»   » 'ರೋಗ್' ಇಶಾನ್ ಎರಡನೇ ಸಿನಿಮಾ ರಿಮೇಕ್ ಅಂತೆ?

'ರೋಗ್' ಇಶಾನ್ ಎರಡನೇ ಸಿನಿಮಾ ರಿಮೇಕ್ ಅಂತೆ?

Posted By:
Subscribe to Filmibeat Kannada

ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಸಹೋದರ ಇಶಾನ್ ರವರು ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದವರು.[ವಿಮರ್ಶೆ: 'ಅಪ್ಪು' ನಂತರ ಅಪ್ಪಿಕೊಳ್ಳಬಹುದಾದ ಪುರಿ'ಯ ಖಡಕ್ 'ರೋಗ್']

ಇಶಾನ್ ರನ್ನು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಪರಿಚಯಿಸಲು ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ ಸಿನಿಮಾ ಬಾಕ್ಸ್ ಆಫೀಸ್ ನಿರೀಕ್ಷೆಯನ್ನು ಮುಟ್ಟುವಲ್ಲಿ ವಿಫಲವಾಯಿತು. ಆದರೆ ಇಶಾನ್ ಮೊದಲ ಚಿತ್ರದಲ್ಲೇ ತಮ್ಮ ನಟನೆ ಹಾಗೂ ಆಕ್ಷನ್ ದೃಶ್ಯಗಳಿಂದ ಸಿನಿ ಪ್ರಿಯರ ಗಮನಸೆಳೆದಿದ್ದಾರೆ. ಅಂದಹಾಗೆ ಇಶಾನ್ ಅಭಿನಯದಲ್ಲಿ ಸದ್ಯದಲ್ಲೇ ಮತ್ತೊಂದು ಸಿನಿಮಾ ಸೆಟ್ಟೇರಲಿದ್ದು, ಈ ಚಿತ್ರ ತಮಿಳು ಚಿತ್ರದ ರಿಮೇಕ್ ಆಗಿರಲಿದೆಯಂತೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಗಾಗಿ ಮುಂದೆ ಓದಿ..

ತಮಿಳು ರಿಮೇಕ್ ಚಿತ್ರದಲ್ಲಿ ಇಶಾನ್ ಅಭಿನಯ

ಎರಡನೇ ಚಿತ್ರದಲ್ಲಿ ಅಭಿನಯಿಸಲು ಉತ್ಸುಕರಾಗಿರುವ 'ರೋಗ್' ಇಶಾನ್ ಈಗ ಕತೆಗಳನ್ನು ಕೇಳುತ್ತಿದ್ದಾರಂತೆ. ಈಗಾಗಲೇ ಕೇಳಿರುವ ಕತೆಗಳಲ್ಲಿ ತಮಿಳಿನ ಸೂಪರ್ ಹಿಟ್ ಚಿತ್ರವೊಂದರ ಕತೆಯನ್ನು ಓಕೆ ಮಾಡಿದ್ದು, ಅದರ ರಿಮೇಕ್ ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ. ಯಾವುದು ಆ ಸಿನಿಮಾ?...

'ಪಿಚ್ಚೈಕಾರನ್' ರಿಮೇಕ್ ಚಿತ್ರದಲ್ಲಿ ಇಶಾನ್

2016 ರಲ್ಲಿ ತೆರೆಕಂಡ ಶಶಿ ನಿರ್ದೇಶನದ ತಮಿಳಿನ ಸೂಪರ್ ಹಿಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಪಿಚ್ಚೈಕಾರನ್' ರಿಮೇಕ್ ಚಿತ್ರದಲ್ಲಿ ಇಶಾನ್ ನಟಿಸಲಿದ್ದಾರಂತೆ. ಅಂದಹಾಗೆ ಈ ಸಿನಿಮಾದಲ್ಲಿ ವಿಜಯ್ ಆಂಟೋನಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಅಲ್ಲದೇ ಇದೇ ಸಿನಿಮಾವನ್ನು 'ಬಿಚಗಾಡು' ಟೈಟಲ್ ನಲ್ಲಿ ತೆಲುಗಿಗೆ ಡಬ್ ಮಾಡಿ 2016 ರ ಮೇ ನಲ್ಲಿ ಬಿಡುಗಡೆ ಮಾಡಲಾಗಿತ್ತು.

