»   » 'ರಾಜಕುಮಾರ'ನಲ್ಲಿ ಕಸ್ತೂರಿ ಸುವಾಸನೆ ಸವಿದು ಖುಷಿಯಾದ ವಿಮರ್ಶಕರು

'ರಾಜಕುಮಾರ'ನಲ್ಲಿ ಕಸ್ತೂರಿ ಸುವಾಸನೆ ಸವಿದು ಖುಷಿಯಾದ ವಿಮರ್ಶಕರು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ನಿನ್ನೆ ದೇಶದಾದ್ಯಂತ ಬಿಡುಗಡೆ ಆಗಿದೆ. ಚಿತ್ರ ನೋಡಿದ ಪ್ರೇಕ್ಷಕರು 'ರಾಜಕುಮಾರ' ಹೆಸರಿಗೆ ತಕ್ಕಂತೆ ಮೂಡಿಬಂದಿದೆ ಎಂದು ಹೊಗಳಿದ್ದಾರೆ. ಅಲ್ಲದೇ ಅಪ್ಪು ಅಭಿನಯ, ಡ್ಯಾನ್ಸ್ ನೋಡಿ ಪ್ರೀತಿಯಿಂದ ಅಭಿಮಾನಿಗಳು ಅಪ್ಪಿಕೊಂಡಿದ್ದಾರೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

  'ಕಸ್ತೂರಿ ನಿವಾಸ' ನೆನಪಿಸುವ ಹಾಗೆ ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದ್ರೆ ಪ್ರೇಕ್ಷಕರಂತೆ ಸಿನಿಮಾ ನೋಡಿದ ನಮ್ಮ ವಿಮರ್ಶಕರು 'ರಾಜಕುಮಾರ'ನಿಗೆ ಮನಸೋತ್ರಾ? ವಿಮರ್ಶಕರು ಚಿತ್ರ ನೋಡಿ ನೀಡಿದ ಅಭಿಪ್ರಾಯವೇನು? ಉತ್ತರ ಇಲ್ಲದೆ...

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ರಾಜಕುಮಾರ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ..

  ಮೌಲ್ಯಭರಿತ ರಂಜನೆ - ಪ್ರಜಾವಾಣಿ

  ನಿರ್ದೇಶಕರು ರಾಜ್ ಕುಮಾರ್ ಅವರನ್ನು ಮತ್ತೆ ಮತ್ತೆ ನೆನಪಿಸಿದ್ದಾರೆ. ಕಮರ್ಷಿಯಲ್ ಚಿತ್ರ ಟೇಕ್ ಆಫ್ ಆಗಲು ಬೇಕಾದ ಎಲ್ಲಾ ತಂತ್ರಗಳನ್ನೆಲ್ಲ ದುಡಿಸಿಕೊಳ್ಳಲಾಗಿದೆ. ತಂದೆ-ತಾಯಿಯನ್ನು ದೂರಮಾಡಿ ವೃದ್ಧಾಶ್ರಮಕ್ಕೆ ಕಳುಹಿಸುವವರು ನೋಡಲೇ ಬೇಕಾದ ಸಿನಿಮಾ. ಅಚ್ಚುಕಟ್ಟಾಗಿ ಕೌಟುಂಬಿಕ ಮೌಲ್ಯಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಪುನೀತ್ ಅಭಿಮಾನಿಗಳನ್ನು ತೃಪ್ತಿಪಡಿಸುವ ಯಾವ ಅವಕಾಶವನ್ನೂ ನಿರ್ದೇಶಕರು ಮಿಸ್ ಮಾಡಿ ಕೊಂಡಿಲ್ಲ. ಪುನೀತ್ ನಟನೆ ಎಕ್ಸಲೆಂಟ್. ವಿ.ಹರಿಕೃಷ್ಣ ಸಂಗೀತ ಇಂಪಾಗಿವೆ. ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ಆಸ್ಟೇಲಿಯಾದ ಸೌಂದರ್ಯವನ್ನು ತೋರಿಸಲು ಶ್ರಮ ವಹಿಸಿದ್ದಾರೆ. ಕೆ.ಎಂ ಪ್ರಕಾಶ್ ಸಂಕಲನಕ್ಕೆ ಫುಲ್ ಮಾರ್ಕ್ಸ್.['ರಾಜಕುಮಾರ' ನೋಡಿ ಮೆಚ್ಚಿದ ಅಭಿಮಾನಿ ದೇವ್ರುಗಳಿಗೆ 'ದೊಡ್ಮನೆ ಹುಡ್ಗ'ನ ಧನ್ಯವಾದ]

