"ಕಮಲ್ ಹಾಸನ್ ಪಾರ್ಟಿಗೆ ಬೆಳ್ಳಿ ತಂಬೂರಿಯಲ್ಲಿ ಕೊಕೇನ್ ತಂದಿದ್ದರು"; ವಿವಾದ ಸೃಷ್ಟಿಸಿದ ಗಾಯಕಿ ಸುಚಿತ್ರಾ

ಸುಮಾರು ಎಂಟು ವರ್ಷಗಳ ಹಿಂದೆ ಅಂದರೆ, 2016ರಲ್ಲಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟ ನಟಿಯರ ಖಾಸಗಿ ವಿಡಿಯೋ, ಫೋಟೊಗಳು ಲೀಕ್ ಆಗಿದ್ದವು. ಸುಚಿ ಲೀಕ್ಸ್ ಅನ್ನೋ ಟ್ವಿಟರ್ ಖಾತೆ ಮೂಲಕ ಆ ಫೋಟೊಗಳು ಹಾಗೂ ವಿಡಿಯೋಗಳು ಹೊರ ಬಂದಿದ್ದವು. ಆ ಬಳಿಕ ತಮಿಳು ಚಿತ್ರರಂಗದಲ್ಲಿ ದೊಡ್ಡ ವಿವಾದವೇ ಹುಟ್ಟಿಕೊಂಡಿತ್ತು.

ಎಲ್ಲಿ ನೋಡಿದರೂ ಸುಚಿ ಲೀಕ್ಸ್ ಬಗ್ಗೆನೇ ಚರ್ಚೆಯಾಗುತ್ತಿತ್ತು. ಈ ವಿಡಿಯೋ, ಫೋಟೊಗಳು ದಕ್ಷಿಣ ಭಾರತದ ಜನಪ್ರಿಯ ಗಾಯಕಿ ಸುಚಿತ್ರಾ ಅವರ ಟ್ವಿಟರ್‌ನಿಂದ ಲೀಕ್ ಆಗಿದ್ದವು. ಆ ಬಳಿಕ ಗಾಯಕಿ ಸುಚಿತ್ರಾ ಮಾನಸಿಕ ಸರಿಯಿಲ್ಲ ಅಂತೆಲ್ಲ ಅನ್ನುವ ಸುದ್ದಿಗಳು ಹಬ್ಬಿದ್ದವು. ಇನ್ನೊಂದು ಕಡೆ ಸ್ವತ: ಸುಚಿತ್ರಾ ಮಾಜಿ ಪತಿ ಕಾರ್ತಿಕ್ ಕುಮಾರ್ ಕೂಡ ಅದೇ ಮಾತನ್ನು ಪುನರುಚ್ಚರಿಸಿದ್ದರು.

Suchi leaks fame singer Suchitra s controversial statement against Drugs In Kamal Haasan Party

ಈಗ ಬಹಳ ದಿನಗಳ ಬಳಿಕ ಅದೇ ಗಾಯಕಿ ಸುಚಿತ್ರಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ಇತ್ತೀಚೆಗೆ ಸಂದರ್ಶನ ನೀಡಿದ್ದರು. ಇದರಲ್ಲಿ ಮತ್ತೆ ಅದೇ ಸುಚಿ ಲೀಕ್ಸ್ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅದೇ ಸಂದರ್ಶನದಲ್ಲಿ ಕಮಲ್ ಹಾಸನ್ ಪಾರ್ಟಿಯಲ್ಲೂ ಡ್ರಗ್ಸ್ ಸೇವನೆಯಾಗುತ್ತೆ ಅಂತ ಹೇಳಿದ್ದು ತಮಿಳು ಚಿತ್ರರಂಗದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಸಿದೆ. ಅಷ್ಟಕ್ಕೂ ಈ ವಿವಾದಾತ್ಮಕ ಗಾಯಕಿ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಚಿತ್ರಾ ಕೆಲವು ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಧನುಷ್ ಹಾಗೂ ಐಶ್ವರ್ಯಾ ವಿಚ್ಚೇದನ, ಸುಚಿ ಲೀಕ್ಸ್ ಅಂತ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಅನ್ನೋದನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಈ ಸಂಗತಿ ಮತ್ತೆ ಈಗ ಚರ್ಚೆಗೆ ಬಂದಿವೆ.

