India-Pak Tensions; ಥಗ್ ಲೈಫ್ ಆಡಿಯೋ ಲಾಂಚ್ ಮುಂದೂಡಿ "ದೇಶ ಮೊದಲು.. ಕಲೆ ನಂತರ" ಎಂದ ಕಮಲ್ ಹಾಸನ್
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದೆ. ಎರಡೂ ದೇಶಗಳು ಪರಸ್ಪರ ಕ್ರಿಯೆಗೆ ಪ್ರತಿಕ್ರಿಯೆ ನೀಡುವುದಕ್ಕೆ ನಿಂತಿದೆ. ಯಾವಾಗ ಬೇಕಾದರೂ, ಎರಡೂ ದೇಶಗಳು ಪೂರ್ಣ ಪ್ರಮಾಣದಲ್ಲಿ ಯುದ್ಧ ಮಾಡಬಹುದು. ಸದ್ಯ ಎರಡು ದೇಶಗಳ ಗಡಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದೇ ಬೆನ್ನಲ್ಲೇ ಭಾರತದ ಚಿತ್ರರಂಗದ ತಾರೆಯರು ಭಾರತದ ಸೇನೆಯ ಬೆಂಬಲಕ್ಕೆ ನಿಂತಿದ್ದಾರೆ.
ಇನ್ನು ತಮಿಳು ಚಿತ್ರರಂಗದ ದಿಗ್ಗಜ ಕಮಲ್ ಹಾಸನ್ ಕೂಡ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ಬೆನ್ನಲ್ಲೇ ತಮ್ಮ 'ಥಗ್ ಲೈಫ್' ಸಿನಿಮಾದ ಆಡಿಯೋ ಲಾಂಚ್ ಅನ್ನು ಮುಂದೂಡಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಮೇ 16ರಂದು ಅದ್ಧೂರಿಯಾಗಿ ನಡೆಯ ಬೇಕಿತ್ತು. ಆದರೆ, ಈ ಆಡಿಯೋ ಲಾಂಚ್ ಅನ್ನು ಮುಂದೂಡಿಕೆ ಮಾಡಿದ್ದಾಗಿ ಬಹಿರಂಗ ಪತ್ರವನ್ನು ಬರೆದಿದ್ದಾರೆ.

ಇದರಲ್ಲಿ "ದೇಶ ಮೊದಲು, ನಂತರ ಕಲೆ" ಎಂದು ಕಮಲ್ ಹಾಸನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. 'ಥಗ್ ಲೈಫ್' ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಸರಿಯಾದ ಸಮಯದಲ್ಲಿ ನಡೆಯುತ್ತೆ ಎಂದು ಹೇಳಿದ್ದಾರೆ. ದೇಶದಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದರಿಂದ ದೇಶದ ಸೇನೆಗೆ ಬೆಂಬಲ ನೀಡುವ ಸಲುವಾಗಿ ಈ ಕಮಲ್ ಹಾಸನ್ ಈ ನಿರ್ಧಾರಕ್ಕೆ ಬಂದಿದ್ದಾರೆ.
ಮೇ 16ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ 'ಥಗ್ ಲೈಫ್'ನ ಆಡಿಯೋ ಲಾಂಚ್ ನಡೆಯಬೇಕಿತ್ತು. ಈಗ ಕಮಲ್ ಹಾಸನ್ ನೀಡಿರುವ ಹೇಳಿಕೆಯಲ್ಲಿ "ಕಲೆ ಕಾಯಬಹುದು. ಆದರೆ, ಭಾರತ ಮೊದಲು." ಎಂದು ತಮ್ಮ ಪತ್ರದಲ್ಲಿ ಹೇಳಿದ್ದು ಹೈಲೈಟ್ ಆಗಿದೆ. "ನಮ್ಮ ದೇಶದ ಗಡಿಯಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಸದ್ಯದ ಅಲರ್ಟ್ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಮೇ 16ರಂದು ನಮ್ಮ ಸಿನಿಮಾ ಥಗ್ ಲೈಫ್ ಆಡಿಯೋ ಲಾಂಚ್ ಅನ್ನು ಮುಂದೂಡಲಾಗಿದೆ." ಎಂದಿದ್ದಾರೆ.
