Indian 2: 'ನಮಸ್ಕಾರ.. ಮರಳಿ ಬಂದ ಇಂಡಿಯನ್' ಗೆಳೆಯ 'ಇಂಡಿಯನ್ 2' ಇಂಟ್ರೋ ರಿಲೀಸ್ ಮಾಡಿದ ರಜನಿ!
ತಮಿಳಿನ ಬಹು ನಿರೀಕ್ಷಿತ ಸಿನಿಮಾ 'ಇಂಡಿಯನ್ 2'. ಕಮಲ್ ಹಾಸನ್ ಹಾಗೂ ನಿರ್ದೇಶಕ ಶಂಕರ್ ಕಾಂಬಿನೇಷನ್ ಸಿನಿಮಾ ಮೇಲೆ ಇಡೀ ದೇಶವೇ ಎದುರು ನೋಡುತ್ತಿತ್ತು. 'ಇಂಡಿಯನ್ 2' ಸಿನಿಮಾ ಇಂಟ್ರೋ ರಿಲೀಸ್ ಆಗಿದೆ. ವಿಶೇಷ ಅಂದರೆ, ಈ ಇಂಟ್ರೋವನ್ನು ಸೂಪರ್‌ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದಾರೆ.
22 ವರ್ಷಗಳ ಹಿಂದೆ ಶಂಕರ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ 'ಇಂಡಿಯನ್' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಹೊಸ ದಾಖಲೆಗಳನ್ನು ಬರೆದಿತ್ತು. ಇಷ್ಟು ದೊಡ್ಡ ಸಕ್ಸಸ್ ಕೊಟ್ಟಿದ್ದರೂ, ಪಾರ್ಟ್ 2 ಸಿನಿಮಾ ಮಾಡುವ ಬಗ್ಗೆ ಈ ಜೋಡಿ ಆಲೋಚನೆ ಮಾಡಿರಲಿಲ್ಲ.

ಆದ್ರೀಗ 'ಇಂಡಿಯನ್ 2' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಮತ್ತೆ ಅದೇ ಜೋಡಿ ಒಂದಾಗಿ ಹಂಗಾಮ ಮಾಡುವುದಕ್ಕೆ ಸಜ್ಜಾಗಿದೆ. ಭ್ರಷ್ಟಚಾರ ವಿರುದ್ಧ ಸಿಡಿದೇಳುವ ಇಂಡಿಯನ್ ಈ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಹೊರಟಿದ್ದಾರೆ. ಟೀಸರ್ ನೋಡಿದರೆ 'ಇಂಡಿಯನ್ 2' ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ರೆಡಿಯಾಗಿರೋ ಹಾಗೆ ಕಾಣಿಸುತ್ತಿದೆ.
'ಇಂಡಿಯನ್ 2' ಸಿನಿಮಾ ಮೊದಲ ಇಂಟ್ರೋವನ್ನು ಸೂಪರ್‌ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಲಿಂಕ್ ಶೇರ್ ಮಾಡಿದ್ದು, "ನಮಸ್ಕಾರ.. ಮರಳಿ ಬಂದಿದ್ದಾನೆ ಇಂಡಿಯನ್.. ಇಗೋ ಇಂಡಿಯನ್ 2 ಇಂಟ್ರೋವನ್ನು ಅರ್ಪಿಸುತ್ತಿದ್ದೇನೆ" ಎಂದು ಗೆಳೆಯನ ಸಿನಿಮಾ ತುಣುಕನ್ನು ರಿಲೀಸ್ ಮಾಡಿ ಶುಭಕೋರಿದ್ದಾರೆ.
ಹಾಗಂತ ಕೇವಲ ರಜನಿಕಾಂತ್ ಅಷ್ಟೇ ಅಲ್ಲ. ಕನ್ನಡದಲ್ಲಿ ಕಿಚ್ಚ ಸುದೀಪ್ 'ಇಂಡಿಯನ್ 2' ಇಂಟ್ರೋವನ್ನು ರಿಲೀಸ್ ಮಾಡಿದ್ದಾರೆ. 1996ರಲ್ಲಿ ತೆರೆಕಂಡಿರೋ ಇದೇ ಜೋಡಿಯ 'ಇಂಡಿಯನ್' ಸಿನಿಮಾದ ಮುಂದುವರೆದ ಭಾಗವಿದು. ಈ ಇಂಟ್ರೋವನ್ನು ತಮಿಳಿನಲ್ಲಿ ರಜನಿಕಾಂತ್ ರಿಲೀಸ್ ಮಾಡಿದ್ದರೆ, ತೆಲುಗಿನಲ್ಲಿ ರಾಜಮೌಳಿ, ಮಲಯಾಳಂನಲ್ಲಿ ಮೋಹನ್‌ಲಾಲ್, ಹಿಂದಿಯಲ್ಲಿ ಆಮಿರ್ ಖಾನ್ ಹಾಗೂ ಕನ್ನಡದಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ. "ನಮಸ್ಕಾರ ಇಂಡಿಯಾ.. ಇಂಡಿಯನ್ ಈಸ್ ಬ್ಯಾಕ್" ಎಂದು ಕಿಚ್ಚ ಸುದೀಪ್ ಇಂಟ್ರೊವನ್ನು ರಿಲೀಸ್ ಮಾಡಿದ್ದಾರೆ.
ಶಂಕರ್ ನಿರ್ದೇಶನ ಮಾಡಿರುವ 'ಇಂಡಿಯನ್ 2' ತಮಿಳಿನ ಬಹುನಿರೀಕ್ಷಿತ ಸಿನಿಮಾ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ದಿವಂಗತ ವಿವೇಕ್, ಸಮುದ್ರಖನಿ, ಬಾಬಿ ಸಿಂಹ ಸೇರಿದಂತೆ ಹಲವು ಮಂದಿ ಸಿನಿಮಾ ನಟಿಸಿದ್ದಾರೆ.
ಅನಿರುದ್ಧ್ ಸಂಗೀತ ನೀಡಿರುವ 'ಇಂಡಿಯನ್ 2' ಸಿನಿಮಾದ ಇಂಟ್ರೊ ಕಮಲ್ ಹಾಸನ್ ಫ್ಯಾನ್ಸ್‌ಗೆ ಅಷ್ಟಾಗಿ ಇಷ್ಟ ಆಗಿಲ್ಲ. ಈ ಹಿಂದೆ ಶಂಕರ್ ಹೇಳಿರೋ ಭ್ರಷ್ಟಾಚಾರದ ಕಥೆಯನ್ನೇ ಈ ಸಿನಿಮಾದಲ್ಲೂ ಮುಂದುವರೆಸಲಾಗಿದೆ. ಅದೇ ಹಳೇ ಗೆಟಪ್ ಪ್ರೇಕ್ಷಕರಿಗೆ ಇಷ್ಟ ಆಗಿಲ್ಲ.


Click it and Unblock the Notifications











