'ಥಗ್ಸ್ ಲೈಫ್' ತಂಡದ ಜೊತೆ ಕಿರಿಕ್ ಆಯ್ತಾ? ಕಮಲ್ ಹಾಸನ್ ಸಿನಿಮಾದಿಂದ ಸ್ಟಾರ್ ನಟ ಹೊರಬಂದಿದ್ದೇಕೆ?

'ವಿಕ್ರಂ' ಸಿನಿಮಾದ ಮೆಗಾ ಸಕ್ಸಸ್‌ ಬಳಿಕ ಕಮಲ್ ಹಾಸನ್ ಮತ್ತೆ ಸಿನಿಮಾಗಳಲ್ಲಿ ಆಕ್ಟಿವ್ ಆಗಿದ್ದಾರೆ. ಸ್ಟಾರ್ ಡೈರೆಕ್ಟರ್‌ಗಳಿಗೆ ಕಾಲ್‌ಶೀಟ್ ಕೊಟ್ಟು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲೊಂದು ಮಣಿರತ್ನಂ ನಿರ್ದೇಶಿಸುತ್ತಿರುವ 'ಥಗ್ ಲೈಫ್' ಕೂಡ ಒಂದು. ಇವರಿಬ್ಬರ ಈ ಜೋಡಿಯ ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ವೇಳೆ ಫ್ಯಾನ್ಸ್ ಬೇಸರದ ಸಂಗತಿಯೊಂದು ಹೊರಬಿದ್ದಿದೆ.

ಮಣಿರತ್ನಂ ಹಾಗೂ ಕಮಲ್ ಹಾಸನ್‌ ಸಿನಿಮಾದ ಮತ್ತೊಂದು ಅಟ್ರ್ಯಾಕ್ಷನ್ ಆಗಿದ್ದವರು ದುಖ್ಖರ್ ಸಲ್ಮಾನ್. ಮಲಯಾಳಂ ಚಿತ್ರರಂಗದ ಈ ಯುವ ನಟ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ಪ್ರಿಯರಿಗೂ ಪರಿಚಯ. ಹೀಗಾಗಿ ದುಲ್ಖರ್ ಸಲ್ಮಾನ್ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದು ಸಿನಿಮಾಗೆ ಮತ್ತಷ್ಟು ಪವರ್ ಬಂದಂತಾಗಿತ್ತು. ಆದ್ರೀಗ ಈ ನಟ ಮಣಿರತ್ನಂ ಸಿನಿಮಾದಿಂದ ಹೊರ ನಡೆದಿರೋ ಬಗ್ಗೆ ಸುದ್ದಿ ಓಡಾಡುತ್ತಿದೆ.

Dulquer Salmaan walks out of Kamal Haasan starrer Thug Life here what we know

'ಥಗ್ ಲೈಫ್' ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿದೆ. ಈ ಸಿನಿಮಾ ದೊಡ್ಡ ಸ್ಟಾರ್‌ ನಟರ ದಂಡೇ ಇದೆ. ಕಮಲ್ ಹಾಸನ್ ಜೊತೆ ಜಯಂ ರವಿ, ತ್ರಿಶಾ ಅಂತಹ ನಟರು ಆಕ್ಟ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಇದು ಬಾಕ್ಸಾಫೀಸ್‌ನಲ್ಲಿ ಚಿಂದಿ ಮಾಡುತ್ತೆ ಅನ್ನೋ ನಿರೀಕ್ಷೆಯಿದೆ. ಇದೇ ವೇಳೆ ದುಲ್ಖರ್ ಸಲ್ಮಾನ್ ಸಿನಿಮಾದಿಂದ ಔಟ್ ಆಗಿರೋ ಸುದ್ದಿ ಚಿತ್ರರಂಗದಲ್ಲಿ ಹಲ್‌ಚಲ್ ಎಬ್ಬಿಸಿದೆ.

