»   » ಯೋಗೀಶ್ ದ್ವಾರಕೀಶ್ ನಿರ್ಮಾಣದಲ್ಲಿ 'ರೋಗ್' ಇಶಾನ್ 2ನೇ ಚಿತ್ರ

ಯೋಗೀಶ್ ದ್ವಾರಕೀಶ್ ನಿರ್ಮಾಣದಲ್ಲಿ 'ರೋಗ್' ಇಶಾನ್ 2ನೇ ಚಿತ್ರ

Posted By:
Subscribe to Filmibeat Kannada

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ 'ರೋಗ್' ಚಿತ್ರದ ಮೂಲಕ ಸ್ಯಾಂಡಲ್ ವುಡ್‌ ಗೆ ಪಾದಾರ್ಪಣೆ ಮಾಡಿದ ಇಶಾನ್ ಈಗ ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇಶಾನ್ ಅಭಿನಯದ ಎರಡನೇ ಚಿತ್ರವನ್ನು ದ್ವಾರಕೀಶ್ ರವರ ಪುತ್ರ ಯೋಗೀಶ್ ದ್ವಾರಕೀಶ್ ನಿರ್ಮಾಣ ಮಾಡಲಿದ್ದು, ಈ ಚಿತ್ರಕ್ಕೆ ಟೈಟಲ್ ಸಹ ಫಿಕ್ಸ್ ಆಗಿದೆ.['ರೋಗ್' ಇಶಾನ್ ಎರಡನೇ ಸಿನಿಮಾ ರಿಮೇಕ್ ಅಂತೆ?]

ನಟ ಇಶಾನ್ ಸಹಿ ಹಾಕಿರುವ ಯೋಗೀಶ್ ದ್ವಾರಕೀಶ್ ಚಿತ್ರಕ್ಕೆ 'ಅಮ್ಮ ಐ ಲವ್ ಯು' ಎಂದು ಹೆಸರಿಡಲಾಗಿದೆ. ಆದರೆ ಇದೇ ಟೈಟಲ್ ಅಂತಿಮ ಎನ್ನುವ ಬಗ್ಗೆ ಖಚಿತತೆ ಇಲ್ಲ. ಈ ಚಿತ್ರಕ್ಕೆ 'ಆಟಗಾರ' ಮತ್ತು ಪ್ರಸ್ತುತ ಬಿಡುಗಡೆಗೆ ಸಜ್ಜಾಗಿರುವ 'ಆಕೆ' ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ರವರು ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ತಿಳಿದಿದೆ.

Yogish Dwarakish to produce Ishan's second film

ಈ ಚಿತ್ರವನ್ನು ಅಧಿಕೃತವಾಗಿ ದ್ವಾರಕೀಶ್ ರವರ 75ನೇ ಹುಟ್ಟುಹಬ್ಬ ದಿನದಂದು ಪ್ರಕಟಣೆ ಮಾಡಲಾಗುತ್ತದೆ. 'ಚೌಕ' ಚಿತ್ರದ ಯಶಸ್ಸಿನ ನಂತರ ದ್ವಾರಕೀಶ್ ಪ್ರೊಡಕ್ಷನ್‌ ನಲ್ಲಿ ನಿರ್ಮಾಣ ಆಗಲಿರುವ 51ನೇ ಚಿತ್ರ ಇಶಾನ್ ಅಭಿನಯದ ಸಿನಿಮಾ ಆಗಲಿದೆ.[ವಿಮರ್ಶೆ: 'ಅಪ್ಪು' ನಂತರ ಅಪ್ಪಿಕೊಳ್ಳಬಹುದಾದ ಪುರಿ'ಯ ಖಡಕ್ 'ರೋಗ್']

ಅಂದಹಾಗೆ ಇಶಾನ್ ಅಭಿನಯಿಸಲಿರುವ 'ಅಮ್ಮ ಐ ಲವ್ ಯು' ಚಿತ್ರ ತಮಿಳಿನ 'ಪಿಚ್ಚೈಕಾರನ್' ರಿಮೇಕ್ ಚಿತ್ರ. ಸದ್ಯದಲ್ಲಿ ಇಶಾನ್ ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರವರ ತೆಲುಗು ಚಿತ್ರವೊಂದರಲ್ಲೂ ಅಭಿನಯಿಸಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

English summary
C R Manohar's nephew Ishan has signed a new film with Dwarkish Films. Yogish Dwarkish will produce the new film which is likely to be title 'Amma I Love You'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada