»   » ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ

ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ

Posted By:
Subscribe to Filmibeat Kannada

ಚಿತ್ರರಂಗದವರು ರೈತರ ಕಷ್ಟಕ್ಕೆ ಸ್ಪಂದಿಸುವುದಿಲ್ಲ, ಅವರಿಗೆ ಸಾಮಾಜಿಕ ಕಾಳಜಿ ಇಲ್ಲ ಅಂಬ ಆರೋಪ ಈ ಹಿಂದೆಯಿಂದಲೂ ಕೇಳಿ ಬರುತ್ತಿದೆ. ಆದ್ರೆ, ಈ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್, ಮಾತಿನಲ್ಲಿ ಹೇಳದೆ ಸಾಮಾಜಿಕ ಕಾರ್ಯಗಳನ್ನ ಮಾಡಿ ತೋರಿಸುತ್ತಿದ್ದಾರೆ.[ದಿಢೀರ್ ಅಂತ ಚಾನಲ್ ಗಳಿಗೆ ಬರಲು ಯಶ್ ಒಪ್ಪಿದ್ಹೇಗೆ? 'ಆ ಹತ್ತು' ನಿಮಿಷದಲ್ಲಿ ಏನಾಯ್ತು?]

ಹೀಗಾಗಿ, ರೈತರ ಜೊತೆ ಸಂವಾದ ನಡೆಸುವುದಕ್ಕಾಗಿ ಹೋದ ಯಶ್ ವಿರುದ್ಧ ಯಾದಗಿರಿಯ ಅಭಿಮಾನಿಗಳು ಆಕ್ರೋಶಗೊಂಡ ಘಟನೆ ನಿನ್ನೆ (ಫೆಬ್ರವರಿ 27) ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಕೆಲವು ಮಂದಿ ಯಶ್ ಅವರ ಕಾರಿನ ಗಾಜನ್ನ ಪೀಸ್ ಪೀಸ್ ಮಾಡಿದ್ದಾರೆ. ಅಷ್ಟಕ್ಕೂ, ಯಾದಗಿರಿಯಲ್ಲಿ ಆಗಿದ್ದೇನು? ಮುಂದೆ ಓದಿ....

ಯಶ್ ಅಭಿಮಾನಿಗಳಿಂದ ಗಲಾಟೆ

ಫೆಬ್ರವರಿ 27 ರಂದು ನಟ ಯಶ್ ಯಾದಗಿರಿ ಜಿಲ್ಲೆಯ ಸುರುಪುರಕ್ಕೆ ರೈತರ ಜೊತೆ ಸಂವಾದ ನಡೆಸಲು ಆಗಮಿಬೇಸಕಿತ್ತು. ಆದ್ರೆ, ಹೇಳಿದ ಸಮಯಕ್ಕೆ ಬಾರದ ಕಾರಣ ಸಮಾವೇಶಕ್ಕೆ ಬಂದಿದ್ದ ಅಭಿಮಾನಿಗಳ ಕೋಪಕ್ಕೆ ನಟ ಯಶ್ ಗುರಿಯಾಗಬೇಕಾಯಿತು.[ಆ ರಂಗನಾಥ್ ಬಿಟ್ಟು 'ಈ' ರಂಗನಾಥ್ ಜೊತೆ ಕುಳಿತ ನಟ ಯಶ್.!]

ಮಧ್ಯಾಹ್ನ ಬರಬೇಕಿತ್ತು!

ಯಾದಗಿರಿಯ ಸುರುಪುರಕ್ಕೆ ನಟ ಯಶ್ ಮಧ್ಯಾಹ್ನ 2 ಗಂಟೆಗೆ ಬರಬೇಕಿತ್ತು. ಆದ್ರೆ, ಯಶ್ ಮಧ್ಯಾಹ್ನ ಬರಲಿಲ್ಲ. ಹೀಗಾಗಿ, ಸುಡು ಬೀಸಿಲಿನಲ್ಲಿ ಯಶ್ ಗಾಗಿ ಕಾಯುತ್ತಿದ್ದ ಅಭಿಮಾನಿಗಳ ಕೋಪ ನೆತ್ತಿಗೇರಿತ್ತು.[ಯಶ್ ಕರೆದ ಜಾಗಕ್ಕೆ ಚರ್ಚೆಗೆ ಬರಲ್ಲ ಅಂದ ಎಚ್.ಆರ್.ರಂಗನಾಥ್]

