ಅಪ್ಪು ನಿವಾಸದ ಮುಂದೆ ಯುವ ರಾಜ್‌ಕುಮಾರ್ 3ನೇ ಸಿನಿಮಾ ಲಾಂಚ್; ಸೂರಿ ಡೈರೆಕ್ಷನ್, ವಿಜಯ್ ಪುತ್ರಿ ಹೀರೋಯಿನ್

ಯುವ ರಾಜ್‌ಕುಮಾರ್ ಸಿನಿಮಾ ಒಂದರ ಹಿಂದೊಂದು ಸೆಟ್ಟೇರುತ್ತಿದೆ. ಈಗಾಗಲೇ ಎಕ್ಕ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ದೊಡ್ಮನೆ ಕುಡಿಯ ಮೂರನೇ ಸಿನಿಮಾ ಕೂಡ ಸೆಟ್ಟೇರಿದೆ. ಈ ಸಿನಿಮಾಗಾಗಿ ಕನ್ನಡ ಚಿತ್ರರಂಗದ ದಿಗ್ಗಜರೆಲ್ಲರೂ ಒಟ್ಟಾಗಿ ಸೇರಿಕೊಂಡಿದ್ದಾರೆ. ಬಹಳ ದಿನಗಳಿಂದ ಈ ಪ್ರಾಜೆಕ್ಟ್‌ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿ ಓಡಾಡುತ್ತಲೇ ಇತ್ತು. ಅದ್ರೀಗ ಅಕ್ಷಯ ತೃತೀಯ ಸಿನಿಮಾದ ಶುಭ ಸಂದರ್ಭದಲ್ಲಿ ನಿಜವಾಗಿದೆ.

ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಯುವ ರಾಜ್‌ಕುಮಾರ್ ಹಾಗೂ ಸುಕ್ಕಾ ಸೂರಿ ಕಾಂಬಿನೇಷನ್ ಬಗ್ಗೆ ಸುದ್ದಿಯಾಗುತ್ತಿತ್ತು. ಯುವ ಮೂರನೇ ಸಿನಿಮಾವನ್ನು ಸೂರಿ ನಿರ್ದೇಶನ ಮಾಡುತ್ತಿರುವ ಬಗ್ಗೆ ಸಿನಿಮಾ ಮಂದಿಯಲ್ಲಿ ಚರ್ಚೆಯಾಗುತ್ತಲೇ ಇತ್ತು. ಆದರೆ, ಯಾರೂ ಈ ಚಿತ್ರದ ಬಗ್ಗೆ ಚಿಕ್ಕದೊಂದು ಸುಳಿವನ್ನು ಸಹ ಬಿಟ್ಟುಕೊಟ್ಟಿರಲಿಲ್ಲ. ಈ ಶುಭ ದಿನದಂದು ದಿಗ್ಗಜರೆಲ್ಲರೂ ಅಖಾಡಕ್ಕೆ ಇಳಿದಿದ್ದಾರೆ.

Yuva Rajkumar Suri movie launched Duniya Vijay daughter Rithanya is main lead

ಈ ಸಿನಿಮಾ ಹಲವು ಕಾರಣಕ್ಕೆ ಸಿನಿಪ್ರಿಯರ ಗಮನ ಸೆಳೆದಿದೆ. ಯಾಕಂದ್ರೆ, 'ಎಕ್ಕ' ಸಿನಿಮಾದ ಬಳಿಕ ಯುವ ರಾಜ್‌ಕುಮಾರ್‌ಗಾಗಿಯೇ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮೂರು ನಿರ್ಮಾಣ ಸಂಸ್ಥೆ ಕೈ ಹಾಕಿದೆ. ಇನ್ನೊಂದು ಕಡೆ ದುನಿಯಾ ವಿಜಯ್ ಪುತ್ರಿ ಈ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸೂರಿ ನಿರ್ದೇಶಿಸಿದ 'ಜಾಕಿ' ಸಿನಿಮಾ ಅಪ್ಪು ಲುಕ್ ಅನ್ನೇ 'ಎಕ್ಕ'ದಲ್ಲಿ ಕೊಟ್ಟಿದ್ದ ಯುವ ಈ ಸಿನಿಮಾದಲ್ಲಿ ಹೇಗೆ ಕಾಣಿಸಬಹುದು? ಎನ್ನುವ ಕಾತುರ ದೊಡ್ಮೆನೆ ಅಭಿಮಾನಿಗಳು ಸೇರಿದಂತೆ ಸಿನಿ ಪ್ರಿಯರನ್ನು ಕಾಡುತ್ತಿದೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ, ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ ರಾಜ್‌ ಒಡೆತನದ ಕೆಆರ್‌ಜಿ ಹಾಗೂ ಜಯಣ್ಣ-ಭೋಗಣ್ಣ ಅವರ ಜಯಣ್ಣ ಫಿಲ್ಮಂಸ್‌ ಸೇರಿ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ 'ಎಕ್ಕ' ಸಿನಿಮಾವನ್ನು ಕೂಡ ಇದೇ ಕಾಂಬಿನೇಷನ್ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಚಿತ್ರರಂಗದಲ್ಲಿ ಹೊಸ ಸಂಚಲನವೊಂದು ಸೃಷ್ಟಿಯಾಗಿದೆ.

