ಅಪ್ಪುವಿನಂತೆ ಯುವರಾಜ್‌ಕುಮಾರ್ ಫಿಟ್ನೆಸ್ ಫ್ರೀಕ್: ಇಬ್ಬರ ವರ್ಕ್‌ಔಟ್ ಸ್ಟೈಲ್ ಏನು?

ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಾಗಿದೆ. ಚಿತ್ರರಂಗದಲ್ಲಿ ತನ್ನ ಖದರ್ ತೋರಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡೇ ಬಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾದಿಯನ್ನೇ ಫಾಲೋ ಮಾಡುತ್ತಿರುವ ಯುವಗೆ ಪವರ್‌ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ರಾಘಣ್ಣನ ಪುತ್ರನಲ್ಲಿ ಪುನೀತ್ ರಾಜ್‌ಕುಮಾರ್ ಅವರನ್ನು ನೋಡುತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್‌ಗೆ ಬಾಲ್ಯದಿಂದಲೇ ಸಿನಿಮಾದಲ್ಲಿ ನಟಿಸಿದ ಅನುಭವವಿತ್ತು. ಕ್ಯಾಮರಾ ಮುಂದೆ ನಟನೆ ಮಾಡುವುದು ಅಪ್ಪು ಹೊಸತೇನು ಆಗಿರಲಿಲ್ಲ. ಆದರೆ, ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅಂತ ಹೊರಟಾಗ ದಿಢೀರನೇ ಧುಮುಕಿರಲಿಲ್ಲ. ಮೊದಲ ಸಿನಿಮಾ 'ಅಪ್ಪು' ಸೆಟ್ಟೇರುವುದಕ್ಕೂ ಮುನ್ನ ಸಿಕ್ಕಾಪಟ್ಟೆ ತಯಾರಿಗಳನ್ನು ಮಾಡಿಕೊಂಡಿದ್ದರು. ಸುಮಾರು ಎರಡು ವರ್ಷಗಳ ಕಾಲ ತಾನು ತೆರೆಮೇಲೆ ಕಾಣಿಸಬೇಕು ಅನ್ನೋದಕ್ಕೆ ಒಂದಿಷ್ಟು ಕಲೆಗಳನ್ನು ಬೆಳೆಸಿಕೊಂಡಿದ್ದರು.

Yuva Rajkumar Following Puneeth Rajkumar In Fitness And Workout Here is the Deatails,

ಅಪ್ಪುವಿನಂತೆ ಯುವರಾಜ್‌ಕುಮಾರ್ ವರ್ಕ್‌ಔಟ್

ಪುನೀತ್ ರಾಜ್‌ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ವರ್ಕ್‌ಔಟ್ ಆರಂಭಿಸಿದ್ದರು. ಅಲ್ಲಿಂದ ಶುರುವಾಗಿದ್ದು ಕೊನೆಯ ದಿನದವರೆಗೂ ನಿಲ್ಲಿಸಿರಲಿಲ್ಲ. ನಿರಂತರವಾಗಿ ವರ್ಕ್‌ಔಟ್ ಮಾಡುತ್ತಲೇ ಇದ್ದರು. ಆಕ್ಷನ್, ಸ್ಟಂಟ್ಸ್, ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರು. 'ಅಪ್ಪು' ಸಿನಿಮಾ ರಿಲೀಸ್ ಆದಾಗ, ಆ ಸ್ಟಂಟ್ ಹಾಗೂ ಡ್ಯಾನ್ಸ್ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದರು. ಈಗ ಅದೇ ಹಾದಿಯನ್ನು ಯುವ ರಾಜ್‌ಕುಮಾರ್ ಕೂಡ ಫಾಲೋ ಮಾಡುತ್ತಿದ್ದಾರೆ.

ಯುವ ರಾಜ್‌ಕುಮಾರ್ ಕೂಡ ಸಾಕಷ್ಟು ತಯಾರಿ ಮಾಡಿಕೊಂಡೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅಂತಯೇ ವರ್ಕ್‌ಔಟ್ ಮಾಡಿದ್ದಾರೆ. ಫಿಟ್ನೆಸ್‌ ಕಡೆಗೆ ಹೆಚ್ಚು ಗಮನಕೊಟ್ಟಿರೋದು ಹಲವು ವಿಡಿಯೋಗಳನ್ನು ನೋಡಿದರೆನೇ ಗೊತ್ತಾಗುತ್ತೆ. ದೇಹದಂಡನೆ ಅಷ್ಟೇ ಅಲ್ಲ. ಆಕ್ಷನ್ ಸಿನಿಮಾ ಮಾಡಲು ಬೇಕಾಗಿರೋ ಫಿಟ್ನೆಸ್ ಹಾಗೂ ಕಲೆಯನ್ನು ಕರಗತ ಮಾಡಿಕೊಂಡೇ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ.

