"ಉಪೇಂದ್ರ ಏನೇ ಮಾಡಿದ್ರೂ ಕೆಲವ್ರು ಕೆಂಗಣ್ಣು, ಕೆಟ್ಟ ದೃಷ್ಟಿ ಬೀರುತ್ತಾರೆ"; ವಿ.ಮನೋಹರ್

ರಿಯಲ್ ಸ್ಟಾರ್ ಉಪೇಂದ್ರ 9 ವರ್ಷಗಳ ಬಳಿಕ ಇತ್ತೀಚೆಗೆ ನಿರ್ದೇಶಿಸಿದ 'ಯುಐ' ರಿಲೀಸ್ ಆಗಿದೆ. ಈ ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರಲ್ಲಿ ವಿಭಿನ್ನ ಅಭಿಪ್ರಾಯ ಹುಟ್ಟಿಕೊಂಡಿದ್ದು ನಿಜ. ಪ್ರತಿ ಬಾರಿಯೂ ಕ್ರೇಜ್ ಹುಟ್ಟಾಕುತ್ತಿದ್ದ ಉಪ್ಪಿ ಇದೇ ಮೊದಲ ಬಾರಿಗೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಹಿಂದೆ ಬಿದ್ದರೇ ಅನ್ನೋ ಅನುಮಾನ ಹುಟ್ಟಿಕೊಂಡಿದ್ದಂತೂ ನಿಜ.

ಆದರೆ, ಉಪೇಂದ್ರ ಹಾರ್ಡ್‌ ಕೋರ್‌ ಫ್ಯಾನ್ಸ್‌ಗೆ ಈ ಸಿನಿಮಾ ಇಷ್ಟ ಆಗಿದೆ. 'ಯುಐ' ಸಿನಿಮಾದ ಪ್ರತಿಯೊಂದು ಸೀನ್ ಅನ್ನೂ ಎಂಜಾಯ್ ಮಾಡಿದ್ದಾರೆ. ಪ್ರತಿಯೊಂದು ಡೈಲಾಗ್ ಕೂಡ ಇಷ್ಟ ಆಗಿದೆ. ಹಲವು ಬಾರಿ ಈ ಸಿನಿಮಾವನ್ನು ಫೋಕಸ್ ಮಾಡಿ ನೋಡಿದ್ದಾರೆ. ಉಪ್ಪಿ ನಿರ್ದೇಶನದ ಸಿನಿಮಾಗಳನ್ನು ಡಿಕೋಡ್ ಮಾಡಿ ನೋಡುವ ಸಿನಿಪ್ರಿಯರಿಗೆ 'ಯುಐ' ಮಸ್ತ್ ಕಿಕ್ ಕೊಟ್ಟಿದೆ.

V Manohar said in an interview that some people jealous about Upendra films

ಕನ್ನಡ ಅಷ್ಟೇ ಅಲ್ಲದೆ ತೆಲುಗು ಆಡಿಯನ್ಸ್ ಕೂಡ 'ಯುಐ' ಸಿನಿಮಾವನ್ನು ಚರ್ಚೆ ಮಾಡುತ್ತಿದ್ದಾರೆ. ಆದರೆ, ಈ ಮಧ್ಯೆ ಕೆಲವರು 'ಯುಐ' ಬಗ್ಗೆ ಬೇಕಂತಲೇ ನೆಗೆಟಿವ್ ಪ್ರಚಾರ ಮಾಡಿದರು ಅನ್ನೋ ಆರೋಪನೂ ಕೇಳಿ ಬಂದಿತ್ತು. ಕನ್ನಡದ ಸಂಗೀತ ನಿರ್ದೇಶಕ ವಿ.ಮನೋಹರ್ ಡೈಲಿ ಮಾಧ್ಯಮ ಅನ್ನೋ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಉಪೇಂದ್ರ ಏನಾದರೂ ಡಿಫ್ರೆಂಟ್ ಮಾಡಿದರೆ ಕೆಂಗಣ್ಣು, ಕೆಟ್ಟ ದೃಷ್ಟಿ ಬೀರುವವರು ಇದ್ದಾರೆ ಎಂದು ಹೇಳಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