ದುಲ್ಖರ್ ಸಲ್ಮಾನ್ ಭಾರತದ ಬಹುಬೇಡಿಕೆಯ ನಟ. ದಕ್ಷಿಣ ಭಾರತದ ಸಿನಿಮಾಗಳಷ್ಟೇ ಅಲ್ಲದೆ, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿರೋ ದುಲ್ಖರ್ 'ಥಗ್ ಲೈಫ್' ಸಿನಿಮಾ ಅವಿಬಾಜ್ಯ ಅಂಗವೆನಿಸಿದ್ದರು. ಇಷ್ಟೇ ಅಲ್ಲದೆ ಕಮಲ್ ಹಾಸನ್ ಅಂತಹ ಮೇರು ನಟನ ಸಿನಿಮಾದಿಂದ ಯಾಕೆ ಹೊರಬಿದ್ದರು? ಅನ್ನೋ ಖಚಿತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಚಿತ್ರತಂಡ ಕೂಡ ಈ ಸುದ್ದಿ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟಿಲ್ಲ.

Dulquer Salmaan walks out of Kamal Haasan starrer Thug Life here what we know

ಮಲಯಾಳಂ ನಟ ದುಲ್ಖರ್ ಸಲ್ಮಾನ್ ಈ ಸಿನಿಮಾ ಬಂದಿದ್ದೇಕೆ? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಚಿತ್ರತಂದ ಜೊತೆ ಏನಾದರೂ ಕಿರಿಕ್ ಆಗಿರಬಹುದಾ? ಇಲ್ಲ ದುಲ್ಖರ್ ಸಲ್ಮಾನ್‌ಗೆ ಸಿಗಬೇಕಿದ್ದ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ವಾ? ಅನ್ನೋ ಗೊಂದಲದಲ್ಲಿ ಅಭಿಮಾನಿಗಳು ಇದ್ದಾರೆ. ಈ ಮಧ್ಯೆ ಮಲಯಾಳಂ ನಟ ಈಗಾಗಲೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವರಿಗೆ ಡೇಟ್ ಹೊಂದಿಸುವುದಕ್ಕೆ ಆಗುತ್ತಿಲ್ಲ ಎಂದು ಗೆಸ್ ಮಾಡಲಾಗಿದೆ.

ಮಲಯಾಳಂ ನಟ ದುಲ್ಖರ್ ಸಲ್ಮಾನ್ ಕೈಯಲ್ಲಿ ನಾಲ್ಕೈದು ಪ್ರಾಜೆಕ್ಟ್‌ಗಳಿವೆ. ಸೂರ್ಯ ನಟಿಸುತ್ತಿರುವ 43ನೇ ಸಿನಿಮಾಗೆ ಇತ್ತೀಚೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಸೂರ್ಯ, ದುಲ್ಖರ್ ಜೊತೆಗೆ ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ನಜ್ರಿಯಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಸೀತರಾಮಂ' ಬಳಿಕ ತೆಲುಗಿನಲ್ಲೂ ಜನಪ್ರಿಯರಾಗಿರುವ ದುಲ್ಖರ್‌ ಬಾಲಯ್ಯ ನಟಿಸುತ್ತಿರುವ 'NBK109'ಗೂ ಜೈ ಎಂದಿದ್ದಾರೆ. ಬಾಬಿ ಅವರು ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.

'ಥಗ್ ಲೈಫ್' ಯಾಕಷ್ಟು ಮುಖ್ಯ ಅಂದರೆ, ಕಮಲ್ ಹಾಸನ್ ಹಾಗೂ ಮಣಿರತ್ನಂ 1987ರಲ್ಲಿ ತೆರೆಕಂಡ 'ನಾಯಕನ್' ಸಿನಿಮಾ ಮೂಲಕ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ಬಳಿಕ ಇವರಿಬ್ಬರ ಕಾಂಬಿನೇಷನ್ ಬಂದೇ ಇಲ್ಲ. ಹೀಗಾಗಿ ಮತ್ತೆ ಎರಡನೇ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.

More from Filmibeat

English summary
Dulquer Salmaan out of Kamal Haasan movie Thug Life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X