Kannada News: ರಾಜವಂಶದ ಮತ್ತೊಂದು ಕುಡಿಗೆ ವೇದಿಕೆ ರೆಡಿ.. 'ಯುವ' ರಿಲೀಸ್‌ಗೆ ಮುಹೂರ್ತ ಫಿಕ್ಸ್!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಅಪ್ಪು ಅಭಿಮಾನಿಗಳು 'ಯುವ'ಗಾಗಿ ಎದುರು ನೋಡುತ್ತಿದ್ದಾರೆ. ರಾಜವಂಶದ ಮತ್ತೊಂದು ಕುಡಿಯನ್ನು ಬರಮಾಡಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಯುವ ರಾಜ್‌ಕುಮಾರ್ ಅಲ್ಲಿ ಅಪ್ಪುವನ್ನು ಕಾಣುತ್ತಿರೋ ಫ್ಯಾನ್ಸ್‌ಗೆ ಖುಷಿ ವಿಷಯವೊಂದು ಸಿಕ್ಕಿದೆ.
ಅಪ್ಪು ಅಗಲಿದ ಬಳಿಕ ಕುಗ್ಗಿ ಹೋಗಿದ್ದ ಫ್ಯಾನ್ಸ್‌ಗೆ ಯುವ ರಾಜ್‌ಕುಮಾರ್ಭ ರವಸೆ ಮೂಡಿಸಿದ್ದಾರೆ. ಇವರಲ್ಲೇ ಪವರ್‌ಸ್ಟಾರ್ ಕಾಣುವುದಕ್ಕೆ ಕಾದು ಕೂತಿದ್ದಾರೆ. ಸ್ಯಾಂಡಲ್‌ವುಡ್‌ಗೆ ಅದ್ಧೂರಿಯಾಗಿ ಸ್ವಾಗತ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.

ಅದರಲ್ಲೂ ಪುನೀತ್ ರಾಜ್‌ಕುಮಾರ್ ಫೇವರಿಟ್ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳುತ್ತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ. ಹೀಗಾಗಿ ಯುವ ಮೇಲೆ ಮತ್ತಷ್ಟು ನಿರೀಕ್ಷೆಯಿದ್ದು, ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ.
'ಯುವ' ರಿಲೀಸ್ ಯಾವಾಗ?
ಯುವ ರಾಜ್‌ಕುಮಾರ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ 'ಯುವ' ರಿಲೀಸ್ ಡೇಟ್ ಅನೌನ್ಸ್ ಆಗಿದೆ. 2024, ಮಾರ್ಚ್ 28ಕ್ಕೆ 'ಯುವ' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯುವ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶಕನದಲ್ಲಿ ಯುವಗೆ ಎಂಟ್ರಿ ಹೇಗೆ ಸಿಗುತ್ತೆ? ಅನ್ನೋದನ್ನು ಫ್ಯಾನ್ಸ್ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
'ಯುವ' ಟೈಟಲ್ ಟೀಸರ್‌ಗೆ ಫಿದಾ
ಯುವ ರಾಜ್‌ಕುಮಾರ್ ಎಂಟ್ರಿಗಾಗಿ ಟೈಟಲ್ ಟೀಸರ್ ಅನ್ನು ರಿಲೀಸ್ ಮಾಡಲಾಗಿತ್ತು. ಯುವ ರಾಜ್‌ಕುಮಾರ್ ಲುಕ್‌ಗೆ, ಎಂಟ್ರಿಗೆ ದೊಡ್ಮನೆ ಅಭಿಮಾನಿಗಳು ಫಿದಾ ಆಗಿದ್ದರು. ಟೈಟಲ್ ಟೀಸರ್ ಕೇವಲ 16 ಗಂಟೆಗಳಲ್ಲಿಯೇ 26 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ವಿಶೇಷ ಅಂದರೆ, 'ಯುವ' ಟೈಟಲ್ ಟೀಸರ್ ರಿಲೀಸ್ ಆದ ಒಂದು ವರ್ಷದ ಬಳಿಕ ಸಿನಿಮಾ ರಿಲೀಸ್ ಆಗುತ್ತಿದೆ. 'ಯುವ' ಟೈಟಲ್ ಟೀಸರ್ 2023, ಮಾರ್ಚ್ 03ರಂದು ಬಿಡುಗಡೆಯಾಗಿತ್ತು.
ಅಪ್ಪು ಹುಟ್ಟುಹಬ್ಬಕ್ಕೆ ರಿಲೀಸ್
ಮಾರ್ಚ್ ತಿಂಗಳು ದೊಡ್ಮನೆ ಅಭಿಮಾನಿಗಳಿಗೆ ವಿಶೇಷ. ಯಾಕಂದ್ರೆ ಮಾರ್ಚ್ 17ರಂದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಹೀಗಾಗಿ ಅಂದು ಅಭಿಮಾನಿಗಳ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸುತ್ತಾರೆ. ಇದಾದ 11 ದಿನಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಯುವ ರಾಜ್‌ಕುಮಾರ್ ಗ್ರ್ಯಾಂಡ್ ಎಂಟ್ರಿಯಾಗಲಿದೆ. ಮಕ್ಕಳಿಗೆ ಬೇಸಿಗೆ ರಜೆ ಆರಂಭ ಆಗುವ ಬೆನ್ನಲ್ಲೇ ಸಿನಿಮಾ ಹೆಚ್ಚು ಬೂಸ್ಟ್ ಸಿಗಬಹುದು ಎಂಬ ಲೆಕ್ಕಚಾರವಿದೆ. 'ಕೆಜಿಎಫ್', 'ಕಾಂತಾರ' ದಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ರಿಲೀಸ್ ಮಾಡಿರುವ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವುದರಿಂದ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗುತ್ತೆ ಅನ್ನೋ ನಂಬಿಕೆ ದೊಡ್ಮನೆ ಅಭಿಮಾನಿಗಳದ್ದು.


Click it and Unblock the Notifications











