ದಳಪತಿ ವಿಜಯ್ 'ಲಿಯೋ' ಪಾತ್ರಕ್ಕೆ ಟಫ್ ಕಾಂಪಿಟೇಷನ್: ಅರ್ಜುನ್ ಸರ್ಜಾ ಟೆರರ್ ಲುಕ್ ಟ್ರೆಂಡಿಂಗ್
ದಸರಾ ಹಬ್ಬಕ್ಕೆ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೊಂದು ದಳಪತಿ ವಿಜಯ್ ನಟಿಸುತ್ತಿರುವ 'ಲಿಯೋ' ಸಿನಿಮಾ ಕೂಡ ಒಂದು. ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾ ಬಗ್ಗೆ ಕ್ರೇಜ್ ಈಗಾಗಲೇ ಮುಗಿಲೆತ್ತರಕ್ಕೆ ಏರಿದೆ. ರಿಲೀಸ್‌ಗೆ ಇನ್ನೇನು ಒಂದು ವಾರವಿದೆ ಅನ್ನುವಾಗಲೇ ಅರ್ಜುನ್ ಸರ್ಜಾ ಪಾತ್ರ ಟ್ರೆಂಡಿಂಗ್‌ನಲ್ಲಿದೆ.
ಅರ್ಜುನ್ ಸರ್ಜಾ ಹುಟ್ಟುಹಬ್ಬದಂದು 'ಲಿಯೋ' ಸಿನಿಮಾದ ಹೆರಾಲ್ಡ್ ದಾಸ್ ಲುಕ್ ಅನ್ನು ರಿವೀಲ್ ಮಾಡಲಾಗಿತ್ತು. ಇಷ್ಟೇ ಅಲ್ಲದೆ ಇತ್ತೀಚೆಗೆ ರಿಲೀಸ್ ಆಗಿದ್ದ 'ಲಿಯೋ' ಸಿನಿಮಾದ ಟ್ರೈಲರ್‌ನಲ್ಲೂ ಹೆರಾಲ್ಡ್ ದಾಸ್ ಪಾತ್ರ ಸಿನಿಮಾ ಮಂದಿಗೆ ಥ್ರಿಲ್ಲಿಂಗ್ ಅಂತ ಅನಿಸಿತ್ತು.

ಇನ್ನೇನು ದಳಪತಿ ವಿಜಯ್ ಸಿನಿಮಾ 'ಲಿಯೋ' ಬಿಡುಗಡೆ ಇನ್ನು ಒಂದು ವಾರ ಇದೆ ಅನ್ನುವಾಗಲೇ ಅರ್ಜುನ್ ಸರ್ಜಾ ಪಾತ್ರದ ಫೋಸ್ಟರ್‌ಗಳನ್ನು ರಿವೀಲ್ ಮಾಡಲಾಗಿದೆ. ಈ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾವಿರ ಕೋಟಿ ಕಲೆಕ್ಷನ್ ನಿರೀಕ್ಷೆ
ದಳಪತಿ ವಿಜಯ್ ಸಿನಿಮಾಗೆ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಿದೆ. ಒಂದು ವಾರಕ್ಕೂ ಮುನ್ನವೇ ವಿದೇಶ ಹಾಗೂ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿರುವ 'ಲಿಯೋ' ಸಿನಿಮಾ ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ರೂಪದಲ್ಲಿ ಸಿಗುತ್ತಿದೆ ಎಂದೇ ಹೇಳಲಾಗುತ್ತಿದೆ. ಅಲ್ಲದೆ ರಜೆಗಳು ಇರುವುದರಿಂದ 'ಲಿಯೋ' ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ಭವಿಷ್ಯ ಹೇಳಲಾಗುತ್ತಿದೆ.
ಟ್ರೆಂಡಿಂಗ್‌ನಲ್ಲಿದೆ ಅರ್ಜುನ್ ಸರ್ಜಾ ಪೋಸ್ಟರ್
ಅರ್ಜುನ್ ಸರ್ಜಾ ಈ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪೋಸ್ಟರ್ ಹಾಗೂ ಟ್ರೈಲರ್‌ನಲ್ಲಿ ಅರ್ಜುನ್ ಸರ್ಜಾ ಲುಕ್ ರಿವೀಲ್ ಆಗಿವೆ. ಹೆರಾಲ್ಡ್ ದಾಸ್ ಪಾತ್ರದಲ್ಲಿ ಭಯಾನಕ ಲುಕ್ ಕೊಟ್ಟಿರೋ ಆಕ್ಷನ್ ಕಿಂಗ್ ಪೋಸ್ಟರ್ ವೈರಲ್ ಆಗುತ್ತಿವೆ. ರೆಟ್ರೋ ಶೈಲಿಯಲ್ಲಿ ಅರ್ಜುನ್ ಸರ್ಜಾ ಲುಕ್ ಸಿನಿಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ. ಪ್ರಿಂಟೆಡ್ ಶಾರ್ಟ್, ಕೈಯಲ್ಲಿ ಸಿಗರೇಟ್ ಇಟ್ಟುಕೊಂಡು ಅರ್ಜುನ್ ಸರ್ಜಾ ಕ್ರೇಜಿ ಲುಕ್ ಕೊಟ್ಟಿದ್ದಾರೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಲುಕ್ ವಿಜಯ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.

ದಳಪತಿಗೆ ಅರ್ಜುನ್ ಸರ್ಜಾ ಟಕ್ಕರ್
'ಲಿಯೋ' ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಪವರ್‌ಫುಲ್ ಪಾತ್ರವಿದೆ. 'ಲಿಯೋ'ಗೆ ಟಕ್ಕರ್ ಕೊಡುವಷ್ಟು ಖಡಕ್ ಪಾತ್ರ ಅರ್ಜುನ್ ಸರ್ಜಾ ಅವರದ್ದು ಎಂದು ಹೇಳಲಾಗುತ್ತಿದೆ. ಹೆರಾಲ್ಡ್ ದಾಸ್ ಈ ಸಿನಿಮಾದಲ್ಲಿ ಘೋಸ್ಟ್ ಮೋಡ್‌ನಲ್ಲಿದ್ದು, ಅರ್ಜುನ್ ಸರ್ಜಾ ಕರಿಯರ್‌ನಲ್ಲೇ ಅದ್ಭುತ ಪಾತ್ರ ಎನ್ನಲಾಗಿದೆ. ಹೆರಾಲ್ಡ್ ದಾಸ್ ಸ್ಟಾಂಡರ್ಡ್ ವಿಲನ್ ಎಂದು ಹೇಳಲಾಗುತ್ತಿದೆ.
ದಾಸ್ ಸಹೋದರ ಅಬ್ಬರ
ಈ ಸಿನಿಮಾದಲ್ಲಿ ಹೆರಾಲ್ಡ್ ದಾಸ್ ಪಾತ್ರದಲ್ಲಿ ಅರ್ಜುನ್ ಸರ್ಜಾ ನಟಿಸಿದ್ದರೆ, ಆಂಟೋನಿ ದಾಸ್ ಪಾತ್ರದಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಹಾಗೇ ದಳಪತಿ ವಿಜಯ್ ಲಿಯೋ ದಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾದಲ್ಲಿ ದಾಸ್ ಸಹೋದರ ಅಬ್ಬರ ಜೋರಾಗಿ ಇರುತ್ತೆ ಎಂದು ಹೇಳಲಾಗುತ್ತಿದೆ. ಸದ್ಯ ಅರ್ಜುನ್ ಸರ್ಜಾ ಪಾತ್ರ ವೈರಲ್ ಆಗುತ್ತಿದೆ.


Click it and Unblock the Notifications











