Kamala Haasan: ಕಮಲ್ ಹಾಸನ್ ಸಂಭಾವನೆ ₹150 ಕೋಟಿ.. ಕಾಲ್‌ಶೀಟ್ ಕೊಟ್ಟಿದ್ದು ಎಷ್ಟು ದಿನ?

'ಪ್ರಾಜೆಕ್ಟ್ ಕೆ' ಈಗ 'ಕಲ್ಕಿ: 2898 AD' ಎಂದು ಅನೌನ್ಸ್ ಮಾಡಲಾಗಿದೆ. ಇದು ತೆಲುಗು ಚಿತ್ರರಂಗದ ದುಬಾರಿ ಸಿನಿಮಾಗಳಲ್ಲಿ ಒಂದು. ಅದರಲ್ಲೂ ಪ್ರಭಾಸ್ ವೃತ್ತಿ ಬದುಕಿನ ಅತೀ ದೊಡ್ಡ ಸಿನಿಮಾ ಅಂತ ಹೇಳಬಹುದು. ಈ ಸಿನಿಮಾದಲ್ಲಿ ದಿಗ್ಗಜರ ಸಮಾಗಮವೇ ಆಗಿದೆ.

ಡಾರ್ಲಿಂಗ್ ಪ್ರಭಾಸ್ 'ಕಲ್ಕಿ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಭಾರತೀಯ ಚಿತ್ರರಂಗದ ದಿಗ್ಗಜರು ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಹಾಗೂ ದುಲ್ಕರ್ ಸಲ್ಮಾನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Kamal Haasans remuneration in Prabhas starrer Project K is 150 crores

ಇಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ 'ಕಲ್ಕಿ' ಸಿನಿಮಾದಲ್ಲಿ ನಟಿಸಲು ಕಮಲ್ ಹಾಸನ್ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅದರಂತೆಯೇ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸಲು ಎಷ್ಟು ಸಂಭಾವನೆ ಪಡೆದಿದ್ದಾರೆ ಅನ್ನೋದು ರಿವೀಲ್ ಆಗಿದೆ.

'ಕಲ್ಕಿ'ಗೆ ಕಮಲ್ ಸಂಭಾವನೆ ₹150 ಕೋಟಿ

ಪ್ರಭಾಸ್ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಸಿನಿಮಾ 'ಕಲ್ಕಿ' ಅಂತ ಟೈಟಲ್ ಅನೌನ್ಸ್ ಆಗಿದೆ. ಕಳೆದ ತಿಂಗಳಷ್ಟೇ ಸಿನಿಮಾದ ಶೀರ್ಷಿಕೆ ಅನಾವರಣ ಆಗಿತ್ತು. 'ಮಹಾನಟಿ' ಸಿನಿಮಾ ನಿರ್ದೇಶಿಸಿದ್ದ ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸುವುದಕ್ಕೆ ಕಮಲ್ ಹಾಸನ್ ಬರೋಬ್ಬರಿ 150 ಕೋಟಿ ರೂ. ಸಂಭಾವನೆಯನ್ನು ಪಡೆದಿರೋದು ಕನ್ಫರ್ಮ್ ಅಂತ ಹಲವು ಮಾಧ್ಯಮಗಳು ವರದಿ ಮಾಡಿವೆ.

Kamal Haasans remuneration in Prabhas starrer Project K is 150 crores

ಇಷ್ಟಕ್ಕೆ ಕಾರಣ 'ವಿಕ್ರಮ್' ಸಕ್ಸಸ್

ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದ 'ವಿಕ್ರಮ್' ಸಿನಿಮಾ ಭರ್ಜರಿ ಸಕ್ಸಸ್ ಕೊಟ್ಟಿತ್ತು. ಕಳೆದ ವರ್ಷ ತಮಿಳಿನಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ದೊಡ್ಡ ಯಶಸ್ಸು ಸಿಕ್ಕ ಸಿನಿಮಾಗಳಲ್ಲಿ ಇದೂ ಕೂಡ ಒಂದು. ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ, 250 ರಿಂದ 300 ಕೋಟಿ ಬಜೆಟ್‌ ಸಿನಿಮಾ ವಿಕ್ರಮ್ ಸುಮಾರು 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಲೆಕ್ಕಾಚಾರದ ಪ್ರಕಾರ ಕಮಲ್ ಹಾಸನ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಅನ್ನೋ ಮಾತು ಹೇಳಿ ಬರುತ್ತಿದೆ. ಆ ಕಾರಣಕ್ಕೆ 'ಕಲ್ಕಿ'ಗೆ 150 ಕೋಟಿ ರೂ. ಸಂಭಾವನೆ ಕೇಳಿ ಪಡೆದಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಎಷ್ಟು ದಿನಕ್ಕೆ 150 ಕೋಟಿ ರೂ.

ಕಮಲ್ ಹಾಸನ್ 'ಕಲ್ಕಿ' ಪ್ರಾಜೆಕ್ಟ್‌ಗಾಗಿ ಸುಮಾರು 150 ಕೋಟಿ ರೂಪಾಯಿ ಹಣ ಪಡೆದಿರೋದು ನಿಜ ಅಂತ ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ, ಕಮಲ್ ಪಡೆದ ಸಂಭಾವನೆಗಿಂತ ಒಟ್ಟ ಕಾಲ್‌ಶೀಟ್ ಬಗ್ಗೆ ಚರ್ಚೆಯಾಗುತ್ತಿದೆ. ಕಮಲ್ ಹಾಸನ್ ಈ ಸಿನಿಮಾಗಾಗಿ ಕೇವಲ 20 ದಿನ ಕಾಲ್‌ಶೀಟ್ ಕೊಟ್ಟಿದ್ದಾರಂತೆ. ಇಷ್ಟು ದಿನಗಳ ಒಳಗೆ ನಾಗಾ ಅಶ್ವಿನ್ ಸಿನಿಮಾ ಮುಗಿಸಬೇಕಿದೆ.

'ಕಲ್ಕಿ' ಸಿನಿಮಾದಲ್ಲಿ ಕಮಲ್ ವಿಲನ್

ಅಷ್ಟಕ್ಕೂ 'ಕಲ್ಕಿ' ಸಿನಿಮಾಗೆ ಕಮಲ್ ಹಾಸನ್‌ ಅವರೇ ಬೇಕು ಅಂತ ನಿರ್ಮಾಣ ಸಂಸ್ಥೆ ಪಟ್ಟು ಹಿಡಿದು ಕೂತಿದ್ದೇಗೆ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಈ ಸಿನಿಮಾದಲ್ಲಿ ಕಮಲ್ ಹಾಸನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ 'ಕಲ್ಕಿ' ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಪ್ರಾಮುಖ್ಯತೆ ಹೆಚ್ಚಿರಲಿದೆ.

More from Filmibeat

English summary
Kamal Haasan salary in Project K is 150 Crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X