನಿಗದಿ ಮಾಡಲಾಗಿದ್ದು, ಭಾಗವಹಿಸುವವರಿಗೆ ಇವೆಂಟ್ ಟಿ ಶರ್ಟ್, ಬೆಳಗ್ಗೆಯ ಉಪಹಾರ, ರಿಫ್ರೆಶ್‌ಮೆಂಟ್, ರನ್ ಅನ್ನು ಯಶಸ್ವಿಯಾಗಿ ಮುಗಿಸಿದವರಿಗೆ ಮೆಡಲ್, ಡಿಜಿಟಲ್ ಸರ್ಟಿಫಿಕೇಟ್ ನೀಡಲಿದ್ದಾರೆ. 5 ಕಿ.ಮೀ ವಾಕ್‌ಗೆ 800 ರೂ., 5 ಕಿ.ಮೀ ಓಟಕ್ಕೆ 1000 ರೂ., 10 ಕಿ.ಮೀ ಓಟಕ್ಕೆ 1200 ರೂ., 21.1 ಕಿ.ಮೀ ಓಟಕ್ಕೆ 1400 ರೂ. ನಿಗದಿ ಪಡಿಸಲಾಗಿದೆ. ಇದು ಮೊದಲ ಸಂಚಿಕೆಯಾಗಿರುವುದರಿಂದ 2 ರಿಂದ 2500 ಮಂದಿ ಸೇರುವ ಸಾಧ್ಯತೆಯಿದೆ. ಮುಂದಿನ ಸಂಚಿಕೆಗಳು ಕೂಡ ಹೀಗೆ ಯಶಸ್ವಿಯಾದರೆ, ಬಂದ ಹಣದಿಂದ ಸಾಮಾಜಿಕ ಕೆಲಸಗಳಿಗೆ ಉಪಯೋಗಿಸುವ ಉದ್ದೇಶವನ್ನು ತಂಡ ಇಟ್ಟುಕೊಂಡಿದೆ.

More from Filmibeat

English summary
To Tribute Puneeth Rajkumar Sutra Fitness Organised Namma Power Run In NICE Road Bengaluru, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X