Keerthy Suresh: ₹4 ಕೋಟಿ ಸಂಭಾವನೆ.. ದುಬಾರಿ ಕಾರು.. ಕೀರ್ತಿ ಸುರೇಶ್ ಬಳಿರುವ ಒಟ್ಟು ಆಸ್ತಿ ಎಷ್ಟು?

ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್. ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಈ ನಟಿ ಮಹಾನಟಿ ಅಂತಲೇ ಫೇಮಸ್. ಕೀರ್ತಿ ಸುರೇಶ್ ಸಿನಿಮಾ ಗೆಲ್ಲಲಿ. ಇಲ್ಲವೇ ಸಿನಿಮಾ ಸೋಲಲಿ ಅಭಿಮಾನಿಗಳು ಮಾತ್ರ ಕಡಿಮೆ ಆಗಿದ್ದೇ ಇಲ್ಲ. ದಿನದಿಂದ ಹೆಚ್ಚಾಗುತ್ತಲೇ ಇದ್ದಾರೆ.

ಕೀರ್ತಿ ಸುರೇಶ್ ನಟನೆ, ಸೌಂದರ್ಯಕ್ಕೆ ಮರುಳಾಗಿರುವ ಅಭಿಮಾನಿಗಳು ಹುಚ್ಚರಂತೆ ಆರಾಧಿಸುವವರೂ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೀರ್ತಿ ಸುರೇಶ್ ಆಕ್ಟೀವ್ ಆಗಿದ್ದು ಇನ್‌ಸ್ಟಾಗ್ರಾಂನಲ್ಲಿ ಸುಮಾರು 16 ಮಿಲಿಯನ್ ಮಂದಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ದಕ್ಷಿಣ ಭಾರತದ ಜನಪ್ರಿಯರ ನಟಿಯರಲ್ಲಿ ಕೀರ್ತಿ ಸುರೇಶ್ ಸ್ಥಾನ ಪಡೆದಿದ್ದಾರೆ.

keerthy-suresh-remuneration-net-worth

ಸಿನಿಮಾ ನಿರ್ಮಾಪಕ ಸುರೇಶ್ ಕುಮಾರ್ ಹಾಗೂ ಮೇನಕಾ ಅವರ ಪುತ್ರಿನೇ ಕೀರ್ತಿ ಸುರೇಶ್. ಹೀಗಾಗಿ ಬಾಲ್ಯದಿಂದಲೇ ಕೀರ್ತಿ ಸುರೇಶ್ ನಟಿಸುತ್ತಾ ಬಂದಿದ್ದಾರೆ. ಈ ಕಾರಣಕ್ಕೆ ಕೀರ್ತಿ ಸುರೇಶ್‌ಗೆ ಸಿನಿಮಾರಂಗ ಹೊಸತೇನೂ ಅಲ್ಲ. ಮೋಹನ್‌ಲಾಲ್ ನಟಿಸಿದ ಮಲಯಾಳಂ ಸಿನಿಮಾ 'ಗೀತಾಂಜಲಿ' ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದರು. ಈಗ ಕೋಟಿ ಕೋಟಿ ಸಂಭಾವನೆ ಪಡೆಯೋ ದಕ್ಷಿಣ ಭಾರತದ ನಟಿಯಾಗಿದ್ದರೆ. ಹಾಗಿದ್ದರೆ, ಕೀರ್ತಿ ಸುರೇಶ್ ಒಂದು ಸಿನಿಮಾಗೆ ಪಡೆಯೋ ಸಂಭಾವನೆ? ಸಂಪಾದಿಸಿದ ಒಟ್ಟು ಆಸ್ತಿ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ.

ಕೀರ್ತಿ ಸುರೇಶ್ ಒಟ್ಟು ಆಸ್ತಿ ಎಷ್ಟು?

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಸಿನಿಮಾ, ಜಾಹೀರಾತು ಸೇರಿದಂತೆ ಸೋಶಿಯಲ್ ಮೀಡಿಯಾಗಳಿಂದ ಹಣವನ್ನು ಸಂಪಾದನೆ ಮಾಡುತ್ತಾರೆ. 2023ರಲ್ಲಿ ಕೀರ್ತಿ ಸುರೇಶ್ ಸಂಪಾದನೆ ಸುಮಾರು 41 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅಲ್ಲದೆ ಪ್ರತಿ ತಿಂಗಳು ಕೀರ್ತಿ ಸುರೇಶ್ ಗಳಿಕೆ 35 ಲಕ್ಷ ರೂಪಾಯಿ ಸಂಪಾದಿಸುತ್ತಾರೆ. ಈ ಮೂಲಕ ವರ್ಷಕ್ಕೆ ಕಮ್ಮಿ ಅಂದರೂ ನಾಲ್ಕು ಕೋಟಿ ರೂಪಾಯಿ ಗಳಿಸುತ್ತಾರೆಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

keerthy-suresh-remuneration-net-worth

ಒಂದು ಸಿನಿಮಾ ಪಡೆಯೋ ಸಂಭಾವನೆ ಎಷ್ಟು?

