Leo-Special Show: ತಮಿಳುನಾಡಲ್ಲಿ 'ಲಿಯೋ' ಸ್ಪೆಷಲ್ ಶೋಗೆ ಮದ್ರಾಸ್ ಹೈ ಕೋರ್ಟ್ ನಿರಾಕರಣೆ.. ಕರ್ನಾಟಕದಲ್ಲಿ ಯಾಕೆ?

'ಲಿಯೋ' ಸಿನಿಮಾ ಬಿಡುಗಡೆ ವಿಚಾರಕ್ಕೆ ಒಂದಲ್ಲ ಒಂದು ವಿವಾದಗಳು ಹುಟ್ಟಿಕೊಳ್ಳುತ್ತಲೇ ಇವೆ. ತಮಿಳುನಾಡಿನಲ್ಲೇ 'ಲಿಯೋ' ಸಿನಿಮಾಗೆ ಹಿನ್ನಡೆಯಾಗಿದೆ. ಗ್ರ್ಯಾಂಡ್ ಆಗಿ ಆಡಿಯೋ ಬಿಡುಗಡೆಗೆ ಮುಂದಾಗಿ ಚಿತ್ರತಂಡಕ್ಕೆ ತಮಿಳುನಾಡು ಸರ್ಕಾರ ಅನುಮತಿಯನ್ನು ನೀಡಿರಲಿಲ್ಲ. ಹಾಗೇ ಮೊದಲ ದಿನ ಮುಂಜಾನೆ 4 ಗಂಟೆ ಸ್ಪೆಷಲ್ ಶೋಗೂ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಸಿಕ್ಕಿರಲಿಲ್ಲ.

'ಲಿಯೋ'ಗೆ ಸ್ಪೆಷಲ್ ಶೋ ಅನುಮತಿ ಸಿಗದ ಬೆನ್ನಲ್ಲೇ ಸಿನಿಮಾದ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ಮದ್ರಾಸ್ ಹೈಕೋರ್ಟ್‌ಗೆ ಸ್ಪೆಷಲ್‌ ಶೋಗೆ ಅನುಮತಿಯನ್ನು ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು. ಆದರೆ, ಅಲ್ಲೂ ಹಿನ್ನೆಡೆಯಾಗಿದೆ. ಬೆಳಗ್ಗೆ 4 ಗಂಟೆ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿಯನ್ನು ನೀಡಿಲ್ಲ.

madras-high-court-thalapathy-vijay-movie-leo

ಇತ್ತ ತಮಿಳುನಾಡು ಸರ್ಕಾರ ಒಂದು ದಿನಕ್ಕೆ 5 ಶೋ ಮಾತ್ರ ಎಂದು ಹೇಳಿತ್ತು. ಅಲ್ಲದೆ ಬೆಳಗ್ಗೆ 9 ಗಂಟೆಗೆ ಶೋ ಆರಂಭ ಆಗಬೇಕು. ರಾತ್ರಿ 1.30ರೊಳಗೆ ಮುಗಿಯಬೇಕು ಎಂದು ಹೇಳಿತ್ತು. ಈ ಕಾರಣಕ್ಕೆ 'ಲಿಯೋ' ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲೂ ಹಿನ್ನಡೆಯಾಗಿದ್ದು, ಬೆಳಗ್ಗೆ 4 ಗಂಟೆ ಹಾಗೂ 7 ಗಂಟೆ ವಿಶೇಷ ಪ್ರದರ್ಶನಕ್ಕೆ ಅನುಮತಿಯನ್ನು ನ್ಯಾಯಾದೀಶರು ನಿರಾಕರಿಸಿದ್ದಾರೆ.

ಕೋರ್ಟ್ ಮೊರೆ ಹೋಗಿದ್ದೇಕೆ?

