Shruti Haasan: "ನಾನು ಕುಡುಕಿ ಆಗೋಕೆ ಅಪ್ಪ-ಅಮ್ಮನೇ ಕಾರಣ" ಶ್ರುತಿ ಹಾಸನ್ ಈ ಆರೋಪದ ಹಿನ್ನೆಲೆ ಏನು?

Shruti Haasan: ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ಶ್ರುತಿ ಹಾಸನ್ ಕೈಯಲ್ಲಿ 'ಸಲಾರ್' ಅಂತಹ ಪ್ಯಾನ್ ಇಂಡಿಯಾ ಸಿನಿಮಾವಿದೆ.

ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಂದ ಎಷ್ಟು ಹೆಸರು ಮಾಡಿದ್ದಾರೋ ಅಷ್ಟೆ ವಿವಾದಗಳಲ್ಲೂ ಸಿಕ್ಕಿಕೊಂಡಿದ್ದಾರೆ. ಕೆಲವು ಬಾರಿ ಶ್ರುತಿ ಹಾಸನ್ ಕುಡಿತದ ಚಟಕ್ಕೆ ದಾಸಿಯಾಗಿದ್ದಾರೆ ಅಂತಾನೂ ಸುದ್ದಿಯಾಗಿತ್ತು. ಈ ಹಿಂದೆ ಮದ್ಯವಸ್ಯನಿ ಆಗಿದ್ದಾರೆ ಅನ್ನೋ ಸುದ್ದಿ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿದ್ದರು.

Shruti Haasan says she became alcoholic due to her parents divorce

ನಟಿ ಶ್ರುತಿ ಹಾಸನ್ ವೈಯಕ್ತಿಕ ವಿಚಾರಗಳಿಂದ ದಿಢೀರನೇ ಸುದ್ದಿ ಆಗಿಬಿಡುತ್ತಾರೆ. ಈ ಹಿಂದೆ ಕಮಲ್ ಹಾಸನ್ ಪುತ್ರಿ ಮಾನಸಿಕ ಆರೋಗ್ಯ ಕೆಟ್ಟಿದೆ. ಆಲ್ಕೋಹಾಲ್‌ಗೆ ದಾಸಿಯಾಗಿದ್ದಾರೆ ಅನ್ನೋ ಸುದ್ದಿಗಳೆಲ್ಲ ಹಬ್ಬಿದ್ದವು. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದು, ಆ ಹೇಳಿಕೆಗಳು ವೈರಲ್ ಆಗಿವೆ. ಕುಡಿತದ ಚಟಕ್ಕೆ ಬಿದ್ದಿದ್ದು ಅಪ್ಪ-ಅಮ್ಮನಿಂದಲೇ ಎಂದು ಹೇಳಿದ್ದಾರೆ. ಅದ್ಯಾಕೆ ಹೀಗಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಶ್ರುತಿ ಹಾಸನ್ ಕುಡಿತಕ್ಕೆ ದಾಸಿಯಾಗಿ ಇದ್ದಿದ್ದೇಕೆ?

ಕಮಲ್ ಹಾಸನ್ ಹಾಗೂ ನಟಿ ಸಾರಿಕಾ ಅವರ ಪುತ್ರಿ ಶ್ರುತಿ ಹಾಸನ್. ಸದ್ಯ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಈಕೆ ಕೂಡ ಒಬ್ಬರು. ಸ್ಟಾರ್ ನಟರೊಂದಿಗೆ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿ ಗೆದ್ದಿದ್ದಾರೆ. ಅಪ್ಪನ ನೆರಳಲ್ಲಿ ವೃತ್ತಿ ಬದುಕನ್ನು ಕಟ್ಟಿಕೊಳ್ಳದೆ, ಸ್ವಂತ ಶ್ರಮದಿಂದ ಬೆಳೆದು ನಿಂತಿದ್ದಾರೆ. ಆದರೆ, ತನ್ನ ಯೌವ್ವನದ ದಿನಗಳಲ್ಲಿ ಶ್ರುತಿ ಹಾಸನ್ ಕುಡಿತಕ್ಕೆ ದಾಸಿಯಾಗಿದ್ದರು. ಈ ಮಾತನ್ನು ಸ್ವತ: ಶ್ರುತಿ ಹಾಸನ್ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.

