ಕಮಲ್ ಹಾಸನ್ ಸಿನಿಮಾಗೆ ಸಾಯಿ ಪಲ್ಲವಿ: ಹೀರೊ ಶಿವಕಾರ್ತಿಕೇಯನ್!
ಕಾಲಿವುಡ್‌ನ ಉಳಗನಾಯಗನ್ ಕಮಲ್ ಹಾಸನ್ ತಮ್ಮ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ ಆರಂಭ ಮಾಡಿದ್ದಾರೆ. 'ವಿಕ್ರಮ್' ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದ ಬೆನ್ನಲ್ಲೇ ಹೊಸ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ.
ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ಇಂಟರ್ನ್ಯಾಷನಲ್‌ಗೆ 'ವಿಕ್ರಮ್' ಅಂತಹ ಬ್ಲಾಕ್‌ಬಸ್ಟರ್ ಸಿನಿಮಾ ಸಿಕ್ಕಿತ್ತು. ಇದು ರಾಜ್ ಕಮಲ್ ಫಿಲ್ಮ್ಸ್ ಇಂಟರ್ ನ್ಯಾಷನಲ್‌ನ 50ನೇ ಸಿನಿಮಾ ಆಗಿತ್ತು.

ತಮಿಳಿನ ಸಕ್ಸಸ್‌ಪುಲ್ ನಿರ್ದೇಶಕ ಲೋಕೇಶ್ ಕನಗರಾಜ್ 'ವಿಕ್ರಮ್' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕಮಲ್ ವೃತ್ತಿ ಬದುಕಿನಲ್ಲೇ ಅದ್ಧೂರಿ ಸಕ್ಸಸ್ ಕಂಡ ಸಿನಿಮಾ ಎಂದು ಸಾಬೀತಾಯಿತು. ಈ ಯಶಸ್ಸಿನ ಖುಷಿಯಲ್ಲೇ 51ನೇ ಸಿನಿಮಾ ಆರಂಬ ಆಗಿದೆ.
ರಾಜ್ ಕಮಲ್ ಫಿಲ್ಮ್ಸ್ ಹಾಗೂ ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ ಸಂಸ್ಥೆ ಈ ಹಿಂದೆ 'ಮೇಜರ್' ಅನ್ನೋ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಮತ್ತೊಮ್ಮೆ ಈ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಹೊಸ ಸಿನಿಮಾ ಮಾಡುವುದಕ್ಕೆ ಮುಂದಾಗಿದೆ.

ಬಹಳ ದಿನಗಳಿಂದ ಸೈಲೆಂಟ್ ಆಗಿದ್ದ ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾ ಹೀರೊ ಶಿವಕಾರ್ತಿಕೇಯನ್. ಈ ಸಿನಿಮಾ ಇವರ 21ನೇ ಸಿನಿಮಾ. ಇತ್ತೀಚೆಗೆ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಕ್ಲಾಪ್ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ.
ಶಿವಕಾರ್ತಿಕೇಯನ್, ಸಾಯಿ ಪಲ್ಲವಿ, ರಾಜ್ ಕುಮಾರ್ ಪೆರಿಯಸಾಮಿ, ಜಿವಿ ಪ್ರಕಾಶ್, ಸಹ ನಿರ್ಮಾಪಕ ವಕೀಲ್ ಖಾನ್, ಸೋನಿ ಪಿಕ್ಚರ್ಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ಲಾಡಾ ಗುರುಡೆನ್ ಸಿಂಗ್ ಹಾಗೂ ರಾಜ್ ಕಮಲ್ ಫಿಲ್ಮ್ಸ್ ಸಿಇಓ ಶ್ರೀ ನಾರಾಯಣನ್ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
SK21 ಸಿನಿಮಾವನ್ನು ರಾಜ್ ಕುಮಾರ್ ಪೆರಿಯಸಾಮಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶಿವಕಾರ್ತಿಕೇಯನ್ ಈ ಸಿನಿಮಾ ಮೂಲಕ ಅವರ ಅಭಿಮಾನಿಗಳು ಹಿಂದೆಂದೂ ನೋಡಿರದ ರೀತಿಯಲ್ಲಿ ತೋರಿಸಲು ರೆಡಿಯಾಗಿದ್ದಾರೆ. SK21 ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸ್ತಿದ್ದು, ಕಾಶ್ಮೀರದಲ್ಲಿ ಎರಡು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ. ಜಿ ವಿ ಪ್ರಕಾಶ್ ಸಂಗೀತ ನೀಡುತ್ತಿದ್ದು, ಸ್ಟೀಫನ್ ರಿಕ್ಟರ್ ಸಾಹಸ ನಿರ್ದೇಶನವಿದೆ.


Click it and Unblock the Notifications











