Dhanush-Aishwaryaa: ಧನುಷ್-ಐಶ್ವರ್ಯಾ ವಿಚ್ಛೇದನಕ್ಕೆ ಅರ್ಜಿನೇ ಸಲ್ಲಿಸಿಲ್ಲ.. ಮತ್ತೆ ಒಂದಾಗಬಹುದೇ? ಏನಿದೆ ಸುದ್ದಿ?

ತಮಿಳು ನಟ ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಇಬ್ಬರೂ ಬೇರೆಯಾಗಿರೋ ವಿಷಯ ಹೊಸದೇನೂ ಅಲ್ಲ. 2022ರ ಜನವರಿಯಲ್ಲಿಯೇ ನಾವಿಬ್ಬರೂ ಬೇರೆಯಾಗುತ್ತಿದ್ದೇವೆ ಎಂದು ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಇದು ಸಿನಿಮಾರಂಗಕ್ಕೆ ರಜನಿ ಹಾಗೂ ಧನುಷ್ ಫ್ಯಾನ್ಸ್‌ಗೆ ದೊಡ್ಡ ಶಾಕ್ ಆಗಿತ್ತು.

ಸುಮಾರು 18 ವರ್ಷಗಳ ದಾಂಪತ್ಯ ಜೀವನನ್ನು ಅಂತ್ಯಗೊಳಿಸಿದ್ದು ಹಲವರಿಗೆ ಬೇಸರ ತರಿಸಿತ್ತು. ಇಬ್ಬರೂ ಮತ್ತೆ ಒಂದಾಗಬಹುದು ಎಂಬ ನಿರೀಕ್ಷೆಯಲ್ಲೇ ಅಭಿಮಾನಿಗಳು ಇದ್ದಾರೆ. ಬೇರೆಯಾಗಿರುವಾಗಿ ಈ ಜೋಡಿ ಅನೌನ್ಸ್ ಮಾಡುತ್ತಿದ್ದಂತೆ ಇಬ್ಬರ ಸುತ್ತ ನೂರೆಂಟು ಸುದ್ದಿಗಳು ಓಡಾಡಿದ್ದವು.

Aishwaryaa Rajinikanth and Dhanush have not filed for divorce, but they are separated

ಕೆಲವೊಮ್ಮೆ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆಗೆ ತಯಾರಿ ನಡೆಸಿದ್ದಾರೆ. ತಮಿಳಿ ಯುವ ನಟನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ಸುದ್ದಿ ಓಡಾಡಿತ್ತು. ಆದರೆ, ಇದೆಲ್ಲ ಗಾಳಿ ಸುದ್ದಿ ಅನ್ನೋದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಮತ್ತೆ ಒಂದಾಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಹೊಸ ಸುದ್ದಿಯೊಂದು ಓಡಾಡುತ್ತಿದೆ.

ಐಶ್ವರ್ಯಾ-ಧನುಷ್ ಒಟ್ಟಿಗೆ ಸೇರಲ್ಲ

ಇತ್ತೀಚೆಗೆ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಪುತ್ರ ಯಾತ್ರನ ಶಾಲೆಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಕಂಡ ಬಳಿಕ ಐಶ್ವರ್ಯಾ ರಜನಿಕಾಂತ್ ಹಾಗೂ ಧನುಷ್ ಇಬ್ಬರೂ ಮತ್ತೆ ಒಂದಾಗುತ್ತಾರೆಂಬ ಗಾಳಿ ಸುದ್ದಿ ಹಬ್ಬಿತ್ತು. ಆದ್ರೀಗ ಇವರಿಬ್ಬರು ಮತ್ತೆ ಒಂದಾಗುವುದಿಲ್ಲ. ಆ ಆಲೋಚನೆ ಇಬ್ಬರಲ್ಲೂ ಇಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

"ಇಬ್ಬರೂ ಬೇರೆ ಮಾರ್ಗದಲ್ಲಿ ಹೊರಟಿದ್ದಾರೆ"

ಧನುಪ್‌ರಿಂದ ಬೇರಾದ ಬಳಿಕ ಐಶ್ವರ್ಯಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮತ್ತೆ ಸಿನಿಮಾ ನಿರ್ದೇಶನದ ಕಡೆಗೆ ಮರಳಿದ್ದಾರೆ. ಹೀಗಾಗಿ "ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳ ಸರಿಪಡಿಸಿಕೊಳ್ಳುವ ಆಲೋಚನೆಯಲ್ಲಿ ಇಲ್ಲ. ಅವರಿಬ್ಬರೂ ಬೇರೆಯಾಗಿ ತಮ್ಮದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ತಮ್ಮ ಬದುಕಿನಲ್ಲಿ ಇಬ್ಬರೂ ಶಾಂತಿಯನ್ನು ಕಂಡುಕೊಂಡಿದ್ದಾರೆ. ಹಾಗೇ ನಾವಿಬ್ಬರೂ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ" ಎಂದು ಧನುಷ್ ಆಪ್ತ ಮೂಲಗಳು ತಿಳಿಸಿದ್ದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

"ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿಲ್ಲ"

ತಮ್ಮ ಮಕ್ಕಳು ಯಾತ್ರ ಹಾಗೂ ಲಿಂಗ ಇಬ್ಬರ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಇಬ್ಬರೂ ಇನ್ನೂ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿಲ್ಲ. ಆದರೆ, ಇಬ್ಬರೂ ಬೇರೆಯಾಗಿದ್ದಾರೆ. ಹೀಗಾಗಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಲ್ಲ. ಮತ್ತೆ ಮದುವೆ ಆಗಬೇಕು ಅಂತ ನಿರ್ಧಾರ ಮಾಡುವ ತನಕ ಅವರು ಅರ್ಜಿಯನ್ನು ಸಲ್ಲಿಸುವುದಿಲ್ಲ. ಆ ಬಗ್ಗೆ ಇನ್ನೂ ಅವರು ಆಲೋಚನೆ ಮಾಡಿಲ್ಲ ಎಂಬುದನ್ನು ಆಪ್ತ ಮೂಲಗಳು ಹೇಳಿದ್ದಾಗಿ ವರದಿಯಾಗಿದೆ.

Aishwaryaa Rajinikanth and Dhanush have not filed for divorce, but they are separated

"ಮಕ್ಕಳ ಬೆಳೆಸುವತ್ತ ಗಮನ ಹರಿಸಿದ್ದಾರೆ"

ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಎರಡನೇ ಮದುವೆ ಆಗುವ ಬಗ್ಗೆ ಆಲೋಚನೆ ಮಾಡಿಲ್ಲ. ಸದ್ಯ ಅವರಲ್ಲಿ ತಮ್ಮ ಮಕ್ಕಳನ್ನು ಬೆಳೆಸುವ ಬಗ್ಗೆ ಆಲೋಚನೆಯಿದೆ. ತಮ್ಮ ಮಕ್ಕಳಿಗೆ ಇಬ್ಬರ ಪ್ರೀತಿ ಸಿಗಲು ಏನು ಮಾಡಬೇಕು ಅನ್ನೋದನ್ನು ಆಲೋಚನೆ ಮಾಡುತ್ತಿದ್ದು, ಇಬ್ಬರಿಗೂ ತಂದೆ ತಾಯಿ ಪ್ರೀತಿ ಕಮ್ಮಿಯಾಗದೆ ಇರಲಿ ಎಂಬುವುದರ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Aishwaryaa Rajinikanth and Dhanush have not filed for divorce, but they are separated
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X