ಕೀರ್ತಿ ಸುರೇಶ್ ಇಂದು ಬಹುಭಾಷಾ ನಟಿಯಾಗಿ ಹೊರ ಹೊಮ್ಮಿದ್ದಾರೆ. ಮೂರು ಪ್ರಮುಖ ಭಾಷೆಗಳ ಸೂಪರ್‌ಸ್ಟಾರ್‌ಗಳ ಜೊತೆ ನಟಿಸುತ್ತಿದ್ದಾರೆ. ಹೀಗಾಗಿ ಅವರ ಸಂಭಾವನೆ ಕೂಡ ಏರಿಕೆಯಾಗಿದೆ. ಮೂಲಗಳ ಪ್ರಕಾರ, ಕೀರ್ತಿ ಸುರೇಶ್ ಒಂದು ಸಿನಿಮಾ 3 ಕೋಟಿ ರೂಪಾಯಿಯಿಂದ 4 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಲ್ಲಿ ಹೇಳಲಾಗುತ್ತಿದೆ.

ಜಾಹೀರಾತುಗಳಿಂದ ಗಳಿಸೋ ಸಂಪಾದನೆ ಹೇಗಿದೆ?

ಕೀರ್ತಿ ಸುರೇಶ್ ಜಾಹೀರಾತುಗಳಿಂದಲೇ ಸುಮಾರು 30 ಲಕ್ಷ ರೂಪಾಯಿವರೆಗೂ ಸಂಪಾದನೆ ಮಾಡುತ್ತಾರೆ. ಹಲವು ಉತ್ಪನ್ನಗಳಿಗೆ ಕೀರ್ತಿ ಸುರೇಶ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ರಿಲಾಯನ್ಸ್ ಟ್ರೆಂಡ್ಸ್, ಉಶಾ ಇಂಟರ್‌ನ್ಯಾಷನಲ್, ಜೋಸ್ ಅಲುಕಾಸ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳಿಗೆ ಇವರೇ ರಾಯಬಾರಿ. ಇವುಗಳಿಂದಲೂ ಪ್ರತಿ ತಿಂಗಳೂ ಸಂಪಾದನೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಉತ್ಪನ್ನಗಳ ಪ್ರಚಾರದಿಂದ ಸುಮಾರು 25 ಲಕ್ಷ ರೂಪಾಯಿ ಗಳಸುತ್ತಾರೆ ಎನ್ನಲಾಗಿದೆ.

ಕೀರ್ತಿ ಸುರೇಶ್ ಬಳಿ ಆಸ್ತಿ ಮೌಲ್ಯವೆಷ್ಟು?

ಕೀರ್ತಿ ಸುರೇಶ್ ಬಳಿ ದುಬಾರಿ ಕಾರುಗಳಿವೆ. ವೋಲ್ವೋ ಎಸ್90. ಇದರ ಬೆಲೆ 60 ಲಕ್ಷ ರೂಪಾಯಿ. 1.38 ಕೋಟಿ ರೂಪಾಯಿಯ ಬಿಎಂಡ್ಲ್ಯೂ 7 ಸೀರಿಸ್ 730ಎಲ್‌ಡಿ, 81 ಲಕ್ಷ ರೂಪಾಯಿಯ ಮರ್ಸಿಡೀಸ್ ಬೆನ್ಜ್ ಎಎಂಜಿ ಹಾಗೂ 25 ಲಕ್ಷ ರೂಪಾಯಿಯ ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರು ಇವರ ಬಳಿಯಿದೆ. ಹಾಗೇ ಚೆನ್ನೈನಲ್ಲಿ ದುಬಾರಿ ಬೆಲೆ ಬಾಳುವ ಬಂಗಲೆ ಹಾಗೂ ಆಂಧ್ರದ ಸಿನಿಮಾ ತಾರೆಯರು ನೆಲೆಸಿರುವ ಜುಬುಲಿ ಹಿಲ್ಸ್‌ನಲ್ಲಿ ಅಪಾರ್ಟ್‌ಮೆಂಟ್ ತೆಗೆದುಕೊಂಡಿದ್ದಾರೆ.

More from Filmibeat

English summary
Actress Keerthy Suresh's birthday: here is her remuneration per movie and net worth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X