ಜಯಂ ರವಿ ಗೆಳತಿ ಕೆನಿಶಾ ಬೆಂಗಳೂರಿನವರಾ? ಮೊದಲ ಗಂಡ ಕಣ್ಮರೆ.. ಏನಿದು ಘಟನೆ?
ತಮಿಳಿನ ಸ್ಟಾರ್ ನಟ ಜಯಂ ರವಿ ವೈಯಕ್ತಿಕ ಬದುಕು ವಿವಾದಕ್ಕೆ ಸಿಕ್ಕಿಕೊಂಡಿದೆ. ಪತ್ನಿ ಆರತಿಯೊಂದಿಗೆ ಸಂಸಾರ ಮಾಡುವುದಕ್ಕೆ ಆಗುವುದಿಲ್ಲ. ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎಂದು ಘೋಷಿಸಿದ್ದರು. ಅಲ್ಲಿಂದ ಜಯಂ ರವಿಯ ವೈಯಕ್ತಿಕ ಬದುಕು ಬೀದಿ ರಂಪಾಟವಾಗಿದೆ. ಇವರ ದಾಂಪತ್ಯ ಮುರಿದು ಬೀಳುವುದಕ್ಕೆ ಗಾಯಕಿ ಕೆನಿಶಾ ಅವರೊಂದಿಗೆ ಸಂಬಂಧವೇ ಕಾರಣ ಎಂದು ಆರತಿ ಆರೋಪಿಸಿದ್ದರು.
ಅಲ್ಲಿಂದ ಇಡೀ ತಮಿಳು ಚಿತ್ರರಂಗದ ಕಣ್ಣು ಗಾಯಕಿ ಕೆನಿಶಾ ಅವರ ಮೇಲೆ ಬಿದ್ದಿದೆ. ಆದರೆ, ಆರಂಭದಲ್ಲಿ ಜಯಂ ರವಿ ಈ ಆರೋಪವನ್ನು ತಳ್ಳಿ ಹಾಕಿದ್ದರು. ಪತ್ನಿ ಆರತಿ ಹಾಗೂ ಅವರ ತಾಯಿ ತನ್ನನ್ನು ಕಂಟ್ರೋಲ್ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ಆದ್ರೀಗ ವಿವಾಹ ಸಮಾರಂಭದಲ್ಲಿ ಜಯಂ ರವಿ ತಮ್ಮ ಗೆಳತಿ ಕೆನಿಶಾ ಅವರೊಂದಿಗೆ ಬಂದಿದ್ದಾರೆ. ಆ ಬಳಿಕ ಆರತಿ ಭಾವನಾತ್ಮಕವಾಗಿ ಪತ್ರವನ್ನು ಬರೆದಿದ್ದರು. ಅದಾದ ಮೇಲೂ ಜಯಂ ರವಿ ಆರತಕ್ಷತೆಗೆ ತಮ್ಮ ಗೆಳತಿಯೊಂದು ಖುಷಿಯಲ್ಲಿ ಭಾಗವಹಿಸಿದ್ದರು.

