ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಯ್ತು ಪಿಆರ್‌ಕೆ ಪ್ರೊಡಕ್ಷನ್‌ನ ಮತ್ತೊಂದು ಸಿನಿಮಾ
ಪುನೀತ್ ರಾಜ್‌ಕುಮಾರ್ ಬದುಕಿದ್ದಾಗಿನಿಂದಲೂ ಅಮೆಜಾನ್ ಪ್ರೈಂಗೂ ಪಿಆರ್‌ಕೆ ಪ್ರೊಡಕ್ಷನ್ ನಡುವೆ ಆಪ್ತ ನಂಟು. ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈವರೆಗಿನ ಬಹುತೇಕ ಸಿನಿಮಾಗಳು ಬಿಡುಗಡೆ ಆಗಿರುವುದು ಅಮೆಜಾನ್ ಪ್ರೈಂನಲ್ಲಿಯೇ.
Recommended Video
ಪುನೀತ್ ಅಗಲಿದ ಮೇಲೆ ಇತ್ತೀಚೆಗಷ್ಟೆ ಪುನೀತ್ ರವರ ಪಿಆರ್‌ಕೆ ಪ್ರೊಡಕ್ಷನ್ ಹೌಸ್‌ನಿಂದ ನಿರ್ಮಾಣವಾಗಿದ್ದ ದಾನಿಶ್ ಸೇಠ್ ನಟನೆಯ 'ಒನ್ ಕಟ್ ಟು ಕಟ್' ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಪಿಆರ್‌ಕೆ ಪ್ರೊಡಕ್ಷನ್‌ನ ಹೊಸ ಸಿನಿಮಾ ಪ್ರೈಂನಲ್ಲಿ ಬಿಡುಗಡೆ ಆಗಿದೆ.
'One Cut Two Cut' Movie Review: ಏನೋ ಮಾಡಲು ಹೋಗಿ...!
ಅಮೆಜಾನ್ ಪ್ರೈಂನಲ್ಲಿ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಬಿಡುಗಡೆ ಆಗಿದೆ. ಪುನೀತ್ ಅಗಲಿದ ಬಳಿಕ ಪಿಆರ್‌ಕೆಯಿಂದ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದು.

ಕೌಟುಂಬಿಕ ಕತೆ, ಪ್ರೀತಿ, ಅತಿಮಾನುಷ ಶಕ್ತಿ, ಹಾಸ್ಯ ಎಲ್ಲವನ್ನೂ ಒಳಗೊಂಡಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಟ್ರೇಲರ್ ಕುತೂಹಲ ಮೂಡಿಸಿದೆ.
ಸಿನಿಮಾದಲ್ಲಿ ನಾಯಕಿಯಾಗಿ ಅಮೃತಾ ಐಯ್ಯಂಗಾರ್, ನಾಯಕನಾಗಿ ಲಿಖಿತ್ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಿರಿಯ, ಅನುಭವಿ ನಟರಾದ ರಂಗಾಯಣ ರಘು, ಅಚ್ಯುತ್ ಕುಮಾರ್ ಸಹ ಇದ್ದಾರೆ. ಜೊತೆಗೆ ಪದ್ಮಜಾ ರಾವ್, ಸಿಹಿ ಕಹಿ ಚಂದ್ರು, ಸಾಧು ಕೋಕಿಲ, ಚಂದು ಗೌಡ, ನಾಗಭೂಷಣ್ ಸಹ ನಟಿಸಿದ್ದಾರೆ. ಸಿನಿಮಾವನ್ನು ಅರುಣ್ ಕುಮಾರ್ ಎಸ್ ನಿರ್ದೇಶನ ಮಾಡಿದ್ದು, ನಿರ್ಮಾಣ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರದ್ದು.
OTTಯಲ್ಲಿ ಹೊಸ ದಾಖಲೆ ಬರೆದ ಭಜರಂಗಿ, ಗರುಡ ಗಮನ!
'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಫೆಬ್ರವರಿ 17 ರಂದು ಬಿಡುಗಡೆ ಆಗಿದೆ. ಈ ಸಿನಿಮಾದ ಬಳಿಕ 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನದ 'ಮ್ಯಾನ್ ಆಫ್ ದಿ ಮ್ಯಾಚ್' ಸಿನಿಮಾ ಸಹ ಅಮೆಜಾನ್ ಪ್ರೈಂನಲ್ಲಿಯೇ ಬಿಡುಗಡೆ ಆಗಲಿದೆ.


Click it and Unblock the Notifications