ಸುಚಿ ಲೀಕ್ಸ್ ವಿವಾದ ಬಳಿಕ ಈ ಗಾಯಕಿ ತೆರೆಮರೆಗೆ ಸರಿದಿದ್ದರು. ತಮಿಳು ಚಿತ್ರರಂಗದಲ್ಲಿ ವಿವಾದವಾಗಿದ್ದರಿಂದ ಸುಚಿತ್ರಾಗೆ ಅವಕಾಶಗಳು ಕಡಿಮೆ ಆಗುವುದಕ್ಕೆ ಶುರುವಾಗಿದ್ದವು. ಅಲ್ಲದೆ ಸುಚಿತ್ರಾ, ಕೆಲವು ಕಾಲ ಲಂಡನ್‌ನಲ್ಲಿ ನೆಲೆಸಿದ್ದರು. ಬಳಿಕ ತಮಿಳಿನ ಯುನಿವರ್ಸಲ್ ಸ್ಟಾರ್ ಕಮಲ್ ಹಾಸನ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿ ಮತ್ತೆ ಸಂಚಲ ಸೃಷ್ಟಿಸಿದ್ದರು.

Suchi leaks fame singer Suchitra s controversial statement against Drugs In Kamal Haasan Party

ಇದೀಗ ಸಂದರ್ಶನದಲ್ಲಿ ಕಮಲ್ ಹಾಸನ್ ಪಾರ್ಟಿಯಲ್ಲೂ ಡ್ರಗ್ಸ್ ಸೇವನೆ ಆಗುತ್ತೆ ಎಂದು ಹೇಳಿಕೆ ಕೊಟ್ಟಿದ್ದಾರೆ. ತನ್ನ ಮಾಜಿ ಪತಿ ಹಾಗೂ ನಟ ಕಾರ್ತಿಕ್ ಕುಮಾರ್ ಮಾದಕ ದ್ರವ್ಯವನ್ನು ಸೇವನೆ ಮಾಡುತ್ತಾರೆ. ಪ್ರತಿ ಬಾರಿ ಪಾರ್ಟಿಗೆ ಹೋದಾಗಲೂ ಕೊಕೇನ್ ಬಳಸುತ್ತಿದ್ದರು. ಇದು ಎಲ್ಲರಿಗೂ ಗೊತ್ತಿದೆ. ಹಾಗೇ ನಟ ಕಮಲ್ ಹಾಸನ್ ಪಾರ್ಟಿಗೆ ಬೆಳ್ಳಿ ತಂಬೂರಿಯಲ್ಲಿ ಕೊಕೇನ್ ತಂದಿದ್ದರು. ಕಾಲಿವುಡ್‌ನಲ್ಲಿ ಈಗ ಡ್ರಗ್ ಕಲ್ಚರ್ ಮಾಮೂಲಿಯಂತಾಗಿಬಿಟ್ಟಿದೆ ಎಂದು ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ತಮಿಳಿನ ಹಿರಿಯ ನಟರಾದ ಶರತ್‌ಕುಮಾರ್, ರಾಧಾ ರವಿಯಂತಹವರು ಡ್ರಗ್ಸ್ ವಿರುದ್ಧ ಹೋರಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗಾಯಕಿ ಸುಚಿತ್ರಾ ಸಂದರ್ಶನದ ಬಾಂಬ್ ಸಿಡಿಸಿದ್ದಾರೆ. ಸುಚಿತ್ರಾ ಮಾಡಿದ ಆರೋಪಗಳು ಮತ್ತೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಆದರೆ, ಈ ಬಗ್ಗೆ ತಮಿಳು ಚಿತ್ರರಂಗ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಇದರೊಂದಿಗೆ ಸುಚಿ ಲೀಕ್ಸ್ ನಲ್ಲಿ ಪೋಟೊ, ವಿಡಿಯೋಗಳು ಸೋರಿಕೆ ಆಗುವುದಕ್ಕೆ ನಟಿ ತ್ರಿಶಾ ಕಾರಣ ಎಂದೂ ಹೇಳಿದ್ದಾರೆ. ಅವರೇ ಸ್ವತ: ಫೋಟೊಗಳನ್ನು ನೀಡಿದ್ದರು ಎಂದು ಗಾಯಕಿ ಸುಚಿತ್ರಾ ಹೇಳಿಕೊಂಡಿದ್ದಾರೆ.

More from Filmibeat

English summary
Suchitra's controversial statement against Kamal Haasan Party
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X