'ಬ್ಯಾಟ್‌ಮ್ಯಾನ್‌' ಯುನಿವರ್ಸ್‌ಗೆ 85ರ ಸಂಭ್ರಮ: ಈ ಸೀರಿಸ್‌ನ ವಿಲನ್‌ಗಳಿಗೆ ಭಾರತದ ಯಾವ ನಟರು ಸೂಕ್ತ?

ವಿಜಯ್ ಸೇತುಪತಿ- 'ದಿ ಪೆಂಗ್ವಿನ್'

2024ರಲ್ಲಿ ಹಾಲಿವುಡ್‌ನ ಜನಪ್ರಿಯರ ಪಾತ್ರ ಬ್ಯಾಟ್‌ಮ್ಯಾನ್ 85 ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಬ್ಯಾಟ್‌ಮ್ಯಾನ್‌ನ ಅಭಿಮಾನಿಗಳು ರಿಲೀಸ್‌ಗೆ ರೆಡಿಯಾಗಿರುವ 'ದಿ ಪೆಂಗ್ವಿನ್' ಅನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಇದೇ ತಿಂಗಳು ಈ ಹೊಚ್ಚ ಸೀರಿಸ್ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತಿದೆ.

ಬ್ಯಾಟ್‌ಮ್ಯಾನ್ ಯುನಿವರ್ಸ್‌ನಲ್ಲಿ ಬರುವ ವಿಲನ್‌ಗಳು ಸಿನಿಪ್ರಿಯರ ಪ್ರಮುಖ ಆಕರ್ಷಣೆ. ಇಲ್ಲಿ ಬ್ಯಾಟ್‌ಮ್ಯಾನ್‌ನಿಂದ ಹೆಚ್ಚಾಗಿ ಖಳನಾಯಕರನ್ನು ವೈಭವೀಕರಿಸಲಾಗಿರುತ್ತೆ. ಇಂತಹ ಜನಪ್ರಿಯ ಹಾಲಿವುಡ್ ಸಿನಿಮಾ ಹಾಗೂ ಸೀರಿಸ್‌ನಲ್ಲಿ ಭಾರತದ ಯಾವ ನಟರು ವಿಲನ್‌ಗಳಾಗಬಹುದು? ಅನ್ನೋದನ್ನು ನೋಡೊಣ ಬನ್ನಿ.

85 Years of Batman this Indian Actors Who Could Play Iconic Villains here is the list

'ಜೋಕರ್' ಪಾತ್ರದಲ್ಲಿ ರಣ್‌ವೀರ್ ಸಿಂಗ್

ಬಾಲಿವುಡ್‌ ನಟ ರಣ್‌ವೀರ್ ಸಿಂಗ್‌ ಎನರ್ಜಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ನಟನ ಡ್ರೆಸಿಂಗ್ ಸೆನ್ಸ್‌ನಿಂದ ಹಿಡಿದು ನಟನೆವರೆಗೂ ಗಮನ ಸೆಳೆಯುವ ತಾಕತ್ತು ಇವರಿಗಿದೆ. ಇವರ ಕಾಮಿಡಿ ಟೈಮಿಂಗ್ ಹಾಗೂ ಎನರ್ಜಿ 'ದಿ ಜೋಕರ್' ಪಾತ್ರವನ್ನು ಸರಿಯಾಗಿ ಹೊಂದಿಕೊಳ್ಳುತ್ತಾರೆ. ಈ ಪಾತ್ರವನ್ನು ರಣ್‌ವೀರ್ ಸಿಂಗ್ ತಮ್ಮದೇ ಸ್ಟೈಲ್‌ನಲ್ಲಿ ನಿಭಾಯಿಸಬಲ್ಲರು.

