»   » ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ

ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್, ಕೇವಲ ಸಿನಿಮಾಗಳಲ್ಲಿ ಮಾತ್ರ ಹೀರೋ ಆಗಿಲ್ಲ. ತೆರೆ ಹಿಂದೆನೂ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸದಾ ಸಿನಿಮಾಗಳ ಮೂಲಕ ಜನರಿಗೆ ಮನರಂಜನೆ ನೀಡುವ ಯಶ್, ಇದೀಗ ಸಮಾಜಮುಖಿ ಕೆಲಸಗಳ ಮೂಲಕ ಜನಾಭಿಮಾನ ಗಳಿಸಿಕೊಂಡಿದ್ದಾರೆ.[ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ]

'ಯಶೋಮಾರ್ಗ ಫೌಂಡೇಶನ್' ಮೂಲಕ ರೈತರಿಗಾಗಿ ಒಳ್ಳೆ ಕೆಲಸಗಳನ್ನ ಮಾಡುತ್ತೇವೆ ಎಂದಿದ್ದ 'ಮಾಸ್ಟರ್ ಪೀಸ್', ಹೇಳಿದಂತೆ ಈಗ ಮಹತ್ತರ ಕಾರ್ಯವೊಂದಕ್ಕೆ ಚಾಲನೆ ಕೊಟ್ಟಿದ್ದು, ಉತ್ತರ ಕರ್ನಾಟಕ ಭಾಗದ ರೈತರಿಗೆ ನೆರವಾಗಿದ್ದಾರೆ. ಈ ಒಳ್ಳೆ ಕೆಲಸಕ್ಕೆ ಪತ್ನಿ ನಟಿ ರಾಧಿಕಾ ಪಂಡಿತ್ ಕೂಡ ಜೊತೆಯಾಗಿರುವುದು ವಿಶೇಷ. ಮುಂದೆ ಓದಿ....

ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

'ಯಶೋಮಾರ್ಗ ಫೌಂಡೇಶನ್' ಮೂಲಕ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಕೆರೆಗಳನ್ನ ಅಭಿವೃದ್ದಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ, ತಮ್ಮ ಮೊದಲ ಹೆಜ್ಜೆಯಾಗಿ ಕೊಪ್ಪಳ ಜಿಲ್ಲೆಯ ತಲ್ಲೂರು ಕೆರೆಯನ್ನ ಆಯ್ಕೆ ಮಾಡಿಕೊಂಡಿದ್ದು, ಕೆರೆ ಹೂಳೆತ್ತುವ ಕಾರ್ಯಕ್ಕೆ ರಾಕಿಂಗ್ ಸ್ಟಾರ್ ದಂಪತಿ ಚಾಲನೆ ಕೊಟ್ಟಿದ್ದಾರೆ.[ಯಾದಗಿರಿಯಲ್ಲಿ ನಿನ್ನೆ ಆಗಿದ್ದೇನು.? ನಟ ಯಶ್ ಬಾಯಿಂದ ಬಂದ ತಪ್ಪು-ಒಪ್ಪು]

ಭೂಮಿ ಪೂಜೆ ನೆರೆವೇರಿಸಿದ ಯಶ್-ರಾಧಿಕಾ

ನಟ ಯಶ್ ಅವರು ಹಮ್ಮಿಕೊಂಡಿರುವ ಮಹತ್ತರ ಕಾರ್ಯಕ್ಕೆ ರಾಕಿಂಗ್ ಸ್ಟಾರ್ ದಂಪತಿ ಚಾಲನೆ ಕೊಟ್ಟಿದ್ದು, ಫೆಬ್ರವರಿ 28 ರಂದು, ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಭೂಮಿ ಪೂಜೆ ನೆರೆವೇರಿಸಿದರು.

'ತಲ್ಲೂರು' ಕೆರೆಯಲ್ಲಿ ಕೆಲಸ ಶುರು

ಯಶ್ ಮತ್ತು ರಾಧಿಕಾ ಪಂಡಿತ್ ಕೆರೆ ಹೂಳೆತ್ತುವ ಕೆಲಸಕ್ಕೆ ಭೂಮಿ ಪೂಜೆ ಮಾಡಿದ ನಂತರ, ಕೆರೆಯಲ್ಲಿ ಕೆಲಸ ಕೂಡ ಶುರುವಾಗಿದೆ. ಜೆಸಿಬಿಗಳು ಕೆರೆ ಅಂಗಳಕ್ಕೆ ಇಳಿದು ಹೂಳೆತ್ತುತ್ತಿವೆ. ಇನ್ನು 'ಯಶೋಮಾರ್ಗ ಫೌಂಡೇಶನ್' ಸಂಸ್ಥೆ ಕೆರೆಯಲ್ಲಿ ಬೀಡುಬಿಟ್ಟಿದ್ದು, ಕಂಪ್ಲೀಟ್ ಕೆಲಸ ಮುಗಿಯುವರೆಗೂ ಅಲ್ಲೆ ಇರಲಿದೆಯಂತೆ.

4 ಕೋಟಿ ವೆಚ್ಚದ ಯೋಜನೆ

ಅಂದ್ಹಾಗೆ, ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನಲ್ಲಿರುವ ತಲ್ಲೂರು ಕೆರೆ ಯೋಜನೆಗೆ 4 ಕೋಟಿಯನ್ನ ನಟ ಯಶ್ ಮೀಸಲಿಟ್ಟಿದ್ದಾರೆ. ಈ ಯೋಜನೆಯಿಂದ ಸುಮಾರು 40 ಗ್ರಾಮಗಳಿಗೆ ನೀರಿನ ಸಮಸ್ಯೆ ತಪ್ಪುತ್ತೆ. ಜಾನುವಾರುಗಳಿಗೆ ಸಹಾಯವಾಗುತ್ತೆ. ಕೆರೆಯಲ್ಲಿ ಸುಮಾರು 1.5 ಮೀಟರ್ ಹೂಳು ತೆಗೆಯುವುದು, 4000 ಕೋಟಿ ಲೀಟರ್ ನೀರು ಸಂಗ್ರಹ ಮಾಡುವುದು ಯೋಜನೆಯ ಉದ್ದೇಶ.

English summary
Kannada’s Rocking Star Yash and along with wife Radhika Pandit Performed the ground breaking ceremony and launched the water conservation Programme through his Yashomarga Trust. to Provide water to 40 villages in Koppal district in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada