'ರೋಬೊ' ಸಿನಿಮಾದಲ್ಲಿ ರಜನಿ ಬದಲು ಕಮಲ್.. ಐಶ್ವರ್ಯಾ ಬದಲು ಪ್ರೀತಿ ಜಿಂಟಾ ನಟಿಸಿದ್ರೆ ಹೇಗಿರುತ್ತಿತ್ತು?

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿ ಕರಿಯರ್‌ನಲ್ಲಿ ಮೆಗಾ ಹಿಟ್ ಕೊಟ್ಟ ಸಿನಿಮಾ 'ಎಂದಿರನ್'. ಪ್ಯಾನ್ ಇಂಡಿಯಾ ಕ್ರೇಜ್ ಶುರುವಾಗುವ ಮೊದಲೇ ಈ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಪ್ರೇಕ್ಷಕರಿಗೂ ರಜನಿಕಾಂತ್ ಅನ್ನು ರೋಬೊ ಅವತಾರದಲ್ಲಿ ನೋಡುವುದಕ್ಕೆ ಮುಗಿಬಿದ್ದಿದ್ದರು. ಥಿಯೇಟರ್‌ನಲ್ಲೂ ರಜನಿ ಯನ್ನು ನೋಡಿ ಜನರು ಶಿಳ್ಳೆಗಳು ಬಿದ್ದಿದ್ದವು.

ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಕಾಂಬಿನೇಷನ್‌ ಸಿನಿಪ್ರಿಯರಿಗೆ ಹುಚ್ಚು ಹಿಡಿಸಿತ್ತು. ಮೆಗಾ ಸಿನಿಮಾಗಳ ಸೃಷ್ಟಿಕರ್ತ ಶಂಕರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. 2010ರಲ್ಲಿ ತೆರೆಕಂಡ 'ರೋಬೊ' (ಎಂದಿರನ್) ಸಿನಿಮಾ ಟ್ರೆಂಡ್ ಸೆಟ್ಟರ್ ಆಗಿತ್ತು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ದಾಖಲೆ ಕಲೆಕ್ಷನ್ ಮಾಡಿತ್ತು.

Rajinikanth movie Enthiran was initially started with Kamal Haasan amp amp Preity Zinta photoshoot also done

14 ವರ್ಷಗಳ ಹಿಂದೆನೇ ಸುಮಾರು 130 ಕೋಟಿ ರೂಪಾಯಿ ವೆಚ್ಚದಲ್ಲಿ 'ರೋಬೊ' ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುಮಾರಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆ ಮಟ್ಟಿಗೆ ಸದ್ದು ಮಾಡಿದ್ದ ಈ ಸಿನಿಮಾದ ಹಿಂದೊಂದು ಇಂಟ್ರೆಸ್ಟಿಂಗ್ ಕಥೆಯಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ರಜನಿಗೆ ಸಿನಿಮಾ ಮಾಡುವುದಕ್ಕಿಂತಲೂ ಮುನ್ನ ಕಮಲ್ ಹಾಸನ್ ಹಾಗೂ ಶಾರುಖ್ ಖಾನ್‌ಗೆ ಅಪ್ರೋಚ್ ಮಾಡಲಾಗಿತ್ತು. ಕಮಲ್ ಹಾಸನ್ ಹಾಗೂ ಪ್ರೀತಿ ಜಿಂಟಾರನ್ನು ಇಟ್ಟುಕೊಂಡು ಫೋಟೊಶೂಟ್ ಕೂಡ ಮಾಡಲಾಗಿತ್ತು. ಅಂದ್ಹಾಗೆ, ನಿರ್ದೇಶಕ ಶಂಕರ್ 1999ರಲ್ಲಿ 'ರೋಬೊ' ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆ ಸಮಯದಲ್ಲಿ ಕಮಲ್ ಹಾಸನ್ ಹಾಗೂ ಪ್ರೀತಿ ಜಿಂಟಾರನ್ನು ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದರು.

ಶಂಕರ್ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದರು. ಕಮಲ್ ಹಾಸನ್‌ಗೆ ಆಕ್ಷನ್ ಕಟ್ ಹೇಳಿದ್ದ 'ಇಂಡಿಯನ್' ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಹಾಗೇ ಅರ್ಜುನ್ ಸರ್ಜಾ ನಟಿಸಿದ 'ಮುದಲ್ವವನ್' ಸಿನಿಮಾ ಕೂಡ ಮೆಗಾ ಹಿಟ್ ಆಗಿತ್ತು. ಹೀಗಾಗಿ ಸೈನ್ಸ್ ಫಿಕ್ಷನ್ ಹಿನ್ನೆಲೆಯುಳ್ಳ ಕಥೆ ಮಾಡಬೇಕು ಅಂತ ನಿರ್ಧರಿಸಿದ್ದರು. ಆಗಲೇ ಕಮಲ್ ಹಾಸನ್ ಹಾಗೂ ಪ್ರೀತಿ ಜಿಂಟಾ ಇಟ್ಟುಕೊಂಡು ಫೋಟೊಶೂಟ್ ಮಾಡಿದ್ದರು.

Rajinikanth movie Enthiran was initially started with Kamal Haasan amp amp Preity Zinta photoshoot also done

ಆದರೆ, ಅದ್ಯಾಕೋ ಈ ಸಿನಿಮಾ ಮುಂದಕ್ಕೆ ಸಾಗಲೇ ಇಲ್ಲ. ಕಮಲ್ ಹಾಸನ್ ಹಾಗೂ ಪ್ರೀತಿ ಜಿಂಟಾ ಇಬ್ಬರು ನಿರ್ದೇಶಕ ಶಂಕರ್‌ಗೆ ಡೇಟ್ ಕೂಡ ಕೊಟ್ಟಿದ್ದರು. 1999ರಲ್ಲಿ ಈ ಸಿನಿಮಾ ಟೇಕಾಫ್ ಆಗಲಿಲ್ಲ. ಆ ಬಳಿಕ 2007ರಲ್ಲಿ ಶಾರುಖ್ ಖಾನ್ ಹಾಗೂ ಪ್ರಿಯಾಂಕಾ ಚೋಪ್ರಾಗೆ 'ಎಂದಿರನ್' ಐಡಿಯಾ ಹೇಳಲಾಗಿತ್ತು. ಆದರೆ, ಶಾರುಖ್ ಖಾನ್‌ಗೆ ಕ್ರಿಯೇಟಿವ್ ಪಾರ್ಟ್ ಇಷ್ಟ ಆಗಿರಲಿಲ್ಲ ಎನ್ನಲಾಗಿದೆ.

ಆ ಬಳಿಕ ರಜನಿಕಾಂತ್ ಹಾಗೂ ಐಶ್ವರ್ಯಾ ರೈಗೆ 'ರೋಬೊ' ಕಥೆ ಹೇಳಿದ್ದರು. ಸೂಪರ್‌ಸ್ಟಾರ್‌ಗೆ ಕಥೆ ಇಷ್ಟ ಆಗಿತ್ತು. ಐಶ್ವರ್ಯಾ ರೈ ಕೂಡ ಸಿನಿಮಾ ಒಪ್ಪಿಕೊಂಡಿದ್ದರು. ಹೀಗಾಗಿ 2010ರಲ್ಲಿ 'ರೋಬೊ' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಬಿಡುಗಡೆ ಬಳಿಕ ದೇಶಾದ್ಯಂತ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

More from Filmibeat

English summary
Enthiran movie photoshoot initially done with Kamal Haasan & Preity Zinta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X