OTT News:ವಿಜಯ್ ಸೇತುಪತಿ To ಮಹೇಶ್; ಈ 'ಪೆಂಗ್ವಿನ್' ಸೀರಿಸ್‌ನಲ್ಲಿ ಭಾರತದ ಯಾವ ನಟ ನಟಿಸಿದ್ರೆ ಉತ್ತಮ?
ದಕ್ಷಿಣ ಭಾರತದ ನಟ ವಿಜಯ್ ಸೇತುಪತಿ ನಟನೆಗೆ ಮರುಳಾಗದವರೇ ಇಲ್ಲ. ಪಾತ್ರಕ್ಕೆ ತಕ್ಕಂತೆ ಬದಲಾಗುವ ವಿಜಯ್ ಸೇತುಪತಿ 'ದಿ ಪೆಂಗ್ವಿನ್' ಪಾತ್ರಕ್ಕೆ ಸೂಟ್ ಆಗುತ್ತಾರೆ. ಪೆಂಗ್ವಿನ್ ಪಾತ್ರದ ಮೋಸ ಮಾಡುವ ಸ್ವಭಾವ, ಡಾರ್ಕ್ ಕಾಮಿಡಿ ಎಲ್ಲವೂ ವಿಜಯ್ ಸೇತುಪತಿ ಸೂಟ್ ಆಗಬಹುದು. ಹೀಗಾಗಿ ಈ ಪಾತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳಬಹುದು.

ಫಹಾದ್ ಫಾಸಿಲ್- 'ಸ್ಕೇರ್‌ಕ್ರೊ'

ಎಂತಹ ಪಾತ್ರಗಳನ್ನು ಸಲೀಸಾಗಿ ನಿಭಾಯಿಸಬಲ್ಲ ಮತ್ತೊಬ್ಬ ನಟ ಫಹಾದ್ ಫಾಸಿಲ್. 'ಬ್ಯಾಟ್‌ಮ್ಯಾನ್' ಸರಣಿಯ ಮತ್ತೊಬ್ಬ ವಿಲನ್ 'ಸ್ಕೇರ್‌ಕ್ರೊ' ಪಾತ್ರಕ್ಕೆ ಫಹಾದ್ ಫಾಸಿಲ್ ಸರಿಯಾದ ಆಯ್ಕೆ ಆಗುತ್ತಾರೆ. ಈ ಮಲಯಾಳಂ ಸ್ಟಾರ್ ಒಬ್ಬ ವಿಲನ್ ಆಗಿ ಆಳವಾಗಿ ಇಳಿದು ಪಾತ್ರವನ್ನು ನಿಭಾಯಿಸಬಲ್ಲ.

85 Years of Batman this Indian Actors Who Could Play Iconic Villains here is the list

ಎರಡು ಶೇಡ್‌ಗಳಲ್ಲಿ ಚಿಯಾನ್ ವಿಕ್ರಮ್

ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಒಂದೇ ಪಾತ್ರದಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬದಲಾಗುವ ಪಾತ್ರದಲ್ಲಿ ಚಿಯಾನ್ ವಿಕ್ರಮ್ ಈಗಾಗಲೇ ನಟಿಸಿ ತೋರಿಸಿದ್ದಾರೆ. ಹೀಗಾಗಿ ಹಾರ್ವಿ ಡೆಂಟ್ ದುರಂತ ಕಥೆಯನ್ನು ಚಿಯಾನ್ ವಿಕ್ರಮ್ ಚೆನ್ನಾಗಿಯೇ ನಿಭಾಯಿಸಬಲ್ಲರು.