ಅಕ್ಟೋಬರ್ 16ರಂದು 'ಲಿಯೋ' ನಿರ್ಮಾಪಕರು ಬೆಳಗ್ಗೆ 4 ಗಂಟೆ ಹಾಗೂ 7 ಗಂಟೆ ವಿಶೇಷ ಶೋಗಳಿಗೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಮೊದಲ ದಿನ ಅಂದರೆ ಅಕ್ಟೋಬರ್ 19 ಹಾಗೂ ಅಕ್ಟೋಬರ್ 24ರಂದು ದಿನಕ್ಕೆ 6 ಶೋಗಳನ್ನು ಪ್ರದರ್ಶನ ಮಾಡಲು ಅನುಮತಿ ನೀಡಬೇಕು ಎಂದು ಮನವಿಯನ್ನು ಸಲ್ಲಿಸಿದ್ದರು. ನಿನ್ನೆ ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ ಬಳಿಕ ಇಂದಿಗೆ (ಅಕ್ಟೋಬರ್ 17) ತೀರ್ಪನ್ನು ಖಾಯ್ದಿರಿಸಿತ್ತು.

ವಿಶೇಷ ಶೋಗೆ ಅನುಮತಿ ನಿರಾಕರಣೆ

ನ್ಯಾಯಾಧೀಶೆ ಅನಿತಾ ಸುಮಂತ್ 'ಲಿಯೋ' ದೂರನ್ನು ಆಲಿಸಿದ್ದರು. ಈ ಮೂಲಕ ವಿಶೇಷ ಪ್ರದರ್ಶನಗಳಿಗೆ ಅವಕಾಶ ನೀಡಬೇಕೋ ಬೇಡವೋ ಅನ್ನುವ ನಿರ್ಧಾರವನ್ನು ತೆಗೆದುಕೊಳ್ಳಲು ತಮಿಳುನಾಡು ಸರ್ಕಾರ ಅವಕಾಶ ನೀಡಿದ್ದಾರೆ. ಹಾಗೇ ತಮಿಳುನಾಡು ಸರ್ಕಾರದ ನಿಯಮವನ್ನು ಉಲ್ಲಂಘಿಸುವಂತೆ ಇಲ್ಲ ಎಂದೂ ಹೇಳಿದೆ. ಹಾಗೇ ತಮಿಳುನಾಡು ಸರ್ಕಾರ ನಾಳೆ (ಅಕ್ಟೋಬರ್ 18) ಮಧ್ಯಾಹ್ನದ ಒಳಗೆ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು ಎಂದು ಹೇಳಿದೆ.

ಉದ್ದೇಶಪೂರ್ವಕವಾಗಿ ಅನುಮತಿ ನೀಡಿಲ್ಲವೇ?

ದಳಪತಿ ವಿಜಯ್ ಹಾಗೂ ತಮಿಳುನಾಡ ಸರ್ಕಾರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬೇಕಂತಲೇ ಡಿಎಂಕೆ ವಿಜಯ್ ಸಿನಿಮಾ ರಿಲೀಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. 'ಲಿಯೋ' ಆಡಿಯೋ ರಿಲೀಸ್ ಮಾಡಲು ಅವಕಾಶ ಕೊಡಲಿಲ್ಲ. ಈಗ ಎರಡು ವಿಶೇಷ ಶೋಗಳಿಗೂ ಅವಕಾಶ ಕೊಟ್ಟಿಲ್ಲ. ಈ ಮೂಲಕ ವಿಜಯ್ ಜನಪ್ರಿಯತೆ ಕಂಡು ತಮಿಳು ಸರ್ಕಾರ ಹೆದರಿದೆ ಎಂದು ಎಐಡಿಎಂಕೆ ಮುಖಂಡರು ಆರೋಪ ಮಾಡುತ್ತಿದ್ದಾರೆ.

ಬಿಗ್‌ಸ್ಟಾರ್ ಕಾಸ್ಟ್ ಸಿನಿಮಾ

ದಳಪತಿ ವಿಜಯ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್‌ನ ಎರಡನೇ ಸಿನಿಮಾವಿದು. ಅಕ್ಟೋಬರ್ 19ರಂದು ಅದ್ಧೂರಿಯಾಗಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ದಳಪತಿ ವಿಜಯ್ ಜೊತೆ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಗೌತಮ್ ವಾಸುದೇವ್ ಮೆನನ್, ಪ್ರಿಯಾ ಆನಂದ್, ಮಡೋನಾ ಸೆಬಾಸ್ಟಿಯನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಹಲವು ಸ್ಟಾರ್ ಮಂದಿ ನಟಿಸಿದ್ದಾರೆ.

More from Filmibeat

English summary
Madras High Court denies providing a special 4 a.m. show of Thalapathy Vijay movie Leo:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X