Gauthami complaint: ಕಮಲ್ ಹಾಸನ್ ಮಾಜಿ ಪ್ರೇಯಸಿ ನಟಿ ಗೌತಮಿಗೆ 25 ಕೋಟಿ ಮೋಸ.. ದೂರು ದಾಖಲಿಸಿದ ನಟಿ!
ದಕ್ಷಿಣ ಭಾರತದ ಹಿರಿಯ ನಟಿ ಗೌತಮಿ ಚೆನ್ನೈನ ಮೆಟ್ರೋಪಾಲಿಟನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲಗಪ್ಪನ್ ಕಂಪನಿಯ ಅಧ್ಯಕ್ಷ ತಾನು ಬೆವರು ಸುರಿಸಿ ಸಂಪಾಧಿಸಿದ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸಿದ್ದಾರೆಂದು ಆರೋಪ ಮಾಡಿ, ದೂರನ್ನು ದಾಖಲಿಸಿದ್ದಾರೆ.
54 ವರ್ಷದ ನಟಿ ಗೌತಮಿ ತೆಲುಗು, ತಮಿಳು, ಮಲಯಾಳಂ, ಹಿಂದೆ ಸೇರಿದಂತೆ ಕನ್ನಡ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಬಹುಭಾಷಾ ನಟಿಯ 25 ಕೋಟಿ ರೂಪಾಯಿಯ ಆಸ್ತಿಯನ್ನಿಟ್ಟುಕೊಂಡು ಮೋಸ ಮಾಡಿದ್ದರ ವಿರುದ್ಧ ನಟಿ ಸಿಡಿದೆದ್ದಿದ್ದಾರೆ.

ಅಂದ್ಹಾಗೆ, ಗೌತಮಿ ನಟನೆ ಜೊತೆಗೆ ಭಾರತೀಯ ಚಿತ್ರರಂಗದ ಮೇರು ನಟ ಕಮಲ್ ಹಾಸನ್ ಜೊತೆ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದರು. 2004 ರಿಂದ 2016ರವರೆಗೂ ಇಬ್ಬರೂ ಜೊತೆಯಾಗಿಯೇ ಇದ್ದರು. ಬಳಿಕ ಗೌತಮಿ ಸುಧೀರ್ಘ ಪತ್ರ ಬರೆದು ಬೇರೆಯಾಗುತ್ತಿರುವುದಾಗಿ ಹೇಳಿದ್ದರು. ಈಗ ಬರೋಬ್ಬರಿ 7 ವರ್ಷಗಳ ಬಳಿಕ ಚೆನ್ನೈ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸುವ ಮೂಲಕ ಪ್ರತ್ಯಕ್ಷ ಆಗಿದ್ದಾರೆ.
ಮೋಸ ಹೋದ ಬಹುಭಾಷಾ ನಟಿ
ಬಹುಭಾಷಾ ನಟಿ ಗೌತಮಿ ದಿಢೀರನೇ ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಆಫೀಸ್‌ಗೆ ಭೇಟಿ ನೀಡಿ ಅಳಗಪ್ಪನ್ ಕಂಪನಿಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಈ ವೇಳೆ ಅಳಗಪ್ಪನ್ ಕಂಪನಿಯ ಮುಖ್ಯಸ್ಥ ನಟಿಯ ಸಂಪಾಧಿಸಿದ ಸುಮಾರು 25 ಕೋಟಿ ರೂಪಾಯಿ ಆಸ್ಥಿ ವಿಚಾರದಲ್ಲಿ ಮೋಸ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. 17 ವರ್ಷದಿಂದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸುಮಾರು 125 ಸಿನಿಮಾಗಳಲ್ಲಿ ನಟಿಸಿರುವುದಾಗಿ ನಟಿ ಹೇಳಿಕೊಂಡಿದ್ದಾರೆ.

ಕಷ್ಟ ಪಟ್ಟು ದುಡಿದ ಹಣ
ನಟಿ ಗೌತಮಿ ಶ್ರೀಪೆರಂಬುದುರ್ ಎಂಬಲ್ಲಿ ಸುಮಾರು 46 ಎಕ್ಕರೆ ಆಸ್ತಿಯನ್ನು ಖರೀದಿ ಮಾಡಿದ್ದರು. ಸಿನಿಮಾದಲ್ಲಿ ದುಡಿದ ಹಣದಿಂದ ಆ ಆಸ್ತಿಯನ್ನು ಖರೀದಿಸಿದ್ದರು. ಸದ್ಯ ಇದರ ಬೆಲೆ 25 ಕೋಟಿ ರೂಪಾಯಿ ಇದೆ ಎಂದು ಹೇಳಿದ್ದಾರೆ. ಈ ಆಸ್ತಿಯನ್ನು ವೈದ್ಯಕೀಯ ಚಿಕಿತ್ಸೆ ಹಾಗೂ ಕುಟುಂಬದ ಅಗತ್ಯತೆಯ ಹಿನ್ನೆಲೆಯಲ್ಲಿ ಮಾರಲು ಮುಂದಾಗಿದ್ದರು.
ಅಳಗಪ್ಪನ್ ಕಂಪನಿ ಅಧ್ಯಕ್ಷನಿಂದ ಮೋಸ
ಈ ಕಾರಣಕ್ಕೆ ಗೌತಮಿ ತನ್ನ ಜಮೀನು ಮಾರುವುದಕ್ಕೆಂದು ಅಳಗಪ್ಪನ್ ಕಂಪನಿ ಮುಖ್ಯಸ್ಥನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಈ ವೇಳೆ ತನ್ನ ಬಳಿಕ ಹಲವು ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದರು. ಅಲ್ಲದೆ ತಮ್ಮ ಕೃಷಿ ಭೂಮಿಯನ್ನು 4 ಕೋಟಿ ರೂ.ಗೆ ಮಾರಾಟ ಮಾಡಿ ಕೇವಲ 62 ಲಕ್ಷ ರೂ. ನೀಡಿದ್ದಾರೆ. ಅಲ್ಲದೆ ತನ್ನ ಸಹಿಯನ್ನು ಫೋರ್ಜರಿ ಮಾಡಿ ಅಳಗಪ್ಪನ್ ಕಂಪನಿ ಮುಖ್ಯಸ್ಥ ಹಾಗೂ ಆತನ ಕುಟುಂಬದವರು ತನ್ನ 8 ಎಕರೆ ಜಮೀನನ್ನು ಹೊಡೆದು ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಕೊಲೆ ಬೆದರಿಕೆ ಹಾಕುತ್ತಿದ್ದಾರೆ.
ಇಷ್ಟೇ ಅಲ್ಲದೆ ಈ ಬಗ್ಗೆ ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಅಳಗಪ್ಪನ್ ಹಾಗೂ ಅವರ ಕುಟುಂಬಕ್ಕೆ 25 ಕೋಟಿ ರೂ. ಆಸ್ತಿ ವಂಚನೆ ಮಾಡಿದ ಆರೋಪದ ಹಿನ್ನೆಲೆ ಸೂಕ್ತ ತನಿಖೆ ನಡೆಸಿ ಆಕ್ಷನ್ ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ. ಈ ದೂರು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.


Click it and Unblock the Notifications











