Amala Paul: ಭಾವಿ ಪತಿಯೊಂದಿಗಿನ ಬಾತ್‌ರೂಮ್ ಫೋಟೊ ಹಂಚಿಕೊಂಡ 'ಹೆಬ್ಬುಲಿ' ನಟಿ.. ಶೀಘ್ರದಲ್ಲಿಯೇ ಮದುವೆಗೆ ರೆಡಿ!
ದಕ್ಷಿಣ ಭಾರತದ ಜನಪ್ರಿಯ ಹಾಗೂ ವಿವಾದಾತ್ಮಕ ನಟಿ ಅಮಲಾ ಪೌಲ್. ಇತ್ತೀಚೆಗೆ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಮೊದಲ ವಿಚ್ಛೇದನದ ಬಳಿಕ 'ಹೆಬ್ಬುಲಿ' ನಟಿ ಅಮಲಾ ಪೌಲ್ ಬಾಯ್‌ಫ್ರೆಂಡ್ ವಿಚಾರಕ್ಕೆ ಸುದ್ದಿಯಲ್ಲಿದ್ದರು.
ಇತ್ತೀಚೆಗಷ್ಟೇ ಅಮಲಾ ಪೌಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಬಹುದಿನದ ಗೆಳೆಯ ಜಗತ್ ದೇಸಾಯಿ ಪ್ರಪೋಸ್ ಮಾಡಿದ್ದರು. ಆಗ ಅಮಲಾ ಪೌಲ್ ಖುಷಿ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಪ್ರಿಯಕರನಿಗೆ ಚುಂಬಿಸಿ ಹುಟ್ಟುಹಬ್ಬವನ್ನು ಸಖತ್ ಆಗಿಯೇ ಎಂಜಾಯ್ ಮಾಡಿದ್ದರು.

ಬಾಯ್ ಫ್ರೆಂಡ್ ಪ್ರಪೋಸ್ ಮಾಡಿದ ಬೆನ್ನಲ್ಲೇ ಅಮಲಾ ಪೌಲ್ ಮದುವೆಗೂ ರೆಡಿಯಾಗಿದ್ದಾರೆ. ಇಂತಹದ್ದೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇಬ್ಬರೂ ಬಾತ್‌ರೂಮ್‌ನಲ್ಲಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದರು. ಆ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
2ನೇ ಮದುವೆಗೆ ಸಜ್ಜಾದ್ರಾ ಅಮಲಾ ಪೌಲ್?
ಅಮಲಾ ಪೌಲ್ ವಿಚ್ಚೇದನದ ಬಳಿಕ ಇದೇ ಮೊದಲ ಬಾರಿಗೆ 2ನೇ ಮದುವೆ ಬಗ್ಗೆ ಚರ್ಚೆಯಾಗುತ್ತಿದೆ. ಅಮಲಾ ಬರ್ತ್‌ಡೇ ವೇಳೆ ಬಾಯ್‌ಫ್ರೆಂಡ್ ಜಗತ್ ದೇಸಾಯಿ ಪ್ರಪೋಸ್ ಮಾಡಿ ಒಪ್ಪಿಕೊಂಡಳು ಎಂದು ಸಂದೇಶ ರವಾನೆ ಮಾಡಿದ್ದರು. ಇತ್ತ ಜಗತ್ ದೇಸಾಯಿ ರಿಂಗ್ ತೋರಿಸಿ ಮಂಡಿಯೂರಿದಾಗಲೂ ಪ್ರಪೋಸ್ ಮಾಡಿದಾಗಲೂ ಅಮಲಾ ಪೌಲ್ ಯೆಸ್ ಎನ್ನುವಂತೆ ತಲೆ ಅಲ್ಲಾಡಿಸಿದ್ದರು. ಈಗ ಬಾತ್ ರೂಮ್‌ನಲ್ಲಿ ಇಬ್ಬರೂ ಜೊತೆಗಿರುವ ಫೋಟೊ ಹಂಚಿಕೊಂಡು ಮದುವೆ ರೆಡಿ ಅನ್ನೋ ಸಂದೇಶವನ್ನು ರವಾನೆ ಮಾಡಿದ್ದಾರೆ.

ಬಾತ್‌ರೂಮ್ ಫೋಟೊ ವೈರಲ್
ಶೀಘ್ರದಲ್ಲಿಯೇ ಅಮಲಾ ಪೌಲ್ ಮದುವೆ ಆಗುತ್ತಾರೆ ಅನ್ನೋ ಮಾತು ಕೇಳಿ ಬಂದಿದ್ದವು. ಅದಕ್ಕೆ ಪೂರಕ ಎನ್ನುವಂತೆ ಅಮಲಾ ಪೌಲ್ ಪೋಟೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬಾಯ್‌ಫ್ರೆಂಡ್ ಜಗತ್ ದೇಸಾಯಿ ಜೊತೆ ಬಾತ್‌ರೂಮ್‌ನಲ್ಲಿ ಇರುವ ಫೋಟೊವನ್ನು ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಅಮಲಾ ಹಂಚಿಕೊಂಡಿದ್ದರು. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪ್ರೀ ವೆಡ್ಡಿಂಗ್ ಫೋಟೊಶೂಟ್?
ಮದುವೆಗಾಗಿ ಅಮಲಾ ಪೌಲ್ ಭರ್ಜರಿ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿಯೇ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ದಾರೆ. ಅದೇ ಈ ವಾಶ್ ರೂಂ ಫೋಟೊ ಎಂದು ಹೇಳಲಾಗುತ್ತಿದೆ. ಬಾತ್‌ರೂಮ್ ಧಿರಿಸನ್ನು ಧರಿಸಿ ಇಬ್ಬರೂ ಕೈಗಳನ್ನು ಹಿಡಿದುಕೊಂಡು ಪರಸ್ಪರ ನೋಡುತ್ತಿರುವ ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಈ ಫೋಟೊವನ್ನು ನೋಡುತ್ತಿದ್ದಂತೆ ಅಮಲಾ ಪೌಲ್ ಮದುವೆಗೆ ಸಿದ್ಧತೆಗಳನ್ನು ನಡೆಸಿದ್ದಾರೆಂದು ವರದಿಯಾಗಿದೆ.
ಅಮಲಾಗೆ ಇದು ಎರಡನೇ ಮದುವೆ
ಅಂದ್ಹಾಗೆ ಅಮಲಾ ಪೌಲ್‌ಗೆ ಇದು ಎರಡನೇ ಮದುವೆ. ತಮಿಳು ನಿರ್ದೇಶಕ ಎ ಎಲ್ ವಿಜಯ್ ಜೊತೆ 2014ರಲ್ಲಿ ಅಮಲಾ ಪೌಲ್ ಮದುವೆಯಾಗಿದ್ದರು. ಆದರೆ, ಇವರ ವೈವಾಹಿಕ ಜೀವನ ಹೆಚ್ಚು ದಿನ ಉಳಿಯಲಿಲ್ಲ. 2017ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದರು. ಈಗಾಗಲೇ ನಿರ್ದೇಶಕ ವಿಜಯ್ ವೈವಾಹಿಕ ಜೀವನಕ್ಕೆ ಕಾಲಿಟಿದ್ದಾರೆ. ಆದರೆ, ಅಮಲಾ ಪೌಲ್ ಮದುವೆ ಆಗದೇ ಇದ್ದರೂ, ಆಗಾಗ ವಿವಾಹವಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಲೇ ಇತ್ತು.


Click it and Unblock the Notifications











