Darshan: 'ಮೇ ದುಶ್ಮನ್ ತೋ ನಹೀ' ಎಂದು ಹಾಡಿದ್ದ 'ದಾಸ'; ದರ್ಶನ್ ಫ್ಯಾನ್ಸ್ ಫುಲ್ ಖುಷ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಮಾಸ್ ಹೀರೋ ಆಗಿ ಕಂಡಿದ್ದೇ ಹೆಚ್ಚು. ಬಹುತೇಕ ಎಲ್ಲಾ ಸ್ಟಾರ್ ಹೀರೊಗಳು ಒಂದಲ್ಲ ಒಂದು ಸಿನಿಮಾದಲ್ಲಿ ಒಂದು ಹಾಡನ್ನಾದರೂ ಹಾಡಿದ್ದಾರೆ. ಪುನೀತ್, ಶಿವಣ್ಣ, ಕಿಚ್ಚ ಸುದೀಪ್, ಯಶ್, ಶ್ರೀಮುರಳಿ ಸೇರಿದಂತೆ ಎಲ್ಲರೂ ತಮ್ಮ ಸಿನಿಮಾಗಾಗಿ ಕನಿಷ್ಠ ಪಕ್ಷ ಒಂದು ಹಾಡನ್ನಾದರೂ ಹಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಆದರೆ, ದರ್ಶನ್ ಮಾತ್ರ ಮೈಕ್ ಹಿಡಿದು ಹಾಡಿದ್ದು ತೀರಾ ವಿರಳ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು. ಸಂದರ್ಶನದಲ್ಲೂ ಒಂದೆರಡು ಸಾಲು ಹಾಡುವುದಕ್ಕೆ ಹೇಳಿದ್ದರೂ ದರ್ಶನ್ ಹಾಡಿರಲಿಲ್ಲ. ಆದ್ರೀಗ ಪತ್ನಿ ವಿಜಯಲಕ್ಷ್ಮಿ ದರ್ಶನ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪತಿ ದರ್ಶನ್ ಹಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

Vijayalakshmi shared Darshan singing Main Shayar Toh Nahi song video is trending

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲಿನಲ್ಲಿ ಇದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಕೇವಲ ಈ ಬಗ್ಗೆನೇ ಸುದ್ದಿ ಕೇಳಿ ಬೇಸರಗೊಂಡಿದ್ದ ಅವರ ಅಭಿಮಾನಿಗಳಿಗಾಗಿ ವಿಜಯಲಕ್ಷ್ಮಿ ದರ್ಶನ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ.

Also Read
OTT Releases This Week: ದರ್ಶನ್ 'ಡೆವಿಲ್' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್
OTT Releases This Week: ದರ್ಶನ್ 'ಡೆವಿಲ್' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಚಿತ್ರಗಳ ಲಿಸ್ಟ್

ದರ್ಶನ್ ತಮ್ಮ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಅದರಲ್ಲೂ ಈಗ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳು ಕೂಡ ಅವರ ಸಿನಿಮಾಗಳನ್ನ ನೋಡದೆ ಕಂಗಾಲಾಗಿದ್ದಾರೆ. ಹೀಗಾಗಿ ಬೇಸರದಲ್ಲಿ ಅವರ ಸೆಲೆಬ್ರೆಟಿಗಳಿಗಾಗಿ ಮನ ತಣಿಸುವಂತಹ ಒಂದು ಅಪರೂಪದ ಸುಂದರ ದೃಶ್ಯವನ್ನು ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿದ್ದಾರೆ. ಅದು ದರ್ಶನ್ ಹಾಡುತ್ತಿರುವ ಅಪರೂಪದ ವಿಡಿಯೋ. ಅದೂ ಹಿಂದಿ ಹಾಡು..

ವಿಜಯಲಕ್ಷ್ಮಿ ದರ್ಶನ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ದರ್ಶನ್ ಮೈಕ್ ಹಿಡಿದು ಹಾಡುತ್ತಿದ್ದಾರೆ. ಬಾಲಿವುಡ್‌ನ ಸಾರ್ವಕಾಲಿಕ ಕ್ಲಾಸಿಕ್ ಚಿತ್ರ 'ಬಾಬಿ'ಯ ಪ್ರಸಿದ್ಧ ಗೀತೆ "ಮೈ ಶಾಯರ್ ತೋ ನಹೀ" (Main Shayar To Nahin) ಅನ್ನೋ ಸಾಂಗ್ ಅದು. ಇದು ಯಾವ ಸಂದರ್ಭದಲ್ಲಿ ಹಾಡಿದ್ದು ಅನ್ನೋ ಬಗ್ಗೆ ಮಾಹಿತಿಯಿಲ್ಲ. ಆದರೆ, ಸಮಾರಂಭವೊಂದರಲ್ಲಿ ದರ್ಶನ್ ಭಾವಪೂರ್ಣವಾಗಿ ಹಾಡುತ್ತಿದ್ದರೆ, ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಶಿಳ್ಳೆ ಹಾಕಿ, ಚಪ್ಪಾಳೆಗಳ ಸುರಿಮಳೆಗೈದು ಸಂಭ್ರಮಿಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಇದ್ದಕ್ಕಿದ್ದಂತೆ ಈ ಅಪೂರ್ವ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರೊಂದಿಗೆ ಹಳೆಯ ಸವಿನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಕಷ್ಟದ ದಿನಗಳಲ್ಲೂ ಗಂಡನ ಬೆನ್ನೆಲುಬಾಗಿ ನಿಲ್ಲುವ ವಿಜಯಲಕ್ಷ್ಮಿ ಅವರ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಭಿಮಾನಿಗಳು ವಿಡಿಯೋ ಭಿನ್ನ ವಿಭಿನ್ನವಾಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಡಿ ಬಾಸ್ ಓನ್ ವಾಯ್ಸ್, ಕೇಳಿ ಆನಂದಿಸಿ" ಎಂದಿದ್ದಾರೆ. ಇನ್ನೊಬ್ಬರು "ಎಷ್ಟು ದಿನ ಆಗಿತ್ತು ಬಾಸ್ ವಾಯ್ಸ್ ಕೇಳಿ" ಎಂದು ಕಾಮೆಂಟ್ ಮಾಡಿದ್ದಾರೆ. "ಡಿ-ಬಾಸ್ ಕೇವಲ ಬೆಳ್ಳಿಪರದೆಯ ಒಡೆಯನಷ್ಟೇ ಅಲ್ಲ, ಸುಂದರವಾಗಿ ಹಾಡುವ ಕಲಾ ಸರಸ್ವತಿಯ ಪುತ್ರ" ಎಂದು ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದರ್ಶನ್ ಅವರ ಈ ಹಳೆಯ ಗಾಯನದ ವಿಡಿಯೋ ಅಭಿಮಾನಿಗಳ ಹೃದಯಕ್ಕೆ ಖುಷಿಯನ್ನು ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಅಂತೂ ಸಖತ್ ಸೌಂಡ್ ಮಾಡುತ್ತಿದ್ದು, ದರ್ಶನ್ ಅಭಿಮಾನಿಗಳು ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

English summary
Vijayalakshmi shared Darshan singing Main Shayar Toh Nahi song video is trending.
Read more about: darshan song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X