ಇದೇ ಪತ್ರದಲ್ಲಿ ಆಡಿಯೋ ರಿಲೀಸ್‌ನ ಹೊಸ ಡೇಟ್ ಅನ್ನು ಅನೌನ್ಸ್ ಮಾಡುವುದಾಗಿಯೂ ಕಮಲ್ ಹಾಸನ್ ಹೇಳಿದ್ದಾರೆ. " ನಮ್ಮ ತಾಯ್ನಾಡಿನ ರಕ್ಷಣೆಗಾಗಿ ಯೋಧರು ಧೈರ್ಯದಿಂದ ಮುಂಚೂಣಿಯಲ್ಲಿ ಧೃಡವಾಗಿ ನಿಂತಿದ್ದಾರೆ. ಹೀಗಾಗಿ ಇದು ಆಚರಣೆ ಮಾಡುವಂತಹ ಸಮಯವಲ್ಲ. ಶಾಂತಿಯ ಹಾಗೂ ಒಗ್ಗಟ್ಟನ್ನು ತೋರಿಸುವ ಸಮಯವೆಂದು ನಾನು ಭಾವಿಸುತ್ತೇನೆ. ಸೂಕ್ತವಾದ ಸಮಯ ನೋಡಿಕೊಂಡು ಹೊಸ ದಿನಾಂಕವನ್ನು ಘೋಷಣೆ ಮಾಡಲಾಗುವುದು." ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಹಾಗೆಯೇ ಕಮಲ್ ಹಾಸನ್ ಭಾರತೀಯ ಸೇನೆಗೆ ತಮ್ಮ ಬೆಂಬಲ ಹಾಗೂ ಒಗ್ಗಟ್ಟನ್ನು ತೋರಿಸಿದ್ದಾರೆ. " ಈ ಸಮಯದಲ್ಲಿ ನಮ್ಮ ದೇಶದವನ್ನು ರಕ್ಷಿಸುತ್ತಿರುವ ಸೇನೆಯ ಧೈರ್ಯವಂತ ಪುರುಷ ಹಾಗೂ ಮಹಿಳೆಯರ ಮೇಲೆ ನಮ್ಮ ಬೆಂಬಲವಿದೆ. ನಾವು ಈ ದೇಶದ ನಾಗರೀಕರಾಗಿ ಸಂಯಮ ಹಾಗೂ ಒಗ್ಗಟ್ಟನ್ನು ಪ್ರತಿಕ್ರಿಯಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಸಂಭ್ರಮವು ಆತ್ಮಾವಲೋಕನಕ್ಕೆ ದಾರಿ ಮಾಡಿ ಕೊಡಬೇಕು" ಎಂದು ಕಮಲ್ ಹೇಳಿದ್ದಾರೆ.
ಇನ್ನು ಕಮಲ್ ಹಾಸನ್, ತ್ರಿಶಾ, ಸಿಂಬು ನಟಿಸುತ್ತಿರುವ 'ಥಗ್ ಲೈಫ್' ಸಿನಿಮಾವನ್ನು ಕಮಲ್ ಹಾಸನ್ ನಿರ್ದೇಶಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯೇ ಲಾಂಚ್ ಮಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ, ಮೇ 16ರಂದು ಆಡಿಯೋ ಲಾಂಚ್ ಆಗಬೇಕಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ವಾತಾವರಣದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ ಬಹಳ ದಿನಗಳ ಬಳಿಕ ಒಂದಾಗಿರುವುದರಿಂದ ಈ ಸಿನಿಮಾ ಮೇಲೆ ನಿರೀಕ್ಷೆ ದೊಡ್ಡದಿದೆ.


Click it and Unblock the Notifications











