Thalaivar 170: 32 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್-ರಜನಿ: ಕೊನೆಯ ಆ ಸಿನಿಮಾ ಯಾವುದು?
ದಕ್ಷಿಣ ಭಾರತದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್. ಉತ್ತರ ಭಾರತದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್. ಇವರಿಬ್ಬರೂ ಒಟ್ಟಿಗೆ ಒಂದೇ ಸಿನಿಮಾ ಕಾಣಿಸಿಕೊಳ್ಳದೆ ಅದೆಷ್ಟು ಸಿನಿಮಾಗಳಲಾಗಿತ್ತು. ಇಬ್ಬರು ದಿಗ್ಗಜರು ಒಂದೇ ಸಿನಿಮಾದಲ್ಲಿ ನಟಿಸಬೇಕು. ಅದನ್ನು ನಾವು ನೋಡಬೇಕು ಅನ್ನೋದು ಅಭಿಮಾನಿಗಳ ಹಲವು ದಿನಗಳ ಕನಸಾಗಿತ್ತು.
ಕೊನೆಗೂ ಆಸೆ ಸುಮಾರು 32 ವರ್ಷಗಳ ಬಳಿಕ ಈಡೇರಿದೆ. ಬಾಲಿವುಡ್ ಬಿಗ್ ಬಿ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೂ ರಜನಿಕಾಂತ್ 170ನೇ ಸಿನಿಮಾದಲ್ಲಿ ನಟಿಸಲು ಬಿಗ್ ಬಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರು ಒಂದೇ ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳು ಸಂತಸ ಕೊಟ್ಟಿದೆ. ತೆರೆ ಮೇಲೆ ಇಬ್ಬರು ಲೆಜೆಂಡರಿ ನಟರ ಸಮಾಗಮವನ್ನು ನೋಡುವುದಕ್ಕೆ ಕಾತುರರಾಗಿದ್ದಾರೆ. ಈ ವಿಷಯವನ್ನು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಖುದ್ದಾಗಿ ಅನೌನ್ಸ್ ಮಾಡಿದೆ.
ರಜನಿ 170ನೇ ಸಿನಿಮಾದಲ್ಲಿ ಬಿಗ್ ಬಿ
ಬಾಲಿವುಡ್‌ನಲ್ಲಿ ಬಿಗ್ ಬಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅಷ್ಟೇ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಬ್ಯುಸಿಗಿರೋದು ಇಂಟ್ರೆಸ್ಟಿಂಗ್ ಸಂಗತಿ. ಬಿಗ್ ಬಿ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ'ಯಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ನಟನೆಯ ಈ ಸಿನಿಮಾದಲ್ಲಿ ಬಿಗ್ ಬಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದು ರಜನಿಕಾಂತ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಟೈಟಲ್ ಫಿಕ್ಸ್ ಆಗಿಲ್ಲ
ರಜನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಜೊತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದೇ ಬಿಗ್ ನ್ಯೂಸ್. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಕಾಲಿವುಡ್‌ನಲ್ಲಿ ಓಡಾಡುತ್ತಲೇ ಇತ್ತು. ಆದರೆ, ಅಧಿಕೃತವಾಗಿ ಅನೌನ್ಸ್ ಆಗಿರಲಿಲ್ಲ. ಈಗ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಅಧಿಕೃತವಾಗಿ ಅನೌನ್ಸ್ ಮಾಡಿದೆ. 'ಜೈ ಭೀಮ್' ಸಿನಿಮಾದ ನಿರ್ದೇಶಕ ಟಿಜೆ ಜ್ವಾನವೇಲು ಆಕ್ಷನ್ ಕಟ್ ಹೇಳುತ್ತಿದ್ದಾರೆ.
32 ವರ್ಷಗಳ ಬಳಿಕ ಒಂದಾದ ಜೋಡಿ
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ 1991ರಲ್ಲಿ ಒಟ್ಟಿಗೆ 'ಹಮ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಅದೇ ಕೊನೆ, ಅಲ್ಲಿಂದ ಮತ್ತೆ ಒಟ್ಟಿಗೆ ನಟಿಸಿರಲಿಲ್ಲ. ಇಬ್ಬರೂ ಉತ್ತಮ ಗೆಳೆಯರಾಗಿದ್ದರೂ, ಒಟ್ಟಿಗೆ ನಟಿಸೋ ಅವಕಾಶ ಮಾತ್ರ ಸಿಕ್ಕಿರಲಿಲ್ಲ. ಕೊನೆಗೂ ಇಬ್ಬರೂ ಜೊತೆ ನಟಸಲು ಒಂದು ಅವಕಾಶ ಸಿಕ್ಕೇ ಬಿಟ್ಟಿದೆ. ಇದಲ್ಲದೆ, 'ಅಂದಾ ಕಾನೂನ್' ಅನ್ನೋ ಸಿನಿಮಾದಲ್ಲೂ ನಟಿಸಿದ್ದರು.
'ತಲೈವಾ 170'ಯಲ್ಲಿ ಯಾರೆಲ್ಲ ಇದ್ದಾರೆ?
'ಜೈ ಭೀಮ್' ನಿರ್ದೇಶಕ ಟಿ.ಜೆ. ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಜೊತೆಗೆ ದೊಡ್ಡ ತಾರಾಬಳಗವೇ ನಟಿಸುತ್ತಿದೆ. ಮಲಯಾಳಂ ನಟ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಋತಿಕಾ ಸಿಂಗ್ ಹಾಗೂ ದುಶಾರಾ ವಿಜಯನ್ ನಟಿಸುತ್ತಿದ್ದಾರೆ.


Click it and Unblock the Notifications











