Jailer Vs Vikram: 'ವಿಕ್ರಂ'ಗೆ 27 ದಿವಸ.. 'ಜೈಲರ್‌'ಗೆ 7 ದಿವಸ.. ರಜನಿ ಆರ್ಭಟ ತಡೆಯೋರೇ ಇಲ್ಲ!

ಸೂಪರ್‌ಸ್ಟಾರ್ ರಜನಿಕಾಂತ್ 'ಜೈಲರ್' ಬಿಡುಗಡೆಯಾಗಿ ಏಳು ದಿನಗಳಾಗಿವೆ. ಇಷ್ಟು ದಿನವೂ ಸೂಪರ್‌ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ತಗ್ಗಿದ್ದೇ ಇಲ್ಲ. 'ಜೈಲರ್' ಕಲೆಕ್ಷನ್ ಬಾಕ್ಸಾಫೀಸ್‌ನಲ್ಲಿ ಸ್ಡಡಿಯಾಗಿಯೇ ಮುನ್ನುಗ್ಗುತ್ತಿದೆ. ಸೋಲಿನ ಸುಳಿಯಿಂದ ರಜನಿಕಾಂತ್ ತೂರಿಕೊಂಡು ಮೇಲೆ ಬಂದಿದ್ದಾರೆ.

'ಜೈಲರ್' ಸಿನಿಮಾ ವಾರಾಂತ್ಯದಲ್ಲಷ್ಟೇ ಅಲ್ಲ. ವರ್ಕಿಂಗ್ ಡೇಸ್‌ನಲ್ಲೂ ಕಲೆಕ್ಷನ್ ಜೋರಾಗಿಯೇ ಇದೆ. ಮೂಲಗಳ ಪ್ರಕಾರ, ಸರಾಸರಿ ಶೇ.42.43ರಷ್ಟು ಚಿತ್ರಮಂದಿರಗಳು ತುಂಬಿದ್ದವು. ಹೀಗಾಗಿ ಏಳನೇ ದಿನವೂ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ.

Rajinikanths Jailer Outperforms Kamal Haasans Vikram in Just 7 Days, Grossing Rs. 450 Crores

ಈ ಬೆನ್ನಲ್ಲೇ ರಜನಿಕಾಂತ್ ತಮಿಳಿನ ಮತ್ತೊಬ್ಬ ಸೂಪರ್‌ಸ್ಟಾರ್ ಕಮಲ್ ಹಾಸನ್ 'ವಿಕ್ರಂ' ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. ಎರಡನೇ ದಿನವೇ ಮೂರು ಬಿಗ್ ಸಿನಿಮಾಗಳು ರಿಲೀಸ್ ಆಗಿದ್ದವು. ಆದರೂ, ಜೈಲರ್ ಹಿಂದಿಕ್ಕುವುದಕ್ಕೆ ಆಗಲಿಲ್ಲ. ಹಾಗಿದ್ದರೆ, 'ಜೈಲರ್' ಸಿನಿಮಾದ ಕಲೆಕ್ಷನ್ ಎಷ್ಟು? ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಭಾರತದಲ್ಲಿ 200 ಕೋಟಿ ಕ್ಲಬ್ ಸೇರಿದ 'ಜೈಲರ್'

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಭಾರತದಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಏಳು ದಿನವೇ 'ಜೈಲರ್' ಸುಮಾರು 15 ಕೋಟಿ ರೂ. ಕಲೆಕ್ಷನ್ ಮಾಡಿದೆ. ವರ್ಕಿಂಗ್ ಡೇನಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದಕ್ಕೆ ಟ್ರೇಡ್ ಎಕ್ಸ್‌ಪರ್ಟ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೂಲಕ ರಜನಿಕಾಂತ್‌ ಸಿನಿಮಾದ ಕಲೆಕ್ಷನ್ ಕೇವಲ ಭಾರತದಲ್ಲಿ, ಏಳು ದಿನಗಳಲ್ಲೇ 200 ಕೋಟಿ ಕ್ಲಬ್ ಸೇರಿದ್ದು, ಇದೂವರೆಗೂ 225.65 ಕೋಟಿ ರೂ. ಕಲೆಕ್ಷನ್ ಮಾಡಿದೆ.

