ಇಂಡಿಯನ್ 2 ರಿಲೀಸ್ ಆಗಿ 15 ದಿನ ಆಗಲ್ಲ, ಆಗಲೇ 'ಇಂಡಿಯನ್ 3' ಕೂಡ ಕಂಪ್ಲೀಟ್!
ಕಮಲ್ ಹಾಸನ್ ಹಾಗೂ ನಿರ್ದೇಶಕ ಶಂಕರ್ ಕಾಂಬಿನೇಷನ್ ಸಿನಿಮಾ 'ಇಂಡಿಯನ್ 2' ರಿಲೀಸ್ ಆಗಿದೆ. 28 ವರ್ಷಗಳ ಬಳಿಕ ತೆರೆಕಂಡಿರೋ ಸೀಕ್ವೆಲ್‌ಗೆ ಪ್ರೇಕ್ಷಕರು ಅಷ್ಟಾಗಿ ಆಸಕ್ತಿ ತೋರಿಲ್ಲ. ಸಿನಿಮಾ ನೋಡಿದವರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದರೊಂದಿಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 'ಇಂಡಿಯನ್ 2' ಜೊತೆ 'ಇಂಡಿಯನ್ 3' ಸಿನಿಮಾ ಶೂಟಿಂಗ್ ಕೂಡ ಮುಗಿದಿದೆ. ಆದಷ್ಟು ಬೇಗ ಈ ಸಿನಿಮಾವನ್ನೂ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ನಿರ್ಧರಿಸಿದೆಯಂತೆ.

'ಇಂಡಿಯನ್ 2' ರಿಲೀಸ್ ಆದ ಕಡಿಮೆ ಸಮಯದಲ್ಲಿಯೇ 'ಇಂಡಿಯನ್ 3' ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅಸಲಿಗೆ ಪಾರ್ಟ್ 3ನಲ್ಲಿ ಸಿನಿಮಾದ ಕಥೆ ಅಡಗಿದೆ ಅನ್ನೋ ಸುಳಿವನ್ನು ಚಿತ್ರತಂಡ ನೀಡಿದೆ. 'ಇಂಡಿಯನ್ 2' ರಿಲೀಸ್ ಆಗಿ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಇಂಡಿಯನ್‌ಗೆ ಸಾವೇ ಇಲ್ಲ ಎಂಬಂತೆ ಮತ್ತೊಮ್ಮೆ ಆಕ್ಷನ್ ಮಾಡಿ ಕಮಲ್ ಹಾಸನ್ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
'ಇಂಡಿಯನ್ 2' ಕಮಲ್ ಹಾಸನ್ ಹಾಗೂ ಶಂಕರ್ ಜೋಡಿಯ ಸಿನಿಮಾ. 28 ವರ್ಷಗಳ ಹಿಂದೆ ಇದೇ ಜೋಡಿ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. ಅದರ ಸೀಕ್ವೆಲ್ ಈಗ ರಿಲೀಸ್ ಆಗಿದೆ. ಆದರೆ, ಪ್ರೇಕ್ಷಕರಿರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರೋ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿಲ್ಲ. ಇದೇ ವೇಳೆ 'ಇಂಡಿಯನ್ 3' ಬಗ್ಗೆ ಸುದ್ದಿಯೊಂದು ಓಡಾಡುತ್ತಿರುವ ಕುತೂಹಲ ಹೆಚ್ಚುವಂತಾಗಿದೆ.
ಕಮಲ್ ಹಾಗೂ ಶಂಕರ್ ಕಾಂಬಿನೇಷನ್‌ನ 'ಇಂಡಿಯನ್ 2'ನ ಕ್ಲೈಮ್ಯಾಕ್ಸ್‌ನಲ್ಲಿಯೇ ಹಿಂಟ್ ಕೊಡಲಾಗಿತ್ತು. ಕಾಜಲ್ ಅಗರ್ವಾಲ್ ಪಾತ್ರ 'ಇಂಡಿಯನ್ 3'ಗೆ ಲೀಡ್ ಕೊಟ್ಟಿತ್ತು. ಈ ಬಂದಿರುವ ಮಾಹಿತಿಯ ಪ್ರಕಾರ, 'ಇಂಡಿಯನ್ 3' ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದೆ. ಲೈಕಾ ಪ್ರೊಡಕ್ಷನ್ ಈ ಸಿನಿಮಾವನ್ನು ತಡ ಮಾಡದೇ ಬಹುಬೇಗನೇ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ.
2025, ಜನವರಿ ತಿಂಗಳಲ್ಲಿ 'ಇಂಡಿಯನ್ 3' ರಿಲೀಸ್ ಆಗುತ್ತಿದೆ. ಮೂರನೇ ಭಾಗದಲ್ಲಿ ಸೇನಾಧಿಪತಿಯ (ಕಮಲ್ ಹಾಸನ್) ಅಸಲಿ ಕಹಾನಿ ರಿವೀಲ್ ಆಗುತ್ತಿದೆ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ. 'ಇಂಡಿಯನ್ 2'ನಲ್ಲಿ ಪ್ರಸ್ತುತ ಸಮಾಜ ಹೇಗಿದೆ? ಇಂಡಿಯನ್ ಮತ್ತೆ ಏಕೆ ಹಿಂತಿರುಗಬೇಕು? ಎಂಬುದನ್ನು ತೋರಿಸಲಾಗಿದೆ. ಮುಂದಿನ ಭಾಗದಲ್ಲಿ ಸೇನಾಪತಿಯ ಗತವೈಭವವನ್ನು ಪ್ರೇಕ್ಷಕರ ಮುಂದಿಡಲು ಶಂಕರ್ ಹೊರಟಿದ್ದಾರಂತೆ.
ಇದರೊಂದಿಗೆ ಕಮಲ್ ಹಾಸನ್ ಭಾಗ 3ನಲ್ಲಿ ಯುವಕನಾಗಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸೇನಾಪತಿ ಯಾರು? ಅವರ ಕುಟುಂಬದ ಹಿನ್ನೆಲೆ ಏನು? ಇಂತಹದ್ದೇ ಒಂದಿಷ್ಟು ವಿಷಯಗಳನ್ನು ಶಂಕರ್ ಹೇಳಲಿದ್ದಾರೆ ಎನ್ನಲಾಗಿದೆ.


Click it and Unblock the Notifications