UI Box office Day 14: 2024ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಯುಐ'? 14ನೇ ದಿನ ಗಳಿಸಿದ್ದೆಷ್ಟು?
ವಿ.ಮನೋಹರ್ 'ಯುಐ' ಟೈಟಲ್‌ನಿಂದ ಮಾತು ಶುರು ಮಾಡಿದ್ದರು. ಇಂತಹ ಟೈಟಲ್‌ ಉಪ್ಪಿಗೆ ಬಿಟ್ಟರೆ, ಬೇರೆ ಯಾರಿಗೂ ಹೊಳೆಯುವುದಿಲ್ಲ ಎಂದಿದ್ದಾರೆ. "ಯುಐ ಟೈಟಲ್ ಬಹುಶ: ಇಂತಹ ವಿಶೇಷವಾದದ್ದು ಉಪ್ಪಿಯವರಿಗೆ ಮಾತ್ರ ಹೊಳೆಯುತ್ತೆ. ಬೇರೆ ಯಾರಿಗೂ ಇಲ್ಲಿವರೆಗೂ ಹೊಳೆದಿಲ್ಲ. ಅದು ಯಾರಿಗೂ ಹೊಳೆಯೋದೂ ಇಲ್ಲ. ಬೇರೆಯವರು ಆ ರೀತಿ ಯೋಚನೆನೂ ಮಾಡಲ್ಲ. ಉಪ್ಪಿ ಯೋಚನೆ ಮಾಡುವುದೆಲ್ಲ ಬೇರೆಯವರಿಗಿಂತ ಭಿನ್ನವಾಗಿರುತ್ತೆ. ತಿರುಪತಿ ವೆಂಕಟೇಶ್ವರನ ನಾಮದಲ್ಲಿ ಯು ಮತ್ತೆ ಐ ಬರೆದಿದ್ದಾರೆ. ಅದನ್ನು ಅವರು ಗುರುತಿಸಿದ್ರಲ್ಲ ಅದು ನನಗೆ ರೋಮಾಂಚನ ಆಯ್ತು." ಎಂದು ಡೈಲಿ ಮಾಧ್ಯಮಕ್ಕೆ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಉಪೇಂದ್ರ ಏನೇ ಮಾಡಿದರೂ ಅಸೂಯೆ ಪಡುವಂತಹ ಒಂದು ಗುಂಪು ಇದೆ ಎಂದು ಹೇಳಿಕೆ ಕೊಟ್ಟಿದ್ದಾರೆ. "ಉಪೇಂದ್ರ ಏನೇ ಮಾಡಿದರೂ ಒಂದು ಕೆಂಗಣ್ಣು, ಕೆಟ್ಟ ದೃಷ್ಟಿ ಕೆಲವರಿಗೆ ಇದ್ದೇ ಇದೆ. ಯಾರಾದರೂ ಏನಾದರೂ ಡಿಫ್ರೆಂಟ್ ಆಗಿ ಮಾಡುತ್ತಾರೆ ಅಂತಾದರೆ, ಒಂದಿಷ್ಟು ಅಸೂಯೆಯ ಜನ ಹುಟ್ಟಿಕೊಳ್ಳುತ್ತಾರೆ. ಅಥವಾ ಅಸೂಯೆ ಹುಟ್ಟಿಕೊಳ್ಳುತ್ತೆ. ಅವನೇನು? ಅವನು ಯಾವ ತರ ಮಾಡುತ್ತಾನೆ ಅಂತ ಕೊಂಕು ಮಾಡುತ್ತಾರೆ. ಕಾಂಟ್ರವರ್ಸಿ ಮಾಡುವುದಕ್ಕೆ ಒಂದಷ್ಟು ಗುಂಪು ನಿಂತು ಬಿಡುತ್ತೆ. ಅದು ಉಪ್ಪಿಗೆ ಸಾಕಷ್ಟು ಅನುಭವಗಳು ಆಗಿವೆ." ಎಂದು ವಿ.ಮನೋಹರ್ ಹೇಳಿದ್ದಾರೆ.

V Manohar said in an interview that some people jealous about Upendra films

"ಯಾಕಂದ್ರೆ ಉಪೇಂದ್ರ ಸಿನಿಮಾ ಮಾಡುವಾಗಲೇ ಕಾಂಟ್ರವರ್ಸಿ ಮಾಡುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಶುರುವಾಯ್ತು. ಇಲ್ಲಿ ಯುಐ ಮಾಡುವಾಗ ನಾಮ ಇಟ್ಟು ಟೈಟಲ್ ಮಾಡಿದ್ದರು. ಆ ಮೇಲೆ ಅವರಿಗೆ ಹಿಂಟ್ ಸಿಕ್ಕಿತ್ತು. ಇಲ್ಲೇನು ಕಾಂಟ್ರವರ್ಸಿ ಮಾಡುತ್ತಾರೆ ಅಂತ. ಅದಕ್ಕೆ ಅವರು ಏನು ಮಾಡಿದರು ಯು ಅನ್ನೋದಕ್ಕೆ ಲಾಳ ಮಾಡಿದರು. ಐ ಅನ್ನೋದನ್ನು ಬೆಂಕಿ ಮಾಡಿದರು." ಎಂದು 'ಯುಐ' ಟೈಟಲ್‌ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ವಿ.ಮನೋಹರ್ 'ಯುಐ' ಟೈಟಲ್ ಅನ್ನು ಡಿಕೋಡ್ ಮಾಡಿದ್ದಾರೆ. ಕುದುರೆ ಓಡುವಾಗ ಕಾಲು ಸವೆಯುತ್ತೆ. ಆಗ ನೋವಾಗುತ್ತೆ. ಹಾಗಾಗಿ ಲಾಳ ಹಾಕುತ್ತಾರೆ. ಕುದುರೆ ಮತ್ತು ಲಾಳ ಎರಡೂ ಯುದ್ಧದ ಸಂಕೇತ. ಇನ್ನು ಐ ಅಂದರೆ ಬೆಂಕಿ. ಇನ್ನು ಕಂಟೆಂಟ್ ಕಡೆಗೆ ಬರೋದಾರೆ, ಅದರಲ್ಲಿ ವಿಷಯ ಸಾಕಷ್ಟು ಇದ್ದಿದ್ದರಿಂದ ಅದರಲ್ಲಿ ಎರಡು ಪಾತ್ರಗಳನ್ನು ಕೊಟ್ಟರು. ಒಂದು ಸತ್ಯ ಇನ್ನೊಂದು ಕಲ್ಕಿ ಎಂದು ವಿ.ಮನೋಹರ್ ವಿವರಿಸಿದ್ದಾರೆ.

More from Filmibeat

English summary
V. Manohar said in an interview that some people jealous about Upendra films;
Read more about: upendra v manohar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X