ವಿಶ್ವದಾದ್ಯಂತ ಹೇಗಿದೆ ಕಲೆಕ್ಷನ್?

ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ ವರ್ಕ್ ಆಗಿದೆ. ಸಿನಿಮಾಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ಹಾಗಂತ ಭಾರತದಲ್ಲಷ್ಟೇ ಅಲ್ಲ, ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಉತ್ತಮ ಕಲೆಕ್ಷನ್ ಸಿಕ್ಕಿದೆ. ಅಮೆರಿಕ,ಯುಎಇ, ಸಿಂಗಾಪುರ ಹಾಗೂ ಮಲೇಷ್ಯಾಗಳಲ್ಲಿ 'ಜೈಲರ್' ಕಲೆಕ್ಷನ್ ತಗ್ಗಿಲ್ಲ. ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ ಅಮೆರಿಕಾದಲ್ಲಿ 'ಜೈಲರ್' ಕಲೆಕ್ಷನ್ 'ಕಬಾಲಿ' ಗಳಿಕೆಯನ್ನೇ ಮೀರಿಸಿದೆ ಎಂದು ಹೇಳಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈ ಸಿನಿಮಾ ವಿಶ್ವದಾದ್ಯಂತ 450.80 ಕೋಟಿ ರೂ. ಕಲೆಕ್ಷನ್ ಮಾಡಿದೆ.

Rajinikanths Jailer Outperforms Kamal Haasans Vikram in Just 7 Days, Grossing Rs. 450 Crores

ದಿನ ಗಳಿಕೆ
ದಿನ 1 - ₹ 95.78 ಕೋಟಿ
ದಿನ 2 - ₹ 56.24 ಕೋಟಿ
ದಿನ 3 - ₹ 68.51 ಕೋಟಿ
ದಿನ 4 - ₹ 82.36 ಕೋಟಿ
ದಿನ 5 - ₹ 49.03 ಕೋಟಿ
ದಿನ 6 - ₹ 64.27 ಕೋಟಿ
ದಿನ 7 - ₹ 34.61 ಕೋಟಿ
ಒಟ್ಟು - ₹ 450.80 ಕೋಟಿ


ಕಮಲ್ ಹಾಸನ್ 'ವಿಕ್ರಂ' ಕಲೆಕ್ಷನ್ ಹಿಂದಿಕ್ಕಿದ 'ಜೈಲರ್'

ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ 'ವಿಕ್ರಂ' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು. ವಿಶ್ವದಾದ್ಯಂತ ಕಮಲ್ ಹಾಸನ್ ಸಿನಿಮಾ 426 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ದಾಖಲೆಯನ್ನು ರಜನಿಕಾಂತ್ ಸಿನಿಮಾ 'ಜೈಲರ್' ಮುರಿದು ಹಾಕಿದೆ. ಏಳು ದಿನಗಳಲ್ಲಿ ಸುಮಾರು 450 ಕೋಟಿ ರೂ. ಕಲೆ ಹಾಕಿ ಮತ್ತೆ ಕಮಲ್ ಸಿನಿಮಾವನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಮತ್ತೊಮ್ಮೆ ರಜನಿ ಮಾಸ್ ಸ್ಟೋರಿ ಗೆದ್ದಂತಾಗಿದೆ.

ತಮಿಳು ಇತಿಹಾಸದಲ್ಲೇ ಮೊದಲು

ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ 'ಜೈಲರ್' ತಮಿಳುನಾಡಿನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಏಳು ದಿನಗಳಲ್ಲಿಯೇ 150 ಕೋಟಿ ರೂ. ಕಲೆ ಹಾಕಿದ ಮೊದಲ ಸಿನಿಮಾ ಎಂದು ವರದಿಯಾಗಿದೆ. ಕಾಲಿವುಡ್ ಇತಿಹಾಸದಲ್ಲಿಯೇ 'ಜೈಲರ್' ದಾಖಲೆ ಬರೆದಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಸದ್ಯ ರಜನಿ ಸಿನಿಮಾ 'ಜೈಲರ್' 500 ಕೋಟಿ ಕ್ಲಬ್ ಮೇಲೆ ಕಣ್ಣಿಟ್ಟಿದೆ.

More from Filmibeat

English summary
Jailer Breaks Kamal Haasan's Vikram Movie's All Time Collection in just 7 Days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X