Thug Life Twitter Review:36 ವರ್ಷಗಳ ಬಳಿಕ ಮೋಡಿ ಮಾಡ್ತಾ ಕಮಲ್-ಮಣಿರತ್ನಂ ಜೋಡಿ? ಇದಕ್ಕಾ ಈ ಹಂಗಾಮ?
ಕಮಲ್ ಹಾಸನ್, ತ್ರಿಶಾ ಸಿಂಬು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ಥಗ್ ಲೈಫ್' ಇಂದು (ಜೂನ್ 5) ಬಿಡುಗಡೆಯಾಗಿದೆ. ಕಮಲ್ ಹಾಸನ್ ಮಾಡಿಕೊಂಡು ವಿವಾದದಿಂದ ಕರ್ನಾಟಕವನ್ನು ಹೊರತು ಪಡಿಸಿ, ಬೇರೆ ಕಡೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದ ಕಮಲ್ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕನ್ನಡ ಪರ ಹೋರಾಟಗಾರರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದು ಕೂತಿದ್ದರು.
ಮೊಂಡುತನ ಬಿಡದ ಕಮಲ್ ಹಾಸನ್‌ಗೆ ಕರ್ನಾಟಕ ಹೈಕೋರ್ಟ್ ಕೂಡ ಕ್ಷಮೆ ಕೇಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿತ್ತು. ಆದರೂ, ತನ್ನ ಹಠವನ್ನು ಬಿಡದ ಕಮಲ್ ಹಾಸನ್ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿದ್ದರು. ಹೀಗಾಗಿ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಬಗ್ಗೆ ವಿಚಾರಣೆ ಹೈ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಜೂನ್ 10ಕ್ಕೆ ಮುಂದೂಡಲಾಗಿದೆ. ಅಲ್ಲಿವರೆಗೂ ಸಿನಿಮಾ ರಿಲೀಸ್ ಅನುಮಾನ.

ಕರ್ನಾಟಕ ಬಿಟ್ಟು ಉಳಿದ ಕಡೆಗಳಲ್ಲೆಲ್ಲ ಈ ಸಿನಿಮಾ ರಿಲೀಸ್ ಆಗಿದ್ದು, ನೆಟ್ಟಿಗರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ಶುರು ಮಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಫ್ಯಾನ್ಸ್ ಕಮಲ್ ಹಾಗೂ ಮಣಿರತ್ನಂ ಕಾಂಬಿನೇಷನ್ ಸಿನಿಮಾ ನೋಡಿ ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ್ದಾರೆ. ಕರ್ನಾಟಕದಲ್ಲಿ 'ಥಗ್ ಲೈಫ್' ರಿಲೀಸ್ ಮಾಡದೇ ತಮ್ಮ ಸಿನಿಮಾಗೆ ಕಮಲ್ ಹಾಸನ್ ಅನ್ಯಾಯ ಮಾಡಿದರೇ..? ಸಿನಿಮಾ ಬಗ್ಗೆ ಫ್ಯಾನ್ಸ್ ಒಪಿನಿಯನ್ ಏನಿದೆ? ತಿಳಿಯುವುದಕ್ಕೆ ಮುಂದೆ ಓದಿ.
ಎಮೋಷನ್ ಇಲ್ಲ.. ಟ್ವಿಸ್ಟ್ ಇಲ್ಲ
"ಕಮಲ್ ಹಾಸನ್-ತ್ರಿಶಾ ಲವ್ ಸೀಸನ್‌ಗಳು ಡಲ್ ಆಗಿವೆ. ಸಿಂಬು ಹಾಗೂ ಅಭಿರಾಮಿ ಪಾತ್ರಗಳು ನೀಟ್ ಆಗಿವೆ. ಹಾಡುಗಳು ಡಲ್ ಆಗಿವೆ. ದೆಹಲಿಯ ದೃಶ್ಯಗಳು ಸೂಪರ್ ಆಗಿವೆ. ಮಣಿರತ್ನಂ ಹೆಣೆದ ಸ್ಟೋರಿ ವೀಕ್ ಆಗಿದೆ. ಭಾವನೆಗಳೇ ಇಲ್ಲ. ಟ್ವಿಸ್ಟ್‌ಗಳು ಇಲ್ಲ. ಉತ್ಸಾಹವಿಲ್ಲ, ಸಿನಿಮಾವನ್ನು ಬೇಕಂತಲೇ ಎಳೆದಂತೆ ಇದೆ. ನಿರಾಶೆ ಮಾಡಿದೆ. ಸಿನಿಮಾ, ಪಾಲಿಟಿಕ್ಸ್ ಮತ್ತು ಫ್ಯಾಮಿಲಿಯಲ್ಲಿ ಸೋಲು" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದು 10ಕ್ಕೆ 2 ಅಂಕಗಳನ್ನು ನೀಡಿದ್ದಾರೆ.