ಸದ್ಯ ಜಯಂ ರವಿ ಹಾಗೂ ಕೆನಿಶಾ ಅವರ ಸಂಬಂಧದ ಬಗ್ಗೆ ತಮಿಳಿನ ಹಿರಿಯ ಪತ್ರಕರ್ತ ಚೆಯ್ಯಾರ್ ಬಾಲು ಕೆಲವು ಸಂಗತಿಗಳನ್ನು ಬಿಟ್ಟಿದ್ದಾರೆ. ತಮ್ಮದೇ ಯೂಟ್ಯೂಬ್‌ನಲ್ಲಿ ಚಾನೆಲ್‌ನಲ್ಲಿ ಕೆನಿಶಾ ಬಗ್ಗೆ ಕೆಲವು ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ. ಅದರಲ್ಲಿ ಕೆನಿಶಾಗೆ ಈಗಾಗಲೇ ಮದುವೆ ಆಗಿದೆ ಎಂದೂ ಹೇಳಿದ್ದಾರೆ.
ಚೆನ್ನೈನಲ್ಲಿ ಕೆಲವು ದಿನಗಳ ಹಿಂದಷ್ಟೇ ನಿರ್ಮಾಪಕ ಇಶಾರಿ ಗಣೇಶ್ ಅವರ ಮಗಳ ಮದುವೆ ನಡೆದಿತ್ತು. ಈ ಮದುವೆಗೆ ಜಯಂ ರವಿ (ರವಿ ಮೋಹನ್) ತನ್ನ ಪ್ರೇಯಸಿ ಕೆನಿಶಾ ಅವರ ಕೈ ಹಿಡಿದು ಬಂದಿದ್ದರು. ಇದು ಅಲ್ಲಿ ನೆರೆದಿದ್ದವರಿಗೆ ದೊಡ್ಡ ಶಾಕ್ ಆಗಿತ್ತು. ಜಯಂ ರವಿ ಹಾಗೂ ಪತ್ನಿ ಆರತಿಯವರ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇರುವಾಗಲೇ ಇಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಂದ ಹಿಡಿದು, ಸಿನಿಮಾ ಮಂದಿಗೆ ದೊಡ್ಡ ಶಾಕ್ ಆಗಿತ್ತು.
ಗಾಯಕಿ ಜೊತೆ ಜಯಂ ರವಿ ಸುತ್ತಾಟ; "ಇಷ್ಟು ದಿನ ಮಕ್ಕಳಿಗಾಗಿ ಸುಮ್ಮನಿದ್ದೆ, ಕುಟುಂಬವನ್ನ ಬೆಚ್ಚಿಬೀಳಿಸಿದೆ" ಎಂದ ಪತ್ನಿ ಆರತಿ
ಜಯಂ ರವಿ ವಿಚ್ಛೇದನ ಘೋಷಣೆ ಮಾಡಿದಾಗ ಪತ್ನಿ ಆರತಿಯದ್ದೇ ಏನೋ ತಪ್ಪಿದೆ ಎಂದು ಭಾವಿಸಿದ್ದರು. ಆದರೆ, ಈಗ ಜಯಂ ರವಿ ಹಾಗೂ ಆರತಿ ಬೇರೆಯಾಗುವುದಕ್ಕೆ ಗಾಯಕಿ ಕೆನಿಶಾ ಕಾರಣ ಅನ್ನೋದು ಗೊತ್ತಾಗಿದೆ. ಆರತಿ ರವಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ ಪೋಸ್ಟ್ ಬಳಿಕ ಕಾಲಿವುಡ್ ಹಾಗೂ ಅಭಿಮಾನಿಗಳಿಂದ ಬೆಂಬಲ ಸಿಗುವುದಕ್ಕೆ ಶುರುವಾಗಿದೆ ಎನ್ನಲಾಗಿದೆ. ಇದೇ ವೇಳೆ ಹಿರಿಯ ಪತ್ರಕರ್ತ ಚೆಯ್ಯಾರ್ ಬಾಲು ಕೆನಿಕಾ ಬದುಕಿನ ಬಗ್ಗೆ ಕೆಲವು ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

ಜಯಂ ರವಿ ಜೊತೆ ಗುರುತಿಸಿಕೊಂಡಿರುವ ಗಾಯಕಿ ಕೆನಿಶಾಗೆ ಹತ್ತು ವರ್ಷಗಳ ಹಿಂದೆಯೇ ಮದುವೆಯಾಗಿದೆ. ಆಕೆಯ ಪತಿ ಈಗ ಕಣ್ಮರೆಯಾಗಿದ್ದಾರೆಂದು ಮೂಲವೊಂದು ಮಾಹಿತಿ ನೀಡಿದ್ದಾಗಿ ಚೆಯ್ಯಾರ್ ಬಾಬು ಹೇಳಿಕೊಂಡಿದ್ದಾರೆ. ಹಾಗೇ ಗಾಯಕಿ ಕೆನಿಶಾ ಶ್ರೀಮಂತ ಮನೆತನ ಇಲ್ಲವೇ ಬಡ ಕುಟುಂಬಕ್ಕೆ ಸೇರಿದವಳಾಗಿರಬಹುದು ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ, ಕೆನಿಶಾ ಬೆಂಗಳೂರಿನವರು. ಅಲ್ಲಿನ ವಿವೇಕ್ ನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದಾರೆಂದು ರಿವೀಲ್ ಮಾಡಿದ್ದಾರೆ. ಇದರೊಂದಿಗೆ ಜಯಂ ರವಿ ಹೇಗೇ ಇದ್ದರೂ, ಕೆನಿಶಾ ಯಾಕೆ ವಿವಾಹಿತ ಪುರುಷನ ಜೀವನಕ್ಕೆ ಎಂಟ್ರಿ ಕೊಡಬೇಕು. ಯಾವ ಹೆಣ್ಣೂ ಕೂಡ ತನ್ನ ಗಂಡನನ್ನು ಬಿಟ್ಟುಕೊಡುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ನಿರ್ದೇಶಕ ಇಸಾರಿ ಗಣೇಶ್ ಸುಮಾರು 200 ಜನರನ್ನು ಮಾಲ್ಡೀವ್ಸ್‌ಗೆ ಕರೆದುಕೊಂಡು ಹೋಗಲಿದ್ದಾರೆ. ಅವರಲ್ಲಿ ಜಯಂ ರವಿ ಹಾಗೂ ಕೆನಿಶಾ ಅವರ ಹೆಸರು ಕೂಡ ಇದೆ. ಇದು ಅವರ ಪತ್ನಿಗೆ ಇನ್ನೆಷ್ಟು ನೋವು ಮಾಡಿರಬಹುದೆಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.


Click it and Unblock the Notifications