'ಇಂಡಿಯನ್ 2' ನೋಡಿ ಚಿತ್ರತಂಡಕ್ಕೆ ಸಲಹೆ ಕೊಟ್ಟ ಹಿರಿಯ ನಟಿ ಅಂಬಿಕಾ; ಏನದು?
ಕಮಲ್ ಹಾಸನ್, ಶಂಕರ್ ಕಾಂಬಿನೇಷನ್ ಜೋಡಿಯ ಸಿನಿಮಾ 'ಇಂಡಿಯನ್ 2' ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಆದರೆ, ಸಿನಿಮಾ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಶಂಕರ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಂಡಿದೆ. ಪ್ರೇಕ್ಷಕರ ಅಭಿಪ್ರಾಯ ಕೂಡ ಅಷ್ಟಕ್ಕಷ್ಟೇ ಇತ್ತು. ಹಾಗೇ ಬಾಕ್ಸಾಫೀಸ್‌ನಲ್ಲೂ ಸಿನಿಮಾ ಹೇಳಿಕೊಳ್ಳುವಂತಹ ಮೋಡಿ ಮಾಡಲಿಲ್ಲ.
'ಇಂಡಿಯನ್ 2' ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ಎಸ್‌ಜೆ ಸೂರ್ಯ, ಪ್ರಿಯಾ ಭವಾನಿ ಶಂಕರ್, ಬಾಬಿ ಸಿಂಹ ಕೂಡ ನಟಿಸಿದ್ದಾರೆ. ಸಿಕ್ಕಾಪಟ್ಟೆ ದೊಡ್ಡ ನಿರೀಕ್ಷೆಯೊಂದಿಗೆ ಈ ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಆದರೆ, ಸಿನಿಮಾ ಸೋಲು ಕಾಣುತ್ತಿರುವ ಬೆನ್ನಲ್ಲೇ ಚಿತ್ರತಂಡ ಹೇಗಾದರೂ ಮಾಡಿ ಗೆಲ್ಲಿಸುವುದಕ್ಕೆ ಶತಪ್ರಯತ್ನ ಮಾಡುತ್ತಲೇ ಇದೆ. ಇದೇ ಸಂದರ್ಭದಲ್ಲಿ ಹಿರಿಯ ನಟಿ ಅಂಬಿಕಾ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ 'ಇಂಡಿಯನ್' ಸೀಕ್ವೆಲ್ ಆಗಿದ್ದರಿಂದ 'ಇಂಡಿಯನ್ 2' ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿತ್ತು. ಆದರೆ, ಚಿತ್ರತಂಡದ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಶಂಕರ್ ನಿರ್ದೇಶನದ ಸಿನಿಮಾವನ್ನು ನೋಡಿ ಅವರ ಕಾಲ ಮುಗೀತು ಅಂತ ಬಹಳಷ್ಟು ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಒಂದೇ ಶೈಲಿಯಲ್ಲಿ ಸಿನಿಮಾ ಮಾಡಿ ಶಂಕರ್ ಸೋಲು ಕಾಣುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.
'ವಿಕ್ರಮ್' ಅಂತಹ ಮೆಗಾ ಹಿಟ್ ಸಿನಿಮಾ ಕೊಟ್ಟಿದ್ದ ಕಮಲ್ ಹಾಸನ್ ಸಕ್ಸಸ್ ಯಾತ್ರೆ 'ಇಂಡಿಯನ್ 2' ಸಿನಿಮಾ ಮೂಲಕವೂ ಮುಂದುವರೆಯುತ್ತೆ ಎಂಬ ನಿರೀಕ್ಷೆಯಿತ್ತು. ಆದರೆ, ಈ ಸಿನಿಮಾಗಾಗಿ ದಿಗ್ಗಜರೇ ಕೆಲಸ ಮಾಡಿದ್ದರೂ, ಯಾವುದೇ ರೀತಿಯ ಪ್ರಯೋಜನ ಆಗಲಿಲ್ಲ. ಜಯಮೋಹನ್ ಹಾಗೂ ಕಪಿಲನ್ ವೈರಮುತ್ತು ಅಂತ ಇಬ್ಬರು ದಿಗ್ಗಜರು ಸಂಭಾಷಣೆ ಬರೆದಿದ್ದರೂ ಈ ಸಿನಿಮಾ ಸದ್ದು ಮಾಡಿಲ್ಲ. ಒಟ್ನಲ್ಲಿ ಅಂದುಕೊಂಡಂತೆ ಸಿನಿಮಾ ಇರಲಿಲ್ಲ. ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಲಿಲ್ಲ.

ಇದೇ ವೇಳೆ ಅಂಬಿಕಾ ನೀಡಿದ ಸಂದರ್ಶನದಲ್ಲಿ 'ಇಂಡಿಯನ್ 2' ಬಗ್ಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. "ನಾನು ಇಂಡಿಯನ್ 2 ಸಿನಿಮಾವನ್ನು ನೋಡಿದೆ. ನನಗೆ ಸಿನಿಮಾ ಇಷ್ಟ ಆಯ್ತು. ಆದರೆ, ಸಿನಿಮಾ ಸಿಕ್ಕಾಪಟ್ಟೆ ಉದ್ದ ಇದೆ ಅಂತ ಅನಿಸಿತ್ತು. ಸಿನಿಮಾಕ್ಕೆ ಕತ್ತರಿ ಹಾಕಿದ್ದರೆ ಇಷ್ಟ ಆಗುತ್ತಿತ್ತೇನೋ. ಬಹುಶ: ಈಗ ಸಿನಿಮಾಗೆ 10 ರಿಂದ 12 ನಿಮಿಷ ಕಡಿಮೆ ಮಾಡಿರಬಹುದು." ಎಂದು ಅಂಬಿಕಾ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಈ ವೈರಲ್ ಆಗುತ್ತಿದೆ.
'ಇಂಡಿಯನ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲು ಕಂಡಿದ್ದರಿಂದ ಚಿತ್ರತಂಡ ಕಂಗಾಲಾಗಿದೆ. ಬಾಕ್ಸಾಫೀಸ್ ಮೂಲಗಳ ಪ್ರಕಾರ ಹೆಚ್ಚು ಕಲೆಕ್ಷನ್ ಆಗಿಲ್ಲ. ಲೈಕಾ ಪ್ರೊಡಕ್ಷನ್‌ಗೆ ಸಿಕ್ಕಾಪಟ್ಟೆ ನಷ್ಟ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿತ್ರತಂಡ ಆಗಸ್ಟ್‌ನಲ್ಲಿ 'ಇಂಡಿಯನ್ 2' ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











