Leo-OTT: 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ.. ಓಟಿಟಿ ರಿಲೀಸ್ ಬಗ್ಗೆನೇ ಚರ್ಚೆ: ಎಲ್ಲಿ ಯಾವಾಗ ಸ್ಟ್ರೀಮಿಂಗ್?
ದಳಪತಿ ವಿಜಯ್ ಸಿನಿಮಾ ಇಂದು (ಅಕ್ಟೋಬರ್ 19) ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಕರ್ನಾಟಕದಲ್ಲೂ ಪೈಪೋಟಿಗೆ ಬಿದ್ದು ರಿಲೀಸ್ ಮಾಡಲಾಗಿತ್ತು. ಮೊದಲ ದಿನವೇ ಕನ್ನಡದ 'ಘೋಸ್ಟ್' ಸಿನಿಮಾಗಳಿಗಿಂತ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
ಲೋಕೇಶ್ ಕನಗರಾಜ್ ನಿರ್ದೇಶಿಸಿದ 'ಲಿಯೋ' ಬಿಡುಗಡೆಗೂ ಮುನ್ನ ಬಿಲ್ಡಪ್ ಕೊಟ್ಟಷ್ಟು ಖದರ್ ಇಲ್ಲ. ವಿಜಯ್ ಅಭಿಮಾನಿಗಳಿಗೇ ಈ ಸಿನಿಮಾ ಇಷ್ಟ ಆಗಿಲ್ಲ. ಆ್ಯಕ್ಷನ್ ಜಾನರ್ ಸಿನಿಮಾ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದಾಖಲೆ ಕಲೆಕ್ಷನ್ ಮಾಡುವುದು ಸದ್ಯಕ್ಕೆ ಅನುಮಾನ ಎಂದು ಟ್ರೇಡ್ ಎಕ್ಸ್‌ಪರ್ಟ್ ಭವಿಷ್ಯ ನುಡಿಯುತ್ತಿದ್ದಾರೆ.

ಅದ್ಯಾವಾಗ ದಳಪತಿ ವಿಜಯ್ ಸಿನಿಮಾ 'ಲಿಯೋ' ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತೋ.. ಅಲ್ಲಿಂದ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಆರಂಭ ಆಗಿದೆ. ಸಿನಿಮಾ ಥಿಯೇಟರ್‌ನಲ್ಲಿ ಹೆಚ್ಚು ದಿನ ಪ್ರದರ್ಶನ ಕಂಡರೆ ಸಾಮಾನ್ಯವಾಗಿ ಓಟಿಟಿಗೆ ಲಗ್ಗೆ ಇಡುವುದು ಕೂಡ ತಡವಾಗುತ್ತೆ. ಅದೇ, ಮಿಶ್ರ ಪ್ರತಿಕ್ರಿಯೆ ಬಂದರೆ ಬೇಗೆ ಓಟಿಟಿಗೆ ಎಂಟ್ರಿ ಕೊಡುತ್ತೆ. ಹೀಗಾಗಿ ಮೊದಲ ದಿನವೇ 'ಲಿಯೋ' ಓಟಿಟಿ ಎಂಟ್ರಿ ಯಾವಾಗ ಅನ್ನೋದನ್ನು ತಮಿಳು ಮಾಧ್ಯಮಗಳು ವರದಿ ಮಾಡಿವೆ.
'ಲಿಯೋ' ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್
'ಲಿಯೋ' ಅಡ್ವಾನ್ಸ್ ಬುಕಿಂಗ್‌ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ತಮಿಳುನಾಡಿನಲ್ಲಿ ವಿಶೇಷ ಪ್ರದರ್ಶನಕ್ಕೆ ಅವಕಾಶ ನೀಡದೇ ಹೋದರೂ, ಕೇರಳ ಹಾಗೂ ಕರ್ನಾಟಕದಲ್ಲಿ ಬೆಳಗ್ಗೆ ನಾಲ್ಕು ಗಂಟೆಗೆ ವಿಶೇಷ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲದೆ ಅಮೆರಿಕ, ಲಂಡನ್ ಸೇರಿದಂತೆ ಓಟಿಟಿಯಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಆದರೆ ಫಸ್ಟ್ ಡೇ ಫಸ್ಟ್ ಶೋ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಅಂದುಕೊಂಡಿದ್ದಕ್ಕಿಂತ ಬೇಗನೇ ಓಟಿಟಿಗೆ ಲಗ್ಗೆ ಇಡುತ್ತೆ ಅನ್ನೋದು ಸುದ್ದಿ. ಅಂದ್ಹಾಗೆ ನೆಟ್‌ಫ್ಲಿಕ್ಸ್ 'ಲಿಯೋ' ಸಿನಿಮಾವನ್ನು ಸ್ಟ್ರೀಮಿಂಗ್ ಮಾಡಲಿದೆ.
'ಲಿಯೋ' ಓಟಿಟಿಗೆ ಬರೋದು ಯಾವಾಗ?
'ಲಿಯೋ' ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ. ಮೂಲಗಳ ಪ್ರಕಾರ, ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ. ಒಂದು ವೇಳೆ ಥಿಯೇಟರ್‌ನಲ್ಲಿ ಕಲೆಕ್ಷನ್ ಉತ್ತಮವಾಗಿದ್ದರೆ, ಜನವರಿಗೆ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ 'ಲಿಯೋ' ಒಂದೂವರೆ ತಿಂಗಳ ಒಳಗಾಗಿಯೇ ಓಟಿಟಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ.

'ಲಿಯೋ' ಹೈಲೈಟ್ ಏನು?
'ಲಿಯೋ' ಬಿಡುಗಡೆಗೂ ಮುನ್ನ ಲೋಕೇಶ್ ಕನಗರಾಜ್ ಯುನಿವರ್ಸ್ ಎಂದು ಪ್ರಚಾರಗೊಂಡಿತ್ತು. ಈ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆಗೆ ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ ಖಳನಾಯಕರಾಗಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ಬಳಿಕ ತ್ರಿಶಾ ಮತ್ತೆ ವಿಜಯ್ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ನೆಟ್‌ಫ್ಲಿಕ್ಸ್ ಓಟಿಟಿ ಹಕ್ಕನ್ನು ಪಡೆದಿದ್ದರೆ, ಸನ್ ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿತ್ತು. 'ಲಿಯೋ' ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ಬಾಕ್ಸಾಫೀಸ್‌ನಲ್ಲಿ ದಾಖಲೆಯನ್ನು ಸೃಷ್ಟಿಸಬಹುದೇ? ಅನ್ನೋ ಸದ್ಯಕ್ಕೆ ಯಕ್ಷ ಪ್ರಶ್ನೆ.


Click it and Unblock the Notifications











