Indian 2: 5000 ಸ್ಕ್ರೀನ್‌ನಲ್ಲಿ 'ಇಂಡಿಯನ್ 2' ರಿಲೀಸ್; ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರವೇನು?

ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಹಾಗೂ ಶಂಕರ್ ಕಾಂಬಿನೇಷನ್ ಸಿನಿಮಾ 'ಇಂಡಿಯನ್ 2' ವಿಶ್ವದಾದ್ಯಂತ ನಾಳೆ (ಜುಲೈ 12) ರಿಲೀಸ್ ಆಗುತ್ತಿದೆ. ಶಂಕರ್ ಹಾಗೂ ಕಮಲ್ ಹಾಸನ್ ಜೋಡಿಯ ಸಿನಿಮಾ ಆಗಿದ್ದರಿಂದ ನಿರೀಕ್ಷೆ ದುಪ್ಪಟ್ಟಿದೆ. 'ಇಂಡಿಯನ್ 2' ಸಿನಿಮಾ ಕೇವಲ ತಮಿಳಿನಲ್ಲಷ್ಟೇ ಅಲ್ಲ ಹಲವು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್‌ ಕಲೆಕ್ಷನ್ ಬಗ್ಗೆ ಈಗಾಗಲೇ ಲೆಕ್ಕಾಚಾರ ಶುರುವಾಗಿದೆ.

'ಇಂಡಿಯನ್ 2' ಅಡ್ವಾನ್ಸ್ ಬುಕಿಂಗ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟ ಆಗಿದ್ದವು. ಇನ್ನು 'ಇಂಡಿಯನ್ 2' ಸಿನಿಮಾ ಮೊದಲ ದಿನ ಉತ್ತಮ ಓಪನಿಂಗ್ ಪಡೆದುಕೊಂಡಿದೆ. 28 ವರ್ಷಗಳ ಬಳಿಕ 'ಇಂಡಿಯನ್' ಸೀಕ್ವೆಲ್ ರಿಲೀಸ್ ಆಗುತ್ತಿದೆ. ಎಲ್ಲಕ್ಕಿಂತ ಮತ್ತೆ 'ಇಂಡಿಯನ್' ಅವತಾರದಲ್ಲಿ ಕಮಲ್ ಹಾಸನ್‌ರನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದರು. ಹೀಗಾಗಿ ಬಾಕ್ಸಾಫೀಸ್ ಲೆಕ್ಕಾಚಾರದ ಮೇಲೆ ಎಲ್ಲರ ಕಣ್ಭಿಟ್ಟಿದ್ದಾರೆ.

Kamal Haasan and Shankar combo movie Indian 2 day 1 Box office collection prediction

ಕಮಲ್ ಹಾಸನ್, ಶಂಕರ್ ಕಾಂಬಿನೇಷನ್ ಸಿನಿಮಾ 'ಇಂಡಿಯನ್ 2' ಈಗಾಗಲೇ ತಮಿಳಿನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಈ ವರ್ಷದಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಟ್ರೇಡ್ ಎಕ್ಸ್‌ಪರ್ಟ್‌ ವೆಬ್‌ಸೈಟ್ ಸ್ಯಾಕ್ನಿಲ್ಕ್ (sacnilk)ಪ್ರಕಾರ, ಈ ತಮಿಳು ಸಿನಿಮಾ ಭಾರತದಾದ್ಯಂತ 35 ರಿಂದ 40 ಕೋಟಿ ರೂಪಾಯಿ (nett)ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

