ತುಕಾಲಿ ಸಂತೋಷ್ ಕಾರು ಅಪಘಾತ; ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ ಸಾವು

ಬಿಗ್ ಬಾಸ್ ಕನ್ನಡ ಸೀಸನ್ 10ರ 5ನೇ ರನ್ನರ್ ಅಪ್ ತುಕಾಲಿ ಸಂತೋಷ್ ಕಾರು ನಿನ್ನೆ (ಮಾರ್ಚ್ 14) ಅಪಘಾತವಾಗಿತ್ತು. ಕುಣಿಗಲ್ ಸಮೀಪ ಪ್ರಯಾಣ ಮಾಡುತ್ತಿರುವಾಗ ಆಟೋ ರಿಕ್ಷಾ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಈ ಪರಿಣಾಮ ತುಕಾಲಿ ಸಂತೋಷ್ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಆಟೋ ರಿಕ್ಷಾ ಜಖಂ ಆಗಿತ್ತು. ಆಟೋ ಚಾಲಕ ಜಗದೀಶ್‌ ಗಂಭೀರವಾಗಿ ಗಾಯಗೊಂಡಿದ್ದರು.

ಅಪಘಾತದ ಬಳಿಕ ಆಟೋ ಚಾಲಕ ಜಗದೀಶ್ ಅವರನ್ನು ಕುಣಿಗಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು (ಮಾರ್ಚ್ 14) ಬೆಳಗ್ಗೆ ಮೃತಪಟ್ಟಿದ್ದಾರೆ. ತುಕಾಲಿ ಸಂತೋಷ್ ಹಾಗೂ ಪತ್ನಿ ಮಾನಸ ಇಬ್ಬರೂ ಹೊಸದಾಗಿ ಖರೀದಿಸಿದ ಕಾರಿನಲ್ಲಿ ಪಯಣ ಬೆಳೆಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿತ್ತು.

Tukali Santhosh Car Accident Auto Driver Dies in Hospital Despite Treatment

ತುಕಾಲಿ ಸಂತೋಷ್ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಆಟೋ ರಿಕ್ಷಾ ನಡುವೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಅಪಘಾತ ಸಂಭವಿಸಿತ್ತು. ತುಕಾಲಿ ಸಂತೋಷ್ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರದ ಕಡೆಗೆ ಹೊರಟಿದ್ದರು. ಈ ವೇಳೆ ಆಟೋ ರಿಕ್ಷಾ ಚಾಲಕ ಜಗದೀಶ್ ಕಾರಿನ ಬಲಗಡೆ ಬಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಜಗದೀಶ್ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.

ಆಟೋ ಚಾಲಕ ಜಗದೀಶ್ ಅಪಘಾತದ ವೇಳೆ ಮಧ್ಯ ಸೇವನೆ ಮಾಡಿದ್ದರು ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ತುಕಾಲಿ ಸಂತೋಷ್ ಕಾರು ಅಪಘಾತ ಪ್ರಕರಣವನ್ನು ಕುಣಿಗಲ್ ಪೊಲೀಸರು ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ಹೀಗಾಗಿ ಬಿಗ್‌ ಬಾಸ್ ಕನ್ನಡ 10ರ ಸ್ಪರ್ಧಿ ತುಕಾಲಿ ಸಂತೋಷ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ತುಕಾಲಿ ಸಂತೋಷ್ ಕಾರು ಹಾಗೂ ಆಟೋ ರಿಕ್ಷಾ ಅಪಘಾತದಲ್ಲಿ ಗಾಯಗೊಂಡಿದ್ದ ಜಗದೀಶ್‌ಗೆ 40 ವರ್ಷ ವಯಸ್ಸಾಗಿತ್ತು. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಜಗದೀಶ್ ಇಂದು (ಮಾರ್ಚ್ 14) ಮುಂಜಾನೆ ಮೃತಪಟ್ಟಿದ್ದು, ಕುಟುಂಬ ಕೂಡ ಸಂಕಷ್ಟಕ್ಕೆ ಸಿಲುಕಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 10ರ 5ನೇ ರನ್ನರ್‌ಅಪ್ ತುಕಾಲಿ ಸಂತೋಷ್ ಎರಡು ವಾರಗಳ ಹಿಂದಷ್ಟೇ ಹೊಸ ಕಿಯಾ ಕಾರನ್ನು ಖರೀದಿ ಮಾಡಿದ್ದರು. ಬಿಗ್‌ಬಾಸ್ ರಿಯಾಲಿಟಿ ಶೋನಿಂದ ಹೊರ ಬಂದ್ಮೇಲೆ ಈ ಹೊಸ ಕಾರು ಖರೀದಿ ಮಾಡಿದ್ದರು. ಆದರೆ, ಎರಡು ವಾರಗಳ ಅಂತರದಲ್ಲೇ ಈ ಅಪಘಾತ ಸಂಭವಿಸಿದೆ.

More from Filmibeat

English summary
Auto Driver Who Met with Accident with Tukali Santhosh's Car Dies in Hospital
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X