Leo-Business: ಬಿಡುಗಡೆಗೂ ಮುನ್ನವೇ 'ಲಿಯೋ' ₹454 ಕೋಟಿ ವ್ಯಾಪಾರ.. ಕರ್ನಾಟಕಕ್ಕೆ ಸೇಲ್ ಆಗಿದ್ದು ಎಷ್ಟಕ್ಕೆ?

ದಳಪತಿ ವಿಜಯ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಲಿಯೋ' ಅಕ್ಟೋಬರ್ 19ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 'ಮಾಸ್ಟರ್' ಬಳಿಕ ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಿದು. 'ಲಿಯೋ' ರಿಲೀಸ್‌ಗೂ ಮುನ್ನವೇ ಭರ್ಜರಿಯಾಗಿ ವ್ಯಾಪಾರ ಮಾಡಿದೆ.

ಲೋಕೇಶ್ ಕನಗರಾಜ್ ನಿರ್ದೇಶನದ 'ಲಿಯೋ' ಸಿನಿಮಾದ ಬಜೆಟ್ 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ಈ ಬಜೆಟ್ ಅನ್ನು ವಿಜಯ್ ಸಿನಿಮಾ ಬಿಡುಗಡೆಗೂ ಮುನ್ನವೇ ವಾಪಾಸ್ ಪಡೆದುಕೊಂಡಿದೆ. ಸುಮಾರು 454 ಕೋಟಿ ರೂಪಾಯಿ ಪ್ರೀ ರಿಲೀಸ್ ಬ್ಯುಸಿನೆಸ್ ಆಗಿದೆ ಎಂದು ವರದಿಯಾಗಿದೆ.

Thalapathy Vijay movie Leo Pre Release Business in Karnataka and rest of the world

ವಿತರಣಾ ಹಕ್ಕು, ಸ್ಯಾಟಲೈಟ್ ಹಕ್ಕು ಹಾಗೂ ಓಟಿಟಿ ರೈಟ್ಸ್ ಸೇರಿ ಭಾರೀ ಮೊತ್ತಕ