ರಾತ್ರಿ ಬಂದ ರಾಕಿಂಗ್ ಸ್ಟಾರ್

ಮಧ್ಯಾಹ್ನ 2 ಗಂಟೆಗೆ ಬರಬೇಕಿದ್ದ ಯಶ್ ರಾತ್ರಿ 9 ಗಂಟೆಗೆ ಯಾದಗಿರಿಗೆ ಬಂದರು. ಬಂದು ಕೇವಲ 10 ನಿಮಿಷದಲ್ಲಿ ಭಾಷಣ ಮುಗಿಸಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಅಭಿಮಾನಿಗಳು ವೇದಿಕೆ ಮುಂಭಾಗಕ್ಕೆ ಮುನ್ನುಗ್ಗಿ ಚೇರ್ ಗಳನ್ನ ಎತ್ತಿ ಬೀಸಾಡಿ ದಾಂಧಲೆ ನಡೆಸಿದರು.

'ಮಾಸ್ಟರ್ ಪೀಸ್'ನ ಕಾರ್ ಗ್ಲಾಸ್ ಪೀಸ್ ಪೀಸ್

ಈ ವೇಳೆ ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದ ಜನರು, ಯಶ್ ಅವರ ದುಬಾರಿ ಕಾರನ್ನ ಜಖಂಗೊಳಿಸಿದರು. ಕಲ್ಲಿನಿಂದ ಕಾರಿನ ಮೇಲೆ ದಾಳಿ ನಡೆಸಿದ ಅಭಿಮಾನಿಗಳು ಕಾರಿನ ಗಾಜನ್ನ ಪುಡಿ ಪುಡಿ ಮಾಡಿದರು.

ಪೋಲಿಸರ ಸಹಾಯದಿಂದ ವಾಪಸ್ಸಾದ ಯಶ್

ಈ ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಪರಿಸ್ಥಿತಿ ನಿಯಂತ್ರಣ ತಪ್ಪಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ರು. ನಂತರ ನಟ ಯಶ್ ಅವರನ್ನ ಪೊಲೀಸರ ಭದ್ರತೆಯಲ್ಲಿ ಅಲ್ಲಿಂದ ಕಳುಹಿಸಿಕೊಟ್ಟರು.[ಪ್ರಜಾ ಟಿವಿಯ 'ಖಾಲಿ ಕುರ್ಚಿ' ಪ್ರೋಗ್ರಾಂಗೆ ಯಶ್ ಕೊಟ್ಟ ಟ್ವಿಸ್ಟ್ ಏನು?]

ರಾಜ್ಯಾದ್ಯಂತ ಬರ ಪ್ರವಾಸದಲ್ಲಿ ಯಶ್

ನಟ ಯಶ್, ರಾಜ್ಯಾದ್ಯಂತ ಬರ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ, ಕೊಪ್ಪಳ, ಕಲುಬಿರ್ಗಿ, ಬೆಳಗಾವಿ, ವಿಜಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ಕೆರೆ ಉದ್ಧಾರಕ್ಕಾಗಿ ಯೋಜನೆ

ಉತ್ತರ ಕರ್ನಾಟಕದ 400 ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಮಹತ್ತರ ಯೋಜನೆಗೆ ಕೈಹಾಕಿರುವ ನಟ ಯಶ್. ಕೊಪ್ಪಳದ ತಲ್ಲೂರು ಕೆರೆಗೆ 4 ಕೋಟಿ ವೆಚ್ಚದಲ್ಲಿ ಯೋಜನೆ ಮಾಡುತ್ತಿದ್ದಾರೆ.

'ಯಶೋಮಾರ್ಗ'ದಿಂದ ಒಳ್ಳೆ ಕೆಲಸಗಳು

ನಟ ಯಶ್ ಸಾರಥ್ಯದ 'ಯಶೋಮಾರ್ಗ ಫೌಂಡೇಶನ್' ಮೂಲಕ ವಿವಿಧ ಬಗೆಯ ಸಮಾಜಮುಖಿ ಕಾರ್ಯಕ್ರಮಗಳ ಯೋಜನೆ ರೂಪಿಸಿದ್ದು, ಒಂದರ ಹಿಂದೆ ಒಂದರಂತೆ ಕಾರ್ಯರೂಪಕ್ಕೆ ತರುವ ಪ್ರಯತ್ನದಲ್ಲಿದ್ದಾರೆ.

English summary
Kannada Film Actor Yash car has been vandalised by his fans as he came late at 9 pm instead of 2 pm for discussion with farmers in Yadagiri on February 27.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada