Vijay Campaign Tragedy: ನಟ ವಿಜಯ್ ಪ್ರಚಾರದ ವೇಳೆ ಕಾಲ್ತುಳಿತ ಪ್ರಕರಣ; ಸಂತಾಪ ಸೂಚಿಸಿದ ರಜನಿ, ಕಮಲ್ ಪ್ರತಿಕ್ರಿಯೆ
ದಳಪತಿ ವಿಜಯ್ ಪೊಲಿಟಿಕಲ್ ಕ್ಯಾಂಪೇನ್ ಮಹಾ ದುರಂತಕ್ಕೆ ಸಾಕ್ಷಿಯಾಗಿದೆ. ತಮಿಳುನಾಡಿನ ಕರೂರಿನಲ್ಲಿ ಇಂದು (ಸೆಪ್ಟೆಂಬರ್ 27) ಪ್ರಚಾರವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಕಾಲ್ತುಳಿತಕ್ಕೆ ಸಿಕ್ಕು ಸುಮಾರು 31 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಈಗ ತಮಿಳುನಾಡಿನ ಜನರಿಗೆ ದೊಡ್ಡ ಶಾಕ್ ಆಗಿದೆ. ಈ ದುರಂತಕ್ಕೆ ನಟ ವಿಜಯ್ ನೋಡುವುದಕ್ಕೆ ಒಮ್ಮೆ ಜನರು ನುಗ್ಗಿದ್ದೇ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಈ ಘಟನೆ ತಮಿಳುನಾಡು ಮಂದಿಗೆ ಆಘಾತವನ್ನುಂಟು ಮಾಡಿದೆ. ಈಗಾಗಲೇ ತಮಿಳುನಾಡಿನ ಸಿಎಂ ಎಂ.ಕೆ ಸ್ಟ್ಯಾಲಿನ್ ತ್ವರಿತ ತನಿಖೆಗೆ ಆದೇಶವನ್ನು ಹೊರಡಿಸಿದ್ದಾರೆ. ಈ ದುರ್ಘಟನೆಗೆ ಪ್ರಮುಖ ಕಾರಣವನ್ನು ತಿಳಿಸುವಂತೆ ಆದೇಶಿಸಿದ್ದಾರೆ. ದುರಂತಕ್ಕೆ ತಮಿಳುನಾಡಿನ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಸೇರಿದಂತೆ ಗಣ್ಯರು ಈ ಪ್ರಕರಣದ ಬಗ್ಗೆ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಈ ದುರ್ಘಟನೆಗೆ ದಳಪತಿ ವಿಜಯ್ ಅವರೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಪೊಲೀಸರು ನೀಡಿದ ಸೂಚನೆಗಳನ್ನು ದಳಪತಿ ವಿಜಯ್ ಹಾಗೂ ಕಾರ್ಯಕರ್ತರು ಪಾಲಿಸದೆ ಇರುವುದರಿಂದ ಈ ದುರಂತ ಸಂಭವಿಸಿದೇ ಎಂದು ಹೇಳಲಾಗುತ್ತಿದೆ. ಇನ್ನು ದುರ್ಘಟನೆಗೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ಎಕ್ಸ್ ಖಾತೆಯಲ್ಲಿ ಸಂತಾಪವನ್ನು ಸೂಚಿಸಿದ್ದಾರೆ.
ಮೃತರ ಕುಟುಂಬಕ್ಕೆ ರಜನಿಕಾಂತ್ ಸಂತಾಪ
ವಿಜಯ್ ರಾಜಕೀಯ ಸಭೆಯ ವೇಳೆ ನಡೆದ ಕಾಲ್ತುಳಿತ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಶಾಕ್ ಆಗಿದೆ. ಈ ದುರ್ಘಟನೆಯಲ್ಲಿ ಸುಮಾರು 31 ಮಂದಿ ಸಾವನ್ನಪ್ಪಿದ್ದು ಕುಟುಂಬಗಳಿಗೆ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಹಾಗೇ ಗಾಯಗೊಂಡವರಿಗೆ ಸಾಂತ್ವಾನವನ್ನು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಹೀಗೆ ಬರೆದು ಪೋಸ್ಟ್ ಮಾಡಿದ್ದಾರೆ.
ರಜನಿಕಾಂತ್ ತಮ್ಮ ಎಕ್ಸ್ ಪೋಸ್ಟ್ ಹೀಗಿದೆ. "ತಮಿಳುನಾಡಿನ ಕರೂರಿನಲ್ಲಿ ಅಮಾಯಕ ಜೀವಗಳ ಹಾನಿಯಾಗಿರುವ ಸುದ್ದಿ ನನ್ನ ಹೃದಯವನ್ನು ಕಲುಕುವಂತೆ ಮಾಡಿದೆ. ಈ ದುರ್ಘಟನೆ ನನಗೆ ತುಂಬಾನೇ ನೋವುಂಟು ಮಾಡಿದೆ. ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುತ್ತೇನೆ. ಹಾಗೇ ಗಾಯಗೊಂಡವರಿಗೆ ನನ್ನ ಸಾಂತ್ವನ" ಎಂದು ರಜನಿಕಾಂತ್ ಹೇಳಿದ್ದಾರೆ.
ಕಮಲ್ ಹಾಸನ್ ಸಂತಾಪ
ಈ ದುರ್ಘಟನೆ ರಾಜಕೀಯ ವಲಯದಲ್ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ರಾಜಕೀಯ ಮುಖಂಡರು ಹಾಗೂ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ದುರ್ಘಟನೆಗೆ ನೇರವಾಗಿ ದಳಪತಿ ವಿಜಯ್ ಅವರನ್ನೇ ದೂಷಿಸುತ್ತಿದ್ದಾರೆ. ಇತ್ತ ತಮಿಳು ನಟ ಕಮಲ್ ಹಾಸನ್ ಕೂಡ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ." ಇದು ಹೃದಯ ಕಲಕುವ ದುರ್ಘಟನೆ. ಕರೂರಿನಿಂದ ಬಂದ ಈ ಆಘಾತಕಾರಿ ಸುದ್ದಿ ನನಗೆ ತೀವ್ರ ನೋವುಂಟು ಮಾಡಿದೆ. ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ ಅಮಾಯಕ ಜೀವಗಳಿಗೆ ಸಂತಾಪ ಸೂಚಿಸುವುದಕ್ಕೆ ನನಗೆ ಪದಗಳೇ ಸಿಗುತ್ತಿಲ್ಲ" ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಹಾಗೆ ನಟ ತಮಿಳುನಾಡು ಸರ್ಕಾರಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. " ಈ ಕಾಲ್ತುಳಿತಕ್ಕೆ ಸಿಕ್ಕು ಗಂಭೀರವಾಗಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಬೇಕು ಎಂದು ನಾನು ತಮಿಳುನಾಡು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ." ಎಂದು ಕಮಲ್ ಹಾಸನ್ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ. ಇಂತಹ ಘಟನೆಗಳು ಮತ್ತೆ ಪುನರಾವರ್ತನೆ ಆಗದಂತೆ ಮತ್ತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಹಲವರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











