"ಸಲ್ಮಾನ್ ಖಾನ್, ಶಾರುಖ್ ಖಾನ್‌ಗಿಂತ ಶ್ರೇಷ್ಠ ನಟ ಆಮಿರ್ ಖಾನ್": ರಜನಿಕಾಂತ್ ಓಪನ್ ಸ್ಟೇಟ್ಮೆಂಟ್

ಸೂಪರ್‌ಸ್ಟಾರ್ ರಜನಿಕಾಂತ್ ನಟನೆ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಕೂಲಿ' ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ. ದಕ್ಷಿಣ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಾಗಿ ಉತ್ತರ ಭಾರತದಲ್ಲೂ ಕಾದು ಕೂತಿದ್ದಾರೆ. ಅದಕ್ಕೆ ಕಾರಣ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್. ಇದೇ ಮೊದಲ ಬಾರಿಗೆ ಸೂಪರ್‌ಸ್ಟಾರ್ ಸಿನಿಮಾದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಚೆನ್ನೈನಲ್ಲಿ ಇದೇ 'ಕೂಲಿ' ಸಿನಿಮಾದ ಈವೆಂಟ್‌ ನಡಿದಿದ್ದು, ಅಲ್ಲಿ ಆಮಿರ್ ಖಾನ್ ಅನ್ನು ಹಾಡಿ ಹೊಗಳಿದ್ದಾರೆ.

'ಕೂಲಿ' ಸೂಪರ್‌ಸ್ಟಾರ್ ನಟನೆಯ 171ನೇ ಸಿನಿಮಾ. ಜೊತೆಗೆ ತಮಿಳು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶಿಸಿರುವುದರಿಂದ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಕನ್ನಡ, ತೆಲುಗು ಹಾಗೂ ಬಾಲಿವುಡ್ ಬಿಗ್ ಸ್ಟಾರ್‌ಗಳು ರಜನಿಕಾಂತ್ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ನಾಗಾರ್ಜುನಾ, ಉಪೇಂದ್ರ ಜೊತೆ ಬಾಲಿವುಡ್ ನಟ ಆಮಿರ್ ಖಾನ್ ಕೂಡ ಈ ಸಿನಿಮಾದ ಟ್ರೈಲರ್‌ನಲ್ಲಿ ಗಮನ ಸೆಳೆದಿದ್ದಾರೆ.

Rajinikanth said Aamir Khan is legend among Salman Khan and Shah Rukh Khan also likening him to Kamal Haasan

ಚೆನ್ನೈನಲ್ಲಿ ನಡೆದ ಇವೆಂಟ್‌ನಲ್ಲಿ ಆಮಿರ್ ಖಾನ್ ಬಗ್ಗೆ ರಜನಿಕಾಂತ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರೊಂದಿಗೆ ಹೋಲಿಸಿ ಆಮಿರ್ ಖಾನ್ ಶ್ರೇಷ್ಠ ಎಂದು ರಜನಿಕಾಂತ್ ಹೇಳಿದ್ದಾರೆ. ರಜನಿಯ ಹೊಗಳಿಕೆ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟಾಕುತ್ತಿವೆ. ಅಷ್ಟಕ್ಕೂ ರಜನಿ ಹೇಳಿದ್ದೇನು? ಆಮಿರ್ ಖಾನ್ ಉಳಿದ ಇಬ್ಬರು ಖಾನ್‌ಗಳಿಗಿಂತ ಶ್ರೇಷ್ಠ ಎಂದು ಹೇಳಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.

'ಕೂಲಿ' ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಆಮಿರ್ ಖಾನ್ ಬಗ್ಗೆ ರಜನಿಕಾಂತ್ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೂ ಮುನ್ನ ಸಿನಿಮಾದಲ್ಲಿ ನಟಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶಕನದ ಬಗ್ಗೆ ಬಾರೀ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಹಾಗೇ ಇಡೀ ತಂಡದೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಆಮಿರ್ ಖಾನ್ ಬಗ್ಗೆ ರಜನಿ ಆಡಿದ ಮಾತುಗಳು ವೈರಲ್ ಆಗುತ್ತಿವೆ.

ರಜನಿಕಾಂತ್ ಬಳಿ ಲೋಕೇಶ್ ಕನಕರಾಜ್ ಬಂದು ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಆಮಿರ್ ಖಾನ್ ಅವರನ್ನು ಅತಿಥಿ ಪಾತ್ರಕ್ಕೆ ಕರೆತರುವುದಾಗಿ ಹೇಳಿದ್ದರು. ಆಗ ರಜನಿಕಾಂತ್ ಕಾಮಿಡಿ ಮಾಡಿ ನಕ್ಕಿದ್ದರಂತೆ. ಅದನ್ನು ವೇದಿಕೆ ಮೇಲೆ ಪ್ರಸ್ತಾಪ ಮಾಡಿದ್ದರು. "ಆಮಿರ್ ಖಾನ್ ಒಬ್ಬ ಪರ್ಫೆಕ್ಷನಿಸ್ಟ್. ಅವರು ಅತಿಥಿ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ಎರಡು ವರ್ಷ ತೆಗೆದುಕೊಳ್ಳುತ್ತಾರೆ" ಎಂದು ರಜನಿಕಾಂತ್ ಹೇಳಿದ್ದರಂತೆ. ಇದನ್ನು ನೆನಪಿಸಿಕೊಂಡು ವೇದಿಕೆ ಮೇಲೆ ಹಾಸ್ಯ ಚಟಾಕಿ ಹಾರಿಸಿದರು.