28 ವರ್ಷಗಳ ಹಿಂದೆ ಸೇನಾಧಿಪತಿ ಲುಕ್‌ನಲ್ಲಿ ಕಮಲ್ ಹಾಸನ್ ಕಾಣಿಸಿಕೊಂಡಿದ್ದರು. ಈ ಪಾತ್ರದಲ್ಲಿ ಕಮಲ್ ಅಬ್ಬರಿಸಿದ್ದರು. ಈಗ ಮತ್ತೆ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ಮುಂದಾಗಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಸಿನಿಮಾ ತಮಿಳು ಹಾಗೂ ತೆಲುಗು ಮಾರ್ಕೆಟ್‌ನಲ್ಲಿ ಸೂಪರ್ ಓಪನಿಂಗ್ ಸಿಕ್ಕಿದೆ ಎನ್ನಲಾಗಿದೆ. ಆದರೆ, ಹಿಂದಿ ಬೆಲ್ಡ್‌ನಲ್ಲಿ 'ಇಂಡಿಯನ್ 2'ಗೆ ನಿರೀಕ್ಷಿಸಿದಷ್ಟು ಕಲೆಕ್ಷನ್ ಆಗಲಿಲ್ಲ.

Kamal Haasan and Shankar combo movie Indian 2 day 1 Box office collection prediction

'ಇಂಡಿಯನ್ 2' ಭಾರತದಾದ್ಯಂತ ಪ್ರೀ ಸೇಲ್ ಬ್ಯುಸಿನೆಸ್‌ನಿಂದ 15 ಕೋಟಿ ರೂಪಾಯಿಯಷ್ಟು ಕಲೆಕ್ಷನ್ ಆಗಿರಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇದರಲ್ಲಿ ತಮಿಳು ವರ್ಷನ್‌ನಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಸದ್ಯಕ್ಕೆ ಮೊದಲ ದಿನ ಈ ಸಿನಿಮಾ ಸುಮಾರು 40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಕಮಲ್ ಹಾಸನ್ 'ಇಂಡಿಯನ್ 2'ಗೆ ಎರಡು ಸಿನಿಮಾಗಳು ಪೈಪೋಟಿ ನೀಡುತ್ತಿವೆ. ದಕ್ಷಿಣ ಭಾರತದಲ್ಲಿ ಪ್ರಭಾಸ್ ಅಭಿನಯದ 'ಕಲ್ಕಿ 2898AD' ಬಾಕ್ಸಾಫೀಸ್‌ನಲ್ಲಿ ಅದ್ಭುತ ಗಳಿಕೆ ಕಾಣುತ್ತಿದೆ. ಅದೇ ಉತ್ತರ ಭಾರತದಲ್ಲಿ 'ಇಂಡಿಯನ್ 2' ಜೊತೆಗೆ ರಿಲೀಸ್ ಆಗಿರುವ ಅಕ್ಷಯ್ ಕುಮಾರ್ ಸಿನಿಮಾ 'ಸರ್ಫಿರಾ' ಕಡೆಗೆ ಜನರ ಒಲವಿದೆ ಎನ್ನಲಾಗಿದೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ 'ಇಂಡಿಯನ್ 2' ಗಳಿಕೆಯಲ್ಲಿ ಹಿನ್ನೆಡೆಯಾಗಬಹುದು.

ಶಂಕರ್ ನಿರ್ದೇಶನದ 'ಇಂಡಿಯನ್ 2' ಸಿನಿಮಾ ವಿಶ್ವದಾದ್ಯಂತ ಸುಮಾರು 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಈ ಹಿಂದೆ ತೆರೆಕಂಡಿರುವ ಕಮಲ್ ಹಾಸನ್ ನಟನೆಯ 'ವಿಕ್ರಮ್' ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕುತ್ತಾ? ಇಲ್ಲಾ ಕಲೆಕ್ಷನ್ ಡ್ರಾಪ್ ಅನ್ನುವ ಕುತೂಹಲವಿದೆ. ಮೊದಲ ದಿನವೇ 'ಇಂಡಿಯನ್ 2'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ 500 ಕೋಟಿ ರೂಪಾಯಿ ಕ್ಲಬ್ ಸೇರುವುದು ಅನುಮಾನ ಎನ್ನಲಾಗಿದೆ.

More from Filmibeat

English summary
Indian 2 Box office collection prediction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X