Yuva Rajkumar Following Puneeth Rajkumar In Fitness And Workout Here is the Deatails,

ಅಪ್ಪು ಅಂತ ಫ್ಲಿಪ್ ಮಾಡೋದಲ್ಲಿ ಎಕ್ಸ್‌ಪರ್ಟ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅದೆಷ್ಟೋ ವಿಡಿಯೋಗಳಲ್ಲಿ ಫ್ಲಿಪ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ, ಮನೆಯ ಮುಂಭಾಗದಲ್ಲಿ ಫ್ಲಿಪ್ ಮಾಡುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ವಿಡಿಯೋದಲ್ಲಿ ಅಪ್ಪು ಫಿಟ್ನೆಸ್ ಹೇಗಿತ್ತು? ಅನ್ನೋದನ್ನು ಅಭಿಮಾನಿಗಳ ಕಣ್ಣಮುಂದೆನೇ ಇತ್ತು.

ಇತ್ತ ಯುವರಾಜ್‌ಕುಮಾರ್ ಕೂಡ ಫ್ಲಿಪ್ ಮಾಡೋದ್ರಲ್ಲಿ ಎಕ್ಸ್‌ಪರ್ಟ್. ಕಡಲ ತೀರದಲ್ಲಿ ಥೇಟ್ ಪುನೀತ್ ರಾಜ್‌ಕುಮಾರ್ ಅಂತೆಯೇ ಫ್ಲಿಪ್ ಮಾಡಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೆ ಇತ್ತೀಚೆಗೆ ಪಾರ್ಕೋರ್ ಕಲೆಯನ್ನು ಕಲಿತಿದ್ದಾರೆ. ಸಿನಿಮಾ ಎಂಟ್ರಿ ಕೊಡುವುದಕ್ಕೂ ಮುನ್ನ ಹಾಲಿವುಡ್‌ ಸಿನಿಮಾ ಹೆಚ್ಚಾಗಿ ಕಾಣಸಿಗುವ ಪಾರ್ಕೋರ್ ಸ್ಟಂಟ್‌ಗಳನ್ನು ಕಲಿತಿದ್ದಾರೆ.

'ಯುವ' ಮಾಸ್ ಆಕ್ಷನ್ ಸಿನಿಮಾ

ಯುವ ರಾಜ್‌ಕುಮಾರ್ ಕೂಡ 'ಯುವ' ಸಿನಿಮಾಗಾಗಿ ಅಪ್ಪುವಿನಂತೆ ತಯಾರಿ ನಡೆಸಿ ಬಂದಿದ್ದಾರೆ. ಆದರೆ, ಅದನ್ನು ತೆರೆಮೇಲೆ ನೋಡುವುದಕ್ಕೆ ಈ ವರ್ಷದ ಕೊನೆಯವರೆಗೂ ಕಾಯಲೇಬೇಕಿದೆ. ಇತ್ತೀಚೆಗೆ ರಿಲೀಸ್ ಆಗಿರೋ ಟೈಟಲ್ ಟೀಸರ್‌ನಲ್ಲಿ ಚಿಕ್ಕದೊಂದು ಝಲಕ್ ಆದರೂ, ಇರಬಹುದು ಅನ್ನೋ ನಿರೀಕ್ಷೆಯಂತೂ ಇತ್ತು. ಅದು ಈ ಟ್ರೈಲರ್‌ನಲ್ಲಿ ಕಾಣೋದಕ್ಕೆ ಸಿಕ್ಕಿಲ್ಲ.

ಟೈಟಲ್ ಟೀಸರ್ ಕೇವಲ ಆರಂಭ ಅಷ್ಟೇ. ಇನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬೇರೆ ಏನೇನೋ ಪ್ಲಾನ್ ಮಾಡಿಕೊಂಡಿರುತ್ತೆ. ಅದೆಲ್ಲದಕ್ಕೂ ಒಂದಿಷ್ಟು ಸಮಯ ಹಿಡಿಯ ಬಹುದು. ಮುಂದಿನ ದಿನಗಳಲ್ಲಿ ರಿಲೀಸ್ ಮಾಡೋ ಟೀಸರ್, ಟ್ರೈಲರ್‌ಗಳಲ್ಲಿ ಯುವ ರಾಜ್‌ಕುಮಾರ್ ಆಕ್ಷನ್ ಝಲಕ್ ಕಾಣಿಸಬಹುದು.

More from Filmibeat

English summary
Here Is the Details about Puneeth Rajkumar And Yuva Rajkumar Fitness And Workout Details, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X