ಮದ್ಯವಸ್ಯನಕ್ಕೆ ಅಪ್ಪ-ಅಮ್ಮ ಕಾರಣ

ಸಂದರ್ಶನದಲ್ಲಿ ತಾನು ಕುಡಿತದ ಚಟಕ್ಕೆ ಒಳಗಾಗಲು ಅಪ್ಪ-ಅಮ್ಮನೇ ಕಾರಣವೆಂದು ಶ್ರುತಿ ಹಾಸನ್ ಹೇಳಿದ್ದಾರೆ. ಆಗಿನ್ನೂ ಶ್ರುತಿ ಹಾಸನ್‌ಗೆ 18 ವರ್ಷ ಈ ಸಮಯದಲ್ಲಿ ಅಪ್ಪ ಕಮಲ್ ಹಾಸನ್ ಹಾಗೂ ಅಮ್ಮ ಸಾರಿಕಾ ಇಬ್ಬರೂ ವೈವಾಹಿಕ ಜೀವನದಿಂದ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದರು. ಇದು ಶ್ರುತಿ ಹಾಸನ್ ಮನಸ್ಸಿನ ಮೇಲೆ ತುಂಬಾನೇ ದೊಡ್ಡ ಪರಿಣಾಮ ಬೀರಿತ್ತು. ಇದರಿಂದ ಮದ್ಯವಸ್ಯನಿ ಆಗಿದ್ದಾಗಿ ಹೇಳಿಕೊಂಡಿದ್ದಾರೆ.

Shruti Haasan Reveals Why she become alcoholic

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಅಪ್ಪ-ಅಮ್ಮ ವಿಚ್ಛೇದನಕ್ಕೆ ಮುಂದಾಗುತ್ತಿದ್ದಂತೆ ಶ್ರುತಿ ಹಾಸನ್ ಖಿನ್ನತೆ ಜಾರಿದ್ದರು. ಈ ಘಟನೆ ಮನಸ್ಸಿಗೆ ಘಾಸಿಯನ್ನುಂಟು ಮಾಡಿತ್ತು. ಇದರಿಂದ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಹಲವರು ಸಲಹೆ ನೀಡಿದ್ದರು. ಹೀಗಾಗಿ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿದ್ದೆ. ಅದಕ್ಕೆ ಹುಚ್ಚಿಯಾಗಿದ್ದಾಳೆಂದು ಹೇಳಿದ್ದರು. ಮಾನಸಿಕ ತಜ್ಞರನ್ನು ಭೇಟಿಯಾದ ಮಾತ್ರಕ್ಕೆ ಹುಚ್ಚಿಯಾಗುವುದಿಲ್ಲ ಎಂದು ಶ್ರುತಿ ಹಾಸನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಲಂಡನ್‌ನಲ್ಲಿ ಶ್ರುತಿ ಹಾಸನ್ ಚಿಕಿತ್ಸೆ

ಶ್ರುತಿ ಹಾಸನ್ ಮದ್ಯಕ್ಕೆ ದಾಸಿಯಾಗಿದ್ದರು. ಅದರಿಂದ ಹೊರಬರಲೇ ಬೇಕಿತ್ತು. ಈ ಕಾರಣಕ್ಕೆ ಲಂಡನ್‌ಗೆ ಹೋಗಿ ಚಿಕಿತ್ಸೆಯನ್ನು ಪಡೆದಿದ್ದರು. ಈಗ ಅದರಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ. ಈ ವೇಳೆ ತನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸಲಾಗಿತ್ತು. ಆ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ಸದ್ಯ ಶ್ರುತಿ ಹಾಸನ್ ನಟಿಸಿರುವ ಬಹು ನಿರೀಕ್ಷೆಯ ಸಿನಿಮಾ 'ಸಲಾರ್' ರಿಲೀಸ್ ಆಗಬೇಕಿದೆ.

More from Filmibeat

English summary
Shruti Haasan revealed why she became alcoholic:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X