ಪ್ಯಾಂಟ್ ಜಿಪ್ ಹಾಕದೇ ಪೋಸ್ ಕೊಟ್ಟ ಕಮಲ್: ನಟಿಯೊಂದಿಗಿನ ಫೋಟೊ ವೈರಲ್ ಮಾಡಿದ್ಯಾರು?
ಉಳಗನಾಯಗನ್ ಕಮಲ್ ಹಾಸನ್ ತಮಿಳರ ಪಾಲಿನ ಅಚ್ಚು ಮೆಚ್ಚಿನ ನಟ. ಇವರ ಸಿನಿಮಾಗಳು ಕೂಡ ಅಷ್ಟೇ ಎಫೆಕ್ಟಿವ್ ಆಗಿರುತ್ತೆ. ಸಮಾಜಕ್ಕೆ ಸಂದೇಶವನ್ನು ನೀಡುವ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿ ಗೆದ್ದಿದ್ದಾರೆ. ಇಂತಹ ನಟನ ಒಂದು ಫೋಟೊವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ನಿನ್ನೆ (ನವೆಂಬರ್ 7) ತಾನೇ ಕಮಲ್ ಹಾಸನ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇಡೀ ಭಾರತೀಯ ಚಿತ್ರರಂಗವೇ ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿತ್ತು. ಸ್ಟಾರ್ ನಟರು ಕಮಲ್‌ಗೆ ಹ್ಯಾಪಿ ಬರ್ತ್‌ಡೇ ಹೇಳಿದ್ದರು. ಇದೇ ಸಂದರ್ಭದಲ್ಲಿ ತಮಿಳಿನ ನಟಿ ಬಿಂದು ಮಾಧವಿ ಕೂಡ ಒಂದು ಫೋಟೊವನ್ನು ಹಂಚಿಕೊಂಡು ಶುಭ ಕೋರಿದ್ದರು. ಅದೇ ಫೋಟೊ ಈಗ ಟ್ರೋಲ್ ಆಗುತ್ತಿದೆ.

ತಮಿಳು ನಟಿ ಬಿಂದು ಮಾಧವಿ ತಮಿಳಿನ ಮಾಜಿ ಬಿಗ್ ಬಾಸ್ ಸ್ಪರ್ಧಿ. ತಮಿಳಿನ ಬಿಗ್ ಬಾಸ್ ಅವತರಣಿಕೆಯನ್ನು ಕಮಲ್ ಹಾಸನ್ ನಿರೂಪಣೆ ಮಾಡುತ್ತಿರೋದು ಗೊತ್ತೇ ಇದೆ. ಹಿಂದೊಮ್ಮೆ ಕಮಲ್ ಹಾಸನ್ ಜೊತೆ ಬಿಂದು ಮಾಧವಿ ಫೋಟೊ ತೆಗೆಸಿಕೊಂಡಿದ್ದರು. ಆ ಫೋಟೊದಲ್ಲಿ ಕಮಲ್ ಹಾಸನ್ ತಮ್ಮ ಫ್ಯಾಂಟಿನ ಜಿಪ್ ಹಾಕದೇ ಪೋಸ್ ಕೊಟ್ಟಿದ್ದರು. ಅದನ್ನೇ ಇಟ್ಟುಕೊಂಡು ಒಂದು ವರ್ಗ ಟ್ರೋಲ್ ಮಾಡುತ್ತಿದೆ. ಅದಕ್ಕೆ ಕಾರಣ ಸೇಡು.
ತಮಿಳಿನ ಬಿಗ್ ಬಾಸ್ ಸೀಸನ್ ಅನ್ನು ಕಮಲ್ ಹಾಸನ್ ನಿರೂಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕಮಲ್ ಹಾಸನ್ ಒಂದು ಖಡಕ್ ನಿರ್ಧಾರವನ್ನು ತೆಗೆದುಕೊಂಡಿದ್ದರು. ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟೋನಿ ಅನ್ನುವವರನ್ನು ರೆಡ್ ಕಾರ್ಡ್ ನೀಡಿ ಹೊರ ಹಾಕಿದ್ದರು. ಕಮಲ್ ಹಾಸನ್ ಈ ನಿರ್ಧಾರವನ್ನು ಸೋಶೀಯಲ್ ಮೀಡಿಯಾದಲ್ಲಿ ಖಂಡಿಸಿದ್ದರು.
ಬಿಗ್ ಬಾಸ್ ಸ್ಪರ್ಧಿ ಪ್ರದೀಪ್ ಆಂಟೋನಿ ಮಹಿಳಾ ಸ್ಪರ್ಧಿಗಳಿಗೆ ಅಸುರಕ್ಷಿತ ಎಂದು ಕಮಲ್ ಹಾಸನ್ ಸಿಟ್ಟಿಗೆದ್ದಿದ್ದರು. ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ಧರಿಂದ ಪ್ರದೀಪ್ ಆಂಟೋನಿಯ ವಾದವನ್ನೂ ಕೇಳದೆ ಕಮಲ್ ಹಾಸನ್ ರೆಡ್ ಕಾರ್ಡ್ ನೀಡಿ ಎಲಿಮಿನೇಟ್ ಮಾಡಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್ ಆಂಟೋನಿ ಬೆಂಬಲಿಗರು ಕಮಲ್ ಹಾಸನ್ ವಿರುದ್ಧ ತಿರುಗಿಬಿದ್ದಿದ್ದರು.

ಕೆಲವೊಮ್ಮೆ ಕಮಲ್ ಹಾಸನ್ ಅವರ ಆಕ್ಷೇಪಾರ್ಹ ಫೋಟೊಗಳನ್ನು ರಿಲೀಸ್ ಮಾಡಿ ಕಿಡಿಕಾರುತ್ತಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಬಿಂದು ಮಾಧವಿ ಈ ಫೋಟೊವನ್ನು ಹಂಚಿಕೊಂಡಿದ್ದರು. ಈ ಫೋಟೊ ನೆಟ್ಟಿಗರ ಕೈ ಸೇರುತ್ತಿದ್ದಂತೆ ಹಬ್ಬ ಮಾಡಿದ್ದಾರೆ.
ಬಿಗ್ ಬಾಸ್ ಮಾಜಿ ಸ್ಪರ್ಧಿ ಬಿಂದು ಮಾಧವಿ ಹಂಚಿಕೊಂಡಿದ್ದು ಥ್ರೋಬ್ಯಾಕ್ ಫೋಟೋ. ಕಮಲ್ ಹಾಸನ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಈ ಫೋಟೊವನ್ನು ಶೇರ್ ಮಾಡಿದ್ದರು. ಆದರೆ ಕಮಲ್ ಹಾಸನ್ ಪ್ಯಾಂಟ್ ಜಿಪ್ ಹಾಕದ ಈ ಫೋಟೊವನ್ನೇ ಯಾಕೆ ಶೇರ್ ಮಾಡಿದರು? ಇದು ಬಿಂದು ಮಾಧವಿಗೆ ಗೊತ್ತಿಲ್ಲದೆ ಶೇರ್ ಮಾಡಿದ್ರಾ? ಅಥವಾ ಉದ್ದೇಶ ಪೂರ್ವಕವಾಗಿಯೇ ಶೇರ್ ಮಾಡಿದ್ರಾ? ಅನ್ನೋ ಪ್ರಶ್ನೆಯಂತೂ ಕಾಡುತ್ತಿದೆ.


Click it and Unblock the Notifications