ನಿರೀಕ್ಷೆ ಮಾಡುವಂತಹ ಸ್ಟೋರಿ
ಪವರ್‌ಗಾಗಿ ಇಬ್ಬರು ಫೈಟ್ ಮಾಡುವಂತಹ ಸರಳ ಕತೆ. ಈ ಕತೆಯನ್ನು ನಿರೀಕ್ಷೆ ಮಾಡಬಹುದು. ಕಥೆಯನ್ನು ಸಿಕ್ಕಾಪಟ್ಟೆ ಎಳೆದಿದ್ದಾರೆ. ಇಲ್ಲಿವರೆಗೂ ಏನೂ ಇಂಪ್ರೆಸಿವ್ ಅಂತ ಅನಿಸುತ್ತಿಲ್ಲ. ತುಂಬಾ ಹಳೆಯ ಸ್ಟೋರಿ, ಹಳೆಯ ಸ್ಕ್ರೀನ್‌ಪ್ಲೇಯಿದೆ. ಎ ಆರ್ ರೆಹಮಾನ್ ಈ ಸಿನಿಮಾಗೆ ಏನೂ ಸಹಾಯ ಮಾಡಿಲ್ಲ ಅಂತ ಅನಿಸುತ್ತಿದೆ. ಯಾವುದೇ ದೃಶ್ಯ ನೋಡುಗರಿಗೆ ಕನೆಕ್ಟ್ ಆಗುವುದಿಲ್ಲ. ಇಂಟ್ರುಕ್ಷನ್ ಕೂಡ ಹಾಗೇ ಇದೆ. ಸೆಕೆಂಡ್ ಹಾಫ್ ಮೇಲೆ ಸಿನಿಮಾದ ಹಣೆಬರಹ ನಿರ್ಧಾರ" ಎಂದು ಇನ್ನೊಬ್ಬರು ನೆಟ್ಟಿಗರು ಹೇಳಿದ್ದಾರೆ.
ಕಮಲ್ ಹಾಸನ್-ತ್ರಿಶಾ ಸೀನ್ಸ್ ಅಗತ್ಯವಿರಲಿಲ್ಲ
"ಥಗ್ ಲೈಫ್‌ನದ್ದು ಊಹಿಸಬಹುದಾದ ಕಥೆ, ನಿರೀಕ್ಷೆ ಮಾಡಬಹುದು ಹಾಗೇ ಅದೇ ರೊಟೀನ್ ಕಥೆ. ಹೊಸದೇನು ನೋಡುವಂತೆ ಮಾಡಿಲ್ಲ. ಕ್ಯಾಮರಾ ವರ್ಕ್ ಸಖತ್ ಆಗಿದೆ. ಕೆಲವು ಕಡೆಗಳಲ್ಲಿ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಕಮಲ್ ಹಾಸನ್ ಹಾಗೂ ತ್ರಿಶಾ ನಡುವಿನ ಹಸಿಬಿಸಿ ದೃಶ್ಯಗಳು ಅಗತ್ಯವಿರಲಿಲ್ಲ" ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಸಿಂಬು ಪರ್ಫಾಮೆನ್ಸ್ ಸೂಪರ್
" ಥಗ್ ಲೈಫ್ ಅನ್ನು ಒಂದು ಪದದಲ್ಲಿ ಹೇಳುವುದಾರೇ, ಬ್ಲಾಕ್ ಬಸ್ಟರ್. ಫಸ್ಟ್ ಹಾಫ್‌ನಲ್ಲಿ ಕಮಲ್ ಹಾಸನ್ ಇಷ್ಟ ಆಗುತ್ತಾರೆ. ಕಮಲ್ ಹಾಸನ್ ಹಾಗೂ ಎಸ್‌ಟಿಆರ್ ದೃಶ್ಯಗಳು ಸಿನಿಮಾದ ಹೈಲೈಟ್. ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಇಂಟರ್‌ವಲ್ ಬ್ಲಾಕ್ ಬೆಂಕಿಯಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಸಿಂಬು ಇಡೀ ಸಿನಿಮಾವನ್ನು ತೆಗೆದುಕೊಂಡು ಹೋಗುತ್ತಾರೆ. ಸಿಂಬು ಹಾಗೂ ಕಮಲ್ ಹಾಸನ್ ಆಕ್ಷನ್ ಸೀನ್‌ಗಳು ಮಸ್ತ್ ಆಗಿವೆ. ಕ್ಲೈಮ್ಯಾಕ್ಸ್ ಸಖತ್ ಆಗಿದೆ." ಎಂದು ಅಭಿಮಾನಿಯೊಬ್ಬರು 5ಕ್ಕೆ 4.75 ಅಂಕಗಳನ್ನು ಕೊಟ್ಟಿದ್ದಾರೆ.
ಸಿಂಬು ಪಾತ್ರದೊಳಗೆ ಮುಳುಗಿದ್ದಾರೆ
"ಸಿಂಬು ಪ್ರತಿಯೊಂದು ಫ್ರೇಮ್‌ನಲ್ಲಿಯೂ ಅದ್ಭುತವಾಗಿ ಕಾಣಿಸುತ್ತಾರೆ. ಅವರು ಕೇವಲ ನಟನೆಯನ್ನಷ್ಟೇ ಮಾಡಿಲ್ಲ. ಆ ಪಾತ್ರವೇ ಆಗಿ ಹೋಗಿದ್ದಾರೆ. ಅದರಲ್ಲೂ ಇಂಟರ್‌ವಲ್ ಸೀನ್ ಅದ್ಭುತವಾಗಿದೆ. ಮೈಜುಂ ಎನಿಸುವಂತಹ ದೃಶ್ಯಗಳು" ಎಂದು ಇನ್ನೊಬ್ಬ ನೆಟ್ಟಿಗರು ಮೋಡಿ ಮಾಡಿದ್ದಾರೆ.


Click it and Unblock the Notifications