  ಕಸ್ತೂರಿ ಘಮಲಿನ ರಾಜಕುಮಾರ -ವಿಜಯ ಕರ್ನಾಟಕ

  ಸಿನಿಮಾಗಳು ಉತ್ತಮ ಸಮಾಜ ನಿರ್ಮಿಸಬಲ್ಲವು ಎಂಬುದಕ್ಕೆ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರ ಉದಾಹರಣೆ. ಅಂತಹ ಎಲ್ಲಾ ಮೌಲ್ಯಗಳು ಇವೆ. ಸಿನಿಮಾ ನೋಡಿದ ಪ್ರೇಕ್ಷಕರು ಪುನೀತ್ ರನ್ನು ಅವರ ತಂದೆಯೊಂದಿಗೆ ಹೋಲಿಸಿದ್ದಾರೆ. ಅಂತಹ ಅಭಿನಯ ಅವರದ್ದು. ಕಥೆ ಅಷ್ಟೊಂದು ಅದ್ಭುತವೇನಲ್ಲ. ಆದರೂ ಚಿತ್ರ ಸೊಗಸಾಗಿ ಬಂದಿದೆ. ಪುನೀತ್ 'ಕಸ್ತೂರಿ ನಿವಾಸ'ದ ರವಿವರ್ಮಾರನ್ನು ನೆನಪಿಸುತ್ತಾರೆ. 40 ನೇ ವಯಸ್ಸಿನಲ್ಲೂ 20 ರ ತರುಣನಂತೆ ಸ್ಟೆಪ್ ಹಾಕಿದ್ದಾರೆ. ಎಲ್ಲರೂ ಪಾತ್ರಕ್ಕೆ ಉತ್ತಮವಾಗಿ ಜೀವ ತುಂಬಿದ್ದಾರೆ. ಸಿನಿಮಾಟೋಗ್ರಫಿ ಮತ್ತೊಂದು ಪ್ಲಸ್ ಪಾಯಿಂಟ್. ವಿ.ಹರಿಕೃಷ್ಣ ಸಂಗೀತದ 'ಗೊಂಬೆ ಹೇಳುತೈತಿ' ಹಾಡು ಸದಾ ಗುನುಗುತ್ತದೆ. ಹಾಗಂತ ಸಿನಿಮಾದಲ್ಲಿ ನ್ಯೂನತೆಗಳೇ ಇಲ್ಲವೆಂದು ಹೇಳುವಂತಿಲ್ಲ.

  ಸಾಮಾನ್ಯ ಚೌಕಟ್ಟಿನ ಸಿರಿವಂತಿಕೆಯ ಸಿನೆಮಾಗೆ ಕಸ್ತೂರಿ ತಿಲಕದ ಲೇಪನ- ಕನ್ನಡಪ್ರಭ

  ಜನಪ್ರಿಯ ನಟನನ್ನು ಅತಿರಂಜಿತಗೊಳಿಸಲೆಂದೇ ಹೆಣೆದಿರುವ ಕಥೆ. ಕೆಲವೊಂದು ದೃಶ್ಯಗಳ ಕಾಲ್ಪನಿಕ ಕಥೆ ಪೊಳ್ಳಾಗಿ ಮೂಡಿ ಬಂದಿದೆ. ಪೋಷಕರನ್ನು ಮಕ್ಕಳು ಮನೆಯಲ್ಲಿ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬ ಸಾಮಾಜಿಕ ಸಂದೇಶವನ್ನು ಬಲವಾಗಿ ಹೇಳಲಾಗಿದೆ. ನಿರೂಪಣೆ ಕುತೂಹಲಕಾರಿ ಎನಿಸುವುದಿಲ್ಲ. ಕಥೆಯನ್ನು ತುಂಬಾ ಎಳೆಯಲಾಯಿತೇ ಎಂಭ ಭಾವ ಉಳಿದುಕೊಳ್ಳುತ್ತದೆ. ನಾಯಕ-ನಾಯಕಿ ಕಥೆಯಲ್ಲಿ ತಾಜಾತನ ಇಲ್ಲ. ಸಂಭಾಷಣೆಯಲ್ಲಿ ಮಾಂತ್ರಿಕತೆ ಮೂಡಿಸಲು ಸಾಧ್ಯವಾಗಿಲ್ಲ. ಪುನೀತ್ ನಟನೆಯಿಂದ ಅಭಿಮಾನಿಗಳಿಗೆ ಹಬ್ಬದೂಟ. ಎರಡು ಹಾಡು ಮುದ ನೀಡಬಲ್ಲವು. ನಿರ್ದೇಶಕ ಸ್ಕ್ರಿಪ್ಟ್ ಕೆಲಸದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿತ್ತು. ಆದರೆ 'ರಾಜಕುಮಾರ' ಅಭಿಮಾನಿಗಳ ನಡುವೆ ಸಂಭ್ರಮಿಸಬಹುದಾದ ಉತ್ತಮ ಸಿನಿಮಾ.