ರಾಸ್ ಅಲ್‌ ಗುಲ್ ಪಾತ್ರದಲ್ಲಿ ಆರ್. ಮಾಧವನ್

ಬ್ಯಾಟ್‌ಮ್ಯಾನ್ ಸರಣಿಯಲ್ಲಿ ಬರುವ ಮತ್ತೊಬ್ಬ ಸೂಪರ್‌ ವಿಲನ್ ರಾಸ್ ಅಲ್ ಗುಲ್. ಬ್ಯಾಟ್‌ಮ್ಯಾನ್ ಸೀರಿಸ್‌ನಲ್ಲಿ ಇದೊಂದು ಪ್ರಮುಖ ಪಾತ್ರ. ಈ ಪಾತ್ರವನ್ನು ಆರ್‌.ಮಾಧವನ್ ಮಾಡಬಹುದು. ಮಾಧವನ್ ಇತ್ತೀಚೆಗೆ ವಿಲನ್ ಪಾತ್ರದಲ್ಲಿ ನಟಿಸಿ ಮಿಂಚಿದ್ದಾರೆ. ಬುದ್ಧಿವಂತಿಗೆ ಹಾಗೂ ಗಾಂಭೀರ್ಯತೆಯನ್ನು ತೋರುವ ಪಾತ್ರಕ್ಕೆ ಮಾಧವನ್ ಸರಿಯಾದ ಆಯ್ಕೆ.

ನಯನತಾರಾ-ಹಾರ್ಲೆ ಕ್ವಿನ್

ನಯನತಾರಾ ತೆರೆಮೇಲೆ ಹಾಗೂ ತೆರೆಯ ಹಿಂದೆ ಯಾವಾಗಲೂ ಒಂದು ಗತ್ತನ್ನು ಪ್ರದರ್ಶಿಸುತ್ತಾರೆ. ಬ್ಯಾಟ್‌ಮ್ಯಾನ್‌ನಲ್ಲಿರುವ ಇಂತಹದ್ದೇ ಒಂದು ಪಾತ್ರ ಹಾರ್ಲೆ ಕ್ವಿನ್. ಡಿಸಿ ಕಾಮಿಕ್ಸ್‌ನಲ್ಲಿ ಬರುವ ಈ ಜನಪ್ರಿಯ ಪಾತ್ರಕ್ಕೆ ನಯನತಾರಾ ಸೂಟ್ ಆಗಬಹುದು. ಹಾಗೇ ಕಾಮಿಡಿ, ಎಮೋಷನ್‌ ಪಾತ್ರಗಳಲ್ಲೂ ನಯನತಾರಾ ಸರಿಯಾದ ಆಯ್ಕೆ.

ಕ್ಯಾಟ್‌ವುಮನ್-ಪ್ರಿಯಾಂಕಾ ಚೋಪ್ರಾ

ಇನ್ನು ಮತ್ತೊಂದು ಐಕಾನಿಕ್ ಕ್ಯಾಟ್‌ವುಮನ್ ಪಾತ್ರಕ್ಕೆ ಪ್ರಿಯಾಂಕಾ ಚೋಪ್ರಾ ಬೆಸ್ಟ್ ಚಾಯ್ಸ್. ಈ ಪಾತ್ರದ ವರ್ಚಸ್ಸಿಗೆ ಪ್ರಿಯಾಂಕಾ ಚೋಪ್ರಾ ಸರಿಯಾದ ಆಯ್ಕೆ ಆಗಬಲ್ಲರು. 85 ವರ್ಷದ ಈ ಬ್ಯಾಟ್‌ಮ್ಯಾನ್ ಸಂಭ್ರಮದಲ್ಲಿ ಭಾರತದ ಸ್ಟಾರ್‌ಗಳು ನಟಿಸಿದ ಬಾಕ್ಸಾಫೀಸ್‌ ಧೂಳೆಬ್ಬಿಸುವುದು ಗ್ಯಾರಂಟಿ. ಸದ್ಯ 'ದಿ ಪೆಂಗ್ವಿನ್' ಸೀರಿಸ್ ಜಿಯೋ ಸಿನಿಮಾದಲ್ಲಿ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲೂ ನೋಡಬಹುದು.

More from Filmibeat

English summary
85 Years of Batman this Indian Actors Who Could Play Iconic Villains here is the list
Read more about: ott filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X