ಕಮಲ್ ಹಾಸನ್ ನಿರ್ಮಾಣದ ಹೊಸ ಸಿನಿಮಾ 'ಧರ್ಮನ್'; ಕಥೆಯ ಸುಳಿವು ಬಿಟ್ಟುಕೊಟ್ಟ ರಜನಿ

ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಒಟ್ಟಿಗೆ ಸೇರಿ ಸಿನಿಮಾ ಮಾಡದೆ ಅದೆಷ್ಟು ವರ್ಷಗಳಾಗಿತ್ತು. ಒಬ್ಬರೂ ಯಾಕೆ ಒಟ್ಟಿಗೆ ಸೇರಿ ಬಾರದು ಅನ್ನೋ ಅಭಿಮಾನಿಗಳ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಆದರೆ, ಈಗ ಹೇಳೋಕೆ ಹೊರಟಿರೋದು ಇಬ್ಬರೂ ಒಟ್ಟಿಗೆ ಸೇರಿ ನಟಿಸುತ್ತಿರುವ ಸಿನಿಮಾ ಬಗ್ಗೆ ಅಲ್ಲ. ಕಮಲ್ ಹಾಸನ್ ಸೂಪರ್‌ಸ್ಟಾರ್ ರಜನಿಗಾಗಿ ನಿರ್ಮಾಣ ಮಾಡ್ತಿರೋ ಸಿನಿಮಾ ಬಗ್ಗೆ.

ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಸ್ವತ: ಕಮಲ್ ಹಾಸನ್ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾಗಳನ್ನು ಮಾಡಿದ್ದಾರೆ. ಹಾಗೇ ಬೇರೆ ನಟರಿಗೂ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೇ ಸಂಸ್ಥೆಯಡಿಯಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸಿನಿಮಾ ಮಾಡಬೇಕು ಅನ್ನೋದು ಆಸೆ ಇತ್ತು.

Rajinikanth revealed interesting storyline on his new movie Dharman produced by Kamal Haasan

ರಜನಿಕಾಂತ್ ಅವರೇ ಹೇಳಿದಂತೆ ಕಮಲ್ ಹಾಸನ್ ಬಹಳ ವರ್ಷಗಳ ಹಿಂದೆ ಹೇಳಿದ್ದರು. ಆಗಿನಿಂದಲೂ ಇಬ್ಬರೂ ಇಬ್ಬರೂ ಸಿನಿಮಾ ಮಾಡುವುದಕ್ಕೆ ಪ್ರಯತ್ನ ಪಡುತ್ತಲೇ ಇದ್ದರು. ಆದರೆ, ಇಬ್ಬರೂ ಬ್ಯುಸಿ ಇದ್ದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಕೊನೆಗೂ ಕಾಲ ಕೂಡಿ ಬಂದಿದೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್‌ನಲ್ಲಿ ರಜನಿ ಸಿನಿಮಾ ಸೆಟ್ಟೇರಿದೆ. ಟೈಟಲ್ ಕೂಡ ರಿವೀಲ್ ಮಾಡಲಾಗಿದೆ. ಈ ವೇಳೆ ರಜನಿ ಸಿನಿಮಾದ ಕಥೆಯ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.

ಅಂದ್ಹಾಗೆ ರಜನಿಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಮೂರು ಮಂದಿ ನಿರ್ದೇಶಕರು ಬದಲಾಗಿದ್ದರು. ಹೀಗಾಗಿ ಈ ಸಿನಿಮಾ ಟೇಕಾಫ್ ಆಗುತ್ತೋ ಇಲ್ವೋ ಅನ್ನೋ ಅನುಮಾನ ಮೂಡಿತ್ತು. ಆದರೆ, ಕೊನೆಗೂ ಅಶ್ವಥ್ ಮಾರಿಮುತ್ತು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಸಿನಿಮಾದ ಟೈಟಲ್ 'ಧರ್ಮನ್' ಎಂದು ರಿವೀಲ್ ಮಾಡಲಾಗಿದೆ.

ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಮೂವರು ಮಂದಿ ನಿರ್ದೇಶಕರು ಯಾಕೆ ಬದಲಾದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಈ ವೇಳೆ ಸಿನಿಮಾದ ಕಥೆಯ ಬಗ್ಗೆನೂ ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ. ಈ ಸಿನಿಮಾಗೆ ಮೊದಲ ರವಿಕುಮಾರ್ ನಿರ್ದೇಶನ ಮಾಡಬೇಕಿತ್ತು. ಬಳಿಕ ಅವರು ಬದಲಾಗಿ, ಸುಂದರ್ ಸಿ ಎಂಟ್ರಿ ಕೊಟ್ಟಿದ್ದರು. ಕೊನೆಗೆ ಇವರು ಬದಲಾದರು. ನಂತರ ಸಿಬಿ ಚಕ್ರವರ್ತಿ ಅವರನ್ನು ಅಪ್ರೊಚ್ ಮಾಡಿದಾಗ ಅವರು ಈ ಸಿನಿಮಾ ಮಾಡದೇ ಇರುವುದಕ್ಕೆ ಏನು ಕಾರಣಕೊಟ್ಟರು? ಅನ್ನೋದನ್ನು ಹೇಳುವಾಗ ಕಥೆಯ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇದೊಂದು ಸೂಕ್ಷ್ಮವಾದ ಕತೆಯನ್ನು ಹೊಂದಿದೆ. ಇದು ನ್ಯೂಕ್ಲಿಯರ್ ವಿಜ್ಞಾನಿಯೊಬ್ಬನ ಕತೆ. ಪರಮಾಣು ಅಸ್ತ್ರದ ಕಥೆ. ಈ ಸಿನಿಮಾ ಅಫ್ಘಾನಿಸ್ತಾನ ಹಾಗೂ ರಷ್ಯಾದಲ್ಲಿ ಶೂಟಿಂಗ್ ನಡೆಯಲಿದೆ. ಹೀಗಾಗಿ ಇದು ತುಂಬಾನೇ ಸೂಕ್ಷ್ಮ ಹಾಗೂ ಸಾಕಷ್ಟು ಸಮಯ ಕೇಳುತ್ತದೆ. ಈ ಕಾರಣಕ್ಕೆ ಚಕ್ರವರ್ತಿ ನಿರ್ದೇಶನದಿಂದ ಹಿಂದೆ ಸರಿದರು ಎಂದು ಹೇಳುವ ಮೂಲಕ ಸ್ಟೋರಿಯನ್ನು ಬಿಟ್ಟುಕೊಟ್ಟಿದ್ದಾರೆ.

ಸದ್ಯ ಫಸ್ಟ್ ಲುಕ್ ತುಂಬಾ ಇಂಟ್ರೆಸ್ಟಿಂಗ್ ಆಗಿದ್ದು, ರಜನಿಕಾಂತ್ ಕೈಯಲ್ಲಿ ಒಂದು ಚಿಕ್ಕ ಚಾಕು ಜೊತೆಗೆ ಜೊತೆಗೆ ರಕ್ತ ಸುರಿಯುವ ಅವತಾರವಿದೆ. ಹೀಗಾಗಿ ಸಿನಿಮಾ ಮಾಸ್ ಹಾಗೂ ಅಭಿಮಾನಿಗಳಿಗೆ ಇಷ್ಟ ಆಗಲಿದೆ. ರಜನಿಕಾಂತ್ ಜೊತೆಗೆ ನಟಿಯರಾದ ಸಿಮ್ರಾನ್ ಮತ್ತು ರಾಶಿ ಖನ್ನಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ, ಸಂಕಲನ ಮತ್ತು ಸಾಹಸವನ್ನು ನಿಕೇತ್ ಬೊಮ್ಮಿ, ಪ್ರದೀಪ್ ಇ ರಾಗವ್ ಮತ್ತು ಅನ್ಬರಿವ್ ಮಾಡುತ್ತಿದ್ದಾರೆ. ಇನ್ನು ಕಮಲ್ ಹಾಸನ್ ಜೊತೆಗೆ ಆರ್. ಮಹೇಂದ್ರನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಓ ಮೈ ಕಡವುಲೆ' ಮತ್ತು 'ಡ್ರ್ಯಾಗನ್' ಖ್ಯಾತಿಯ ಅಶ್ವಥ್ ಮಾರಿಮುತ್ತು ನಿರ್ದೇಶನದ ಮಾಡುತ್ತಿದ್ದಾರೆ. ಹೀಗಾಗಿ ರಜನಿ-ಕಮಲ್ ಜೋಡಿಯ ಸಿನಿಮಾ ಬಗ್ಗೆ ಕುತೂಹಲವಿದೆ.

English summary
Rajinikanth revealed interesting storyline on his new movie Dharman produced by Kamal Haasan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X