Rajinikanth said Aamir Khan is legend among Salman Khan and Shah Rukh Khan also likening him to Kamal Haasan

ಆ ಬಳಿಕ ಆಮಿರ್ ಖಾನ್‌ ಅನ್ನು ರಜನಿ ಹೊಗಳಿ ಅಟ್ಟಕ್ಕೇರಿಸಿದರು. " ಒಂದು ಕಡೆಗೆ ಸಲ್ಮಾನ್ ಖಾನ್ ಇದ್ದಾರೆ. ಇನ್ನೊಂದು ಕಡೆ ಶಾರುಖ್ ಖಾನ್ ಇದ್ದಾರೆ. ಇವರಿಬ್ಬರ ನಡುವೆ ಆಮಿರ್ ಖಾನ್ ಶ್ರೇಷ್ಠವಾಗಿ ನಿಲ್ಲುತ್ತಾರೆ. ನೀವು ಒಬ್ಬ ಲೆಜೆಂಡ್. ಸರ್ ನಿಮಗೊಂದು ಸಲಾಂ" ಎಂದು ರಜನಿ ಬಾಲಿವುಡ್ ಇಬ್ಬರೂ ದಿಗ್ಗಜರಿಗೆ ಹೋಲಿಕೆ ಮಾಡಿ ಮಾತಾಡಿದ್ದಾರೆ. ಹಾಗೇ " ತಮಿಳುನಾಡಿನಲ್ಲಿ ಕಮಲ್ ಹಾಸನ್ ಇರುವಂತೆ, ಉತ್ತರ ಭಾರತದಲ್ಲಿ ಆಮಿರ್ ಖಾನ್ ಇದ್ದಾರೆ" ಎಂದು ರಜನಿ ಅಭಿಪ್ರಾಯ ಪಟ್ಟಿದ್ದಾರೆ.

ಹಾಗೇ ರಜನಿಕಾಂತ್ ಇಷ್ಟು ದೊಡ್ಡ ತಾರಾಗಣವನ್ನು ನೋಡಿ ಸಿನಿಮಾದ ಕಥೆಯನ್ನೇ ಮರೆತು ಬಿಟ್ಟೆ ಎಂದೂ ವೇದಿಕೆ ಮೇಲೆ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ಹಾಗೇ ಆಮಿರ್ ಖಾನ್ ಕೂಡ ರಜನಿಕಾಂತ್‌ಗಾಗಿ ಈ ಸಿನಿಮಾವನ್ನು ಸ್ಕ್ರಿಪ್ಟ್ ಅನ್ನು ಕೇಳದೆನೇ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. "ಲೋಕೇಶ್ ಕನಕರಾಜ್ ನನ್ನನ್ನು ಭೇಟಿ ಮಾಡುವುದಕ್ಕೆ ಬಂದಾಗ, ಅವರು ಯಾಕೆ ಬರುತ್ತಿದ್ದಾರೆಂದು ನನಗೆ ಗೊತ್ತಿರಲಿಲ್ಲ. ಆಮೇಲೆ ಅವರು 'ಕೂಲಿ' ಚಿತ್ರದಲ್ಲಿ ನೀವು ಅತಿಥಿ ಪಾತ್ರದಲ್ಲಿ ನಟಿಸಬೇಕೆಂಬುದು ನನ್ನ ಆಸೆ. ಈ ಸಿನಿಮಾವನ್ನು ರಜನಿಕಾಂತ್ ಮಾಡುತ್ತಿದ್ದಾರೆ ಎಂದರು. ಆಗ ರಜಿನಿ ಸರ್ ಅವರ ಚಿತ್ರ ಎಂದು ತಿಳಿದ ತಕ್ಷಣ ಒಪ್ಪಿಕೊಂಡೆ. ಬಹುಶಃ ಹಲವು ವರ್ಷಗಳ ನಂತರ, ಸ್ಕ್ರಿಪ್ಟ್ ಕೇಳದೆ, ಏನನ್ನೂ ಕೇಳದೆ ನಾನು ಈ ಚಿತ್ರಕ್ಕೆ ಒಪ್ಪಿಗೆ ನೀಡಿದ್ದು ಇದೇ ಮೊದಲು" ಎಂದು ಆಮಿರ್ ಖಾನ್ ಹೇಳಿದ್ದಾರೆ.

More from Filmibeat

English summary
Rajinikanth has described Aamir Khan as a 'legend' among fellow actors Salman Khan and Shah Rukh Khan, also likening him to Kamal Haasan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X