Toxic Tabaahi Song: "ತಬಾಹಿ" ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಹೇಗಿದೆ ರೆಸ್ಪಾನ್ಸ್? ಸ್ವಲ್ಪ ಹಂಗೆ.. ಸ್ವಲ್ಪ ಹಿಂಗೆ!
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷೆಯ ಸಿನಿಮಾ 'ಟಾಕ್ಸಿಕ್'. ಸಿನಿಮಾ ಬಿಡುಗಡೆಗೆ ಸನಿಹವಾಗುತ್ತಿದ್ದಂತೆ ಪ್ರಚಾರವನ್ನು ಅದ್ಧೂರಿಯಾಗಿ ಶುರು ಮಾಡಿದೆ. ಆದರೆ, ಅದಕ್ಕೂ ಮುನ್ನ ಸಿನಿಮಾದ "ತಬಾಹಿ" ಹಾಡನ್ನು ನೋಡುವ ಕುತೂಹಲ ಅವರ ಅಭಿಮಾನಿಗಳಿಗೆ ಇತ್ತು. ಲಿರಿಕಲ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಚರ್ಚೆಗಳನ್ನು ಹುಟ್ಟಾಕಿತ್ತು.
ಯಶ್ ಹಾಗೂ ಕಿಯಾರಾ ಅಡ್ವಾಣಿ ಜೋಡಿಯ ಮೇಲೆ ಚಿತ್ರೀಕರಣಗೊಂಡಿರುವ "ತಬಾಹಿ" ಹಾಡು ಬಿಡುಗಡೆಗೂ ಮುನ್ನ ಪಾಸಿಟಿವ್ ಹಾಗೂ ನೆಗೆಟಿವ್ ಆಗಿ ಚರ್ಚೆಯನ್ನು ಹುಟ್ಟಾಕಿತ್ತು. ಬಾಲಿವುಡ್‌ನ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಕಂಪೋಸ್ ಮಾಡಿರುವ ಈ ಹಾಡು ಯಶ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿತ್ತು. ಆದರೆ, ಅದು ಕೆಲವರಿಗೆ ನೆಗೆಟಿವ್ ಕಮೆಂಟ್ ಕೂಡ ಬಂದಿತ್ತು. ಈಗ ವಿಡಿಯೋ ಸಾಂಗ್ ರಿಲೀಸ್ ಆಗಿದ್ದು, ಅದನ್ನು ನೋಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಹೇಗಿವೆ? ತಿಳಯುವುದಕ್ಕೆ ಮುಂದೆ ಓದಿ..

ತಬಾಹಿ ತೀವ್ರವಾಗಿ ಗೀಳಿಡುವ ಹಾಡು
"ತಬಾಹಿ ಹಾಡನ್ನು ಸುಂದರವಾಗಿ ಚಿತ್ರಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ತಬಾಹಿ ಹಾಡು ವಿಜ್ಯುವಲಿ ಅದ್ಭುತವಾಗಿದೆ. ಯಶ್, ಕಿಯಾರಾ ಅಡ್ವಾಣಿ ಅವರ ಕೆಮಿಸ್ಟ್ರಿ, ಶ್ರೀಮಂತವಾಗಿರುವ ದೃಶ್ಯಗಳು ಹಾಡಿನ ಮೇಲೆ ದೊಡ್ಡ ಪರಿಣಾಮವನ್ನು ಬೀರಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಬಾಹಿ ಹಾಡು ಸರ್ವಕಾಲಕ್ಕೂ ಮೆಚ್ಚುವ ಲವ್ ಸಾಂಗ್ ಆಗಲಿದೆ. ಇದು ತೀವ್ರವಾದ ಗೀಳಿನ, ಎಲ್ಲವನ್ನೂ ಇದು ತೀವ್ರವಾದ ಗೀಳಿನ, ಎಲ್ಲವನ್ನೂ ಸೇವಿಯುವ ಪ್ರೀತಿಯನ್ನು ಅನ್ವೇಷಣೆಗೆ ಒಡ್ಡುತ್ತದೆ. ಪ್ರತಿಯೊಂದು ಭಾವನೆಯನ್ನು ಪ್ರತಿಧ್ವನಿಸುವಂತೆ ಮಾಡುತ್ತದೆ." ಎಂದು ನೆಟ್ಟಿಗರೊಬ್ಬರು ವಿಮರ್ಶೆ ಮಾಡಿದ್ದಾರೆ.
ಕಿಯಾರಾ-ಯಶ್ ಕೆಮಿಸ್ಟ್ರಿ ಅದ್ಭುತ
" ತಬಾಹಿ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಮತ್ತು ಯಶ್ ನಿಜಕ್ಕೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಕಿಯಾರಾ ಹಾಗೂ ಯಶ್ ಕೆಮಿಸ್ಟ್ರಿ ನಿಜಕ್ಕೂ ಅದ್ಭುತವಾಗಿ ಇದೆ. ಆದರೆ ಇದು ಇಲ್ಲಿಗೆ ಮುಗಿದಿಲ್ಲ. ಮುಂದಿನ ಹಾಡಿನಲ್ಲಿ ತಾರಾ ಸುತಾರಿಯಾ ಹಾಗೂ ಯಶ್ ಕೆಮಿಸ್ಟ್ರಿ ಬರುವವರೆಗೂ ಕಾಯಿರಿ." ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ನಾಡಿಯಾಗೆ ರಾಯ ಮೋಸ ಮಾಡುತ್ತಾನಾ?