  ರಾಜನ ಕತೆಯಲ್ಲಿ ಭಾವುಕತೆಯ ದರ್ಬಾರು- ವಿಜಯವಾಣಿ

  ಚಿತ್ರದಲ್ಲಿ ಕತೆಗಿಂತಲೂ ಹೆಚ್ಚಾಗಿ ಭಾವುಕತೆಯದ್ದೇ ಆಳ್ವಿಕೆ. ಆರಂಭ ಸಪ್ಪೆ ಎನಿಸಿದರೂ ನಂತರದ ಸನ್ನಿವೇಶಗಳು ಸ್ವಾರಸ್ಯಕರ. ಹಾಸ್ಯವನ್ನು ತುರುಕಲೇ ಬೇಕೆಂಬ ಹಠದಿಂದಾಗಿ ನಿರೂಪಣೆ ಕೊಂಚ ಹಳಿ ತಪ್ಪಿದೆಯೇನೋ ಎನಿಸುವುದು ಸಹಜ. ಕ್ಲೈಮ್ಯಾಕ್ಸ್ ವೇಳೆಗೆ ಭಾವುಕತೆಯ ಬಂಧಕ್ಕೆ ಸಿಲುಕುವ ಪ್ರೇಕ್ಷಕನಿಗೆ ಲಾಜಿಕ್ ಕಣ್ಮರೆಯಾಗುವುದು ಗಮನಕ್ಕೆ ಬಾರದಿರಬಹುದು. ಹಾಡು ಮತ್ತು ಫೈಟ್ ಬಂದಾಗ ಮಾತ್ರ ಅಸಲಿ 'ಪವರ್' ಕಾಣಿಸುತ್ತದೆ. ಚಿತ್ರಕ್ಕೆ ಸ್ಟಾರ್ ಕಳೆ ಬರುವುದು ಕಥೆಯಲ್ಲಿನ ಸಂದೇಶದಿಂದಾಗಿ. ವಯಸ್ಸಾದ ತಂದೆ-ತಾಯಿಯ ವೃನ್ನುದ್ಧಾಶ್ರಮಕ್ಕೆ ಕಳುಹಿಸಿಬೇಡಿ ಎಂಬ ಉಪದೇಶವನ್ನು ಕಮರ್ಷಿಯಲ್ ಆಗಿ ಹೇಳುವ ಪ್ರಯತ್ನ ಮೆಚ್ಚುವಂತಿದೆ. ಮೇಕಿಂಗ್ ವಿಚಾರದಲ್ಲಿ ರಾಜಕುಮಾರ ನಿಜಕ್ಕೂ ಅದ್ಧೂರಿ. ಅದಕ್ಕೆ ಸಾಥ್ ನೀಡಿರುವುದು ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ. ಸಂಗೀತ ಪ್ಲಸ್ ಪಾಯಿಂಟ್.

  'ರಾಜಕುಮಾರ' ಚಿತ್ರ ವಿಮರ್ಶೆ : ದಿ ಟೈಮ್ಸ್ ಆಫ್ ಇಂಡಿಯಾ

  Raajkumara is one of the few mass films that has the charm of old-world family entertainers, while still retaining the sass and style related to films today. The film scores high on technical aspects. The locations are an added bonus. The entire ensemble cast have interesting characters sketched out that entertain you. Raajakumara has many allusions to thespian Dr Rajkumar, which is a treat for cinephiles. The film could have well been Puneeth's 25th as it would have done justice to his fans. If you're a fan of glossy big star films then Raajakumara is just the outing for you.

  English summary
  Power Star Puneeth Rajkumar starrer Kannada Movie 'Raajakumara' has hit the screens yesterday (March 24th). Here is the Movie Critics Review.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more