Ekka X Review:ಪೊರಕೆ ಹಿಡಿದು ರಗಡ್ ಎಂಟ್ರಿ ಕೊಟ್ಟ ಯುವ; ಟೀಸರ್‌ ನೋಡಿ ಏನಂದ್ರು ಫ್ಯಾನ್ಸ್ ?
ಅಕ್ಷಯ ತೃತೀಯ ದಿನದಂದು ಬೆಂಗಳೂರಿನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ. ಈ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ ಸಲಗ ದುನಿಯಾ ವಿಜಯ್‌ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಗೇ ಅಪ್ಪು ಪುತ್ರಿ ಧೃತಿ ಪುನೀತ್ ರಾಜ್‌ಕುಮಾರ್ ಕ್ಯಾಮರಾ ಚಾಲನೆ ಮಾಡಿದ್ದು ವಿಶೇಷ. ಯುವ ರಾಜ್‌ಕುಮಾರ್ ಮೂರನೇ ಸಿನಿಮಾಗೆ ದೊಡ್ಮನೆ ಕುಟುಂಬ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಕೆಆರ್‌ಜಿ ಸಂಸ್ಥೆಯ ಕಾರ್ತಿಕ್‌ ಗೌಡ, ಯೋಗಿ ಜಿ ರಾಜ್‌, ನಿರ್ದೇಶಕ ಸೂರಿ ಉಪಸ್ಥಿತಿ ಇತ್ತು.

ದುನಿಯಾ ಸೂರಿ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾಗಳು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದರಲ್ಲೂ ಜಾಕಿ, ಅಣ್ಣಾ ಬಾಂಡ್ ಅಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗುಡುಗಿದ್ದನ್ನು ನೋಡಿದ್ದೇವೆ. ಈಗ ಮತ್ತೆ ದೊಡ್ಮೆನೆ ಕುಟುಂಬದ ಹೀರೋಗೆ ಆಕ್ಷನ್ ಕಟ್ ಹೇಳುವುದಕ್ಕೆ ಸೂರಿ ರೆಡಿಯಾಗಿದ್ದಾರೆ. ರಗಡ್ ಸಿನಿಮಾಗಳನ್ನು ತೆರೆಮೇಲೆ ತರುವ ಸೂರಿ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ಮಾಸ್ ಅವತಾರದಲ್ಲಿ ತೆರೆಮೇಲೆ ಅಬ್ಬರಿಸಲಿದ್ದಾರೆ.

ಈ ಸಿನಿಮಾದ ಇನ್ನೊಂದು ವಿಶೇಷ ಅಂದರೆ, ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ಈ ಸಿನಿಮಾಗೆ ನಾಯಕಿ. ರಿತನ್ಯಾಗೆ ಇದು ಎರಡನೇ ಸಿನಿಮಾ. ಹಾಗೇ ಯುವ ರಾಜ್‌ಕುಮಾರ್‌ಗೆ ಇದು ಮೂರನೇ ಸಿನಿಮಾ. ಇಬ್ಬರ ಸ್ಟಾರ್‌ ಮಕ್ಕಳನ್ನು ಇಟ್ಟುಕೊಂಡು ದುನಿಯಾ ಸೂರಿ ಯಾವ ರೀತಿಯ ಸಿನಿಮಾ ತೆಗೆಯಬಹುದು ಅನ್ನೋ ಕಾತುರದಲ್ಲಿ ದೊಡ್ಮನೆ ಅಭಿಮಾನಿಗಳು ಹಾಗೂ ದುನಿಯಾ ವಿಜಯ್ ಫ್ಯಾನ್ಸ್ ಇದ್ದಾರೆ. ಸೂರಿ ಗರಡಿಯಲ್ಲಿ ಕಾಣಿಸಿಕೊಳ್ಳುವ ಚರಣ್‌ ರಾಜ್‌ ಸಂಗೀತ ನೀಡುತ್ತಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗುತ್ತಿದೆ.

More from Filmibeat

English summary
Yuva Rajkumar Suri movie launched Duniya Vijay daughter Rithanya is main lead;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X