"ಟಾಕ್ಸಿಕ್ ಸ್ಟೋರಿ ಒಗಟಿನಂತೆ ಇದೆ. ನಾಡಿಯಾಗೆ ರಾಯ ಮೋಸ ಮಾಡುತ್ತಾನಾ? ಇಲ್ಲಾ ನಾಡಿಯಾ ಸತ್ತ ಮೇಲೆ ರಾಯ ಗೀಳಿಗೆ ಬೀಳುತ್ತಾನಾ? ರಾಯ ಮತ್ತು ನಾಡಿಯಾ ಮಗ ಟಿಕೆಟ್. ಹೀಗೆ ಕ್ಲೈಮ್ಯಾಕ್ಸ್‌ನಲ್ಲಿ ಟಿಕೆಟ್ Vs ರಾಯ ಆಗಲಿದೆ" ಎಂದು ಇನ್ನೊಬ್ಬರು ತಬಾಹಿ ಹಾಡು ನೋಡಿದ ಬಳಿಕ 'ಟಾಕ್ಸಿಕ್' ಸಿನಿಮಾದ ಸ್ಟೋರಿ ಬಗ್ಗೆ ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಮೇಡ್ ಫಾರ್ ಈಚ್ ಅದರ್
"ಟಾಕ್ಸಿಕ್ ಸಿನಿಮಾ ತಬಾಹಿ ಸಾಂಗ್ ಅದ್ಭುತವಾಗಿದೆ. ಆದರೆ, ಯಶ್ ಹಾಗೂ ಕಿಯಾರಾ ಅವರ ಜೋಡಿ ಇನ್ನೂ ಹಾಟ್ ಆಗಿದೆ. ಈ ಹಾಡನ್ನು ನೋಡಿದರೆ ಇಬ್ಬರೂ ಮೇಡ್ ಫಾರ್ ಈಚ್ ಅದರ್ ಅಂತ ಅನಿಸುತ್ತೆ. ಈ ಹಾಡನ್ನು ನೋಡಿದ್ಮೇಲೆ ಇಬ್ಬರೂ ಥಿಯೇಟರ್‌ನಲ್ಲಿ ಇನ್ನೂ ಅದ್ಭುತವಾಗಿ ಕಾಣಿಸಬಹುದು" ಎಂದು ಮತ್ತೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಯಶ್ ತನ್ನನ್ನು ರಣ್‌ಬೀರ್ ಅಂದ್ಕೊಂಡ್ನಾ?
"ತಬಾಹಿ ಹಾಡನ್ನು ವೀಕ್ಷಿಸಿದ ಬಳಿಕ ಯಶ್ ಒಳಗೆ ಸಂದೀಪ್ ರೆಡ್ಡಿ ವಂಗಾ ಹಾಗೂ ರಣ್‌ಬೀರ್ ಕಪೂರ್ ಎಂಬ ಭೂತ ಹೊಕ್ಕಿದೆ. ಹೀಗಾಗಿ ಅವರು 'ಟಾಕ್ಸಿಕ್'ನಲ್ಲಿ ಕಾಪಿ ಮಾಡಿದ್ದಾರೆ. ಆದರೆ, ಯಶ್ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವನು ರಣ್‌ಬೀರ್.. ಇವನು ಯಶ್" ಎಂದು ವಿವಾದಾತ್ಮಕ ಕ್ರಿಟಿಕ್ ಕೆಆರ್‌ಕೆ ಕಾಮೆಂಟ್ ಮಾಡಿದ್ದಾರೆ.
ಯಶ್ - ಕಿಯಾರಾ ಕೆಮಿಸ್ಟ್ರಿ ಬೆಂಕಿ
"ಯಶ್ - ಕಿಯಾರಾ ಕೆಮಿಸ್ಟ್ರಿ ಅಂತೂ ಬೆಂಕಿ. ಪ್ರತಿ ಫ್ರೇಮ್ ಕ್ಲಾಸ್, ಪ್ರತಿ ಲುಕ್ ಮಾಸ್, ರೊಮ್ಯಾನ್ಸ್ ಮಾತ್ರ ಪೀಕ್ಸ್.. "ತಬಾಹಿ" ಅಂದ್ರೆ ಕೇವಲ ಸಾಂಗ್ ಅಲ್ಲ... ಫುಲ್ ಫೀಲ್ಸ್, ಫುಲ್ ವೈಬ್ಸ್" ಎಂದು ಇನ್ನೊಂದು ಪೇಜ್‌ನಲ್ಲಿ ಹೇಳಿದೆ.


Click it and Unblock the Notifications