ರಿಮೇಕ್ ಹಕ್ಕು ಯೋಗೀಶ್ ದ್ವಾರಕೀಶ್ ಬಳಿ ಇದೆ

ಅಂದಹಾಗೆ 'ಪಿಚ್ಚೈಕಾರನ್' ರಿಮೇಕ್ ಹಕ್ಕನ್ನು ಕಳೆದ ಜನವರಿ ತಿಂಗಳಲ್ಲಿಯೇ ದ್ವಾರಕೀಶ್ ರವರ ಪುತ್ರ ಯೋಗೀಶ್ ದ್ವಾರಕೀಶ್ ಖರೀದಿಸಿದ್ದು, ರಿಮೇಕ್ ಹಕ್ಕು ಅವರ ಬಳಿ ಇದೆ.

'ಪಿಚ್ಚೈಕಾರನ್' ರಿಮೇಕ್ ಬಗ್ಗೆ ಅಜಯ್ ರಾವ್ ಆಸಕ್ತಿ

ಈ ಸಿನಿಮಾ ನೋಡಿದ್ದ 'ಕೃಷ್ಣ' ಅಜಯ್ ರಾವ್ ಸಹ ಈ ಹಿಂದೆಯೇ 'ಪಿಚ್ಚೈಕಾರನ್' ರಿಮೇಕ್ ಚಿತ್ರ ಮಾಡಬೇಕೆಂದು ಆಸಕ್ತಿ ತೋರಿಸಿದ್ದರು. ಅಲ್ಲದೇ ರಿಮೇಕ್ ಹಕ್ಕು ಖರೀದಿಸಿ, ಸುದೀಪ್ ಅಭಿನಯದಲ್ಲಿ ಚಿತ್ರ ಮಾಡಬೇಕು ಎಂದುಕೊಂಡಿದ್ದ ಯೋಗೀಶ್ ದ್ವಾರಕೀಶ್ ಸಹ ಅಜಯ್ ರಾವ್ ಮನವಿಗೆ ಒಪ್ಪಿಗೆ ನೀಡಿದ್ದರು.

ಹಾಗಿದ್ರೆ ಚಿತ್ರ ನಿರ್ಮಾಣ ಮಾಡುವವರು ಯಾರು?

'ಪಿಚ್ಚೈಕಾರನ್' ರಿಮೇಕ್ ಹಕ್ಕು ಯೋಗೀಶ್ ದ್ವಾರಕೀಶ್ ರವರ ಬಳಿ ಇರುವ ಕಾರಣ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಾರಾ ಅಥವಾ ರಿಮೇಕ್ ಹಕ್ಕನ್ನು ಸಿ.ಆರ್.ಮನೋಹರ್ ರವರ ತನ್ವಿ ಪ್ರೊಡಕ್ಷನ್ಸ್ ಸಂಸ್ಥೆಗೆ ಮಾರಾಟ ಮಾಡಲಿದ್ದಾರಾ ಕಾದುನೋಡಬೇಕಿದೆ.

ಜುಲೈ ಅಂತ್ಯಕ್ಕೆ ಚಿತ್ರೀಕರಣ ಶುರು

ಇನ್ನೂ ಟೈಟಲ್ ಫಿಕ್ಸ್ ಆಗದ 'ಪಿಚ್ಚೈಕಾರನ್' ಕನ್ನಡ ರಿಮೇಕ್ ಚಿತ್ರ ಇಶಾನ್ ಅಭಿನಯದಲ್ಲಿ ಜುಲೈನಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ತೆಲುಗು ಚಿತ್ರದಲ್ಲಿ ಇಶಾನ್ ಬಿಜಿ

ಇತ್ತ ಈಗಾಗಲೇ ಇಶಾನ್ ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ರವರ ತೆಲುಗು ಚಿತ್ರವೊಂದರಲ್ಲೂ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ 'ಪಿಚ್ಚೈಕಾರನ್' ರಿಮೇಕ್ ಚಿತ್ರವನ್ನು ಯಾರು ನಿರ್ಮಾಣ ಮಾಡಲಿದ್ದಾರೆ, ಚಿತ್ರದ ಟೈಟಲ್ ಏನು ಎಂಬುದರ ಬಗ್ಗೆ ಇಶಾನ್ ರವರೇ ಕ್ಲಾರಿಟಿ ನೀಡಬೇಕಿದೆ.

English summary
According to source, Kannada movie 'Rogue' Fame actor Ishan hopes to land tamil hit movie 'Pichaikkaran' remake.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada