"ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು" ಪತಿ ದರ್ಶನ್ ನೆನೆದು ವಿಜಯಲಕ್ಷ್ಮಿ ಭಾವುಕ ಪೋಸ್ಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಪ್ರತಿದಿನ ಏನಾದರೂ ಒಂದು ಸುದ್ದಿ ಹಲ್‌ಚಲ್ ಎಬ್ಬಿಸುತ್ತಲೇ ಇರುತ್ತೆ. ವಿಜಯಲಕ್ಷ್ಮಿ ಅವರು ತಮ್ಮ ಪತಿ ದರ್ಶನ್ ಬಗ್ಗೆ ಭಾವನಾತ್ಮಕವಾಗಿ ಒಂದೊಂದು ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಹಾಡುತ್ತಿರುವ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ಇಂದು (ಜುಲೈ 16) ಮತ್ತೊಂದು ಭಾವನಾತ್ಮಕ ಪೋಸ್ಟ್ ಅನ್ನು ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿರುವ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ದರ್ಶನ್ ಅಭಿಮಾನಿಗಳು ಈ ಪೋಸ್ಟ್‌ಗಳಿಗೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ದರ್ಶನ್ ಜೊತೆಗಿರುವ ವೈಟ್ ಅಂಡ್ ಬ್ಲಾಕ್ ಫೋಟೊವೊಂದನ್ನು ಹಂಚಿಕೊಂಡಿದ್ದು, ಆ ಫೋಟೊವನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಭಾವುಕರಾಗಿದ್ದಾರೆ.

ಇನ್‌ಸ್ಟಾಗ್ರಾಂ ಸ್ಟೋರಿ ಹೈಲೈಟ್ ಏನು?
ದರ್ಶನ್ ಜೈಲು ಸೇರಿದ ದಿನದಿಂದ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಅವರನ್ನು ತಮ್ಮಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಕಷ್ಟದ ಸಮಯದಲ್ಲಿ ಫ್ಯಾನ್ಸ್‌ಗೆ ಪರೋಕ್ಷವಾಗಿ ಮಾಹಿತಿಯನ್ನು ನೀಡುತ್ತಾರೆ. ವಿರೋಧಿಸುವವರಿಗೆ ಖಡಕ್ ಸಂದೇಶವನ್ನು ರವಾನೆ ಮಾಡುತ್ತಾರೆ. ಕೆಲವೊಮ್ಮೆ ದರ್ಶನ್ ನೆನೆದು ಭಾವುಕರಾಗಿ ಪೋಸ್ಟ್ ಮಾಡುತ್ತಾರೆ. ಈಗ ನಟ ದರ್ಶನ್ ಜೊತೆಗಿನ ಹಳೆಯ ಸುಂದರ ಫೋಟೋ ಹಂಚಿಕೊಂಡಿದ್ದಾರೆ.
"ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು"
ವಿಜಯಲಕ್ಷ್ಮಿ ದರ್ಶನ್ ಕೇವಲ ಫೋಟೊ ಹಂಚಿಕೊಂಡಿದ್ದರೆ, ಇಷ್ಟೊಂದು ಟ್ರೆಂಡ್ ಆಗುತ್ತಿರಲಿಲ್ಲವೇನೋ. ಆದರೆ, ಈ ಪೋಟೊದಲ್ಲಿ "ನಗುವ ಮುಖದ ಹಿಂದಿರುವ ನೋವು ದೇವರಿಗಷ್ಟೇ ಗೊತ್ತು" ಎಂದು ಬರೆದಿದ್ದಾರೆ. ಹೀಗಾಗಿ ಈ ಭಾವುಕ ಪೋಸ್ಟ್ ಟ್ರೆಂಡ್ ಆಗುತ್ತಿದೆ. ದರ್ಶನ್ ಅವರ ಸಂಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತಿರುವ ವಿಜಯಲಕ್ಷ್ಮಿ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಂಕಷ್ಟದಲ್ಲಿ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ. ಈ ಕೇಸ್‌ನಲ್ಲಿ ಜಾಮೀನು ಪಡೆಯುವುದಕ್ಕೆ ಶತಪ್ರಯತ್ನ ನಡೆಸಿದ್ದರೂ ಅದು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್‌ವರೆಗೂ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ, ಸುಪ್ರೀಂ ನಿರಾಕರಿಸಿದ್ದು, ಸದ್ಯ ಈ ಕೇಸ್‌ನ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇತ್ತ ಅಭಿಮಾನಿಗಳು ದರ್ಶನ್ ಜೈಲಿನಲ್ಲಿ ಅನುಭವಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
ಕುಟುಂಬಕ್ಕೆ ಅಭಿಮಾನಿಗಳ ಬೆಂಬಲ
ದರ್ಶನ್ ಕುಟುಂಬಕ್ಕೆ ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ಹಾಕುವ ಇನ್‌ಸ್ಟಾಗ್ರಾಂ ಸ್ಟೋರಿಗಳಿಗೆ, ಪೋಸ್ಟ್‌ಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಬಾರಿ ಪೋಸ್ಟ್ ಮಾಡಿದಾಗಲೂ ದರ್ಶನ್ ಫ್ಯಾನ್ಸ್ ಅವರನ್ನು ನೆನೆದು ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಇನ್ನೊಂದು ಕಡೆ ಫ್ಯಾನ್ಸ್ ಕೂಡ ದರ್ಶನ್‌ಗೆ ಆದಷ್ಟು ಬೇಗ ಜಾಮೀನು ಸಿಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದರು. ಆದರೆ, ಕಾನೂನಾತ್ಮಕವಾಗಿ ಜಾಮೀನು ಸಿಗಬೇಕಿದ್ದಂತೆ ಹೋರಾಟ ಮುಂದುವರೆದಿದೆ. ಕಳೆದ ಕೆಲವು ತಿಂಗಳುಗಳಿಂದ ದರ್ಶನ್ ಪರ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಾ, ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ, ಅವರಲ್ಲಿರುವ ನೋವುಗಳು ಕೆಲವೊಮ್ಮೆ ಇಂತಹ ಪೋಸ್ಟ್‌ಗಳ ಮೂಲಕ ಹೊರ ಬೀಳುತ್ತಿರುತ್ತೆ.


Click it and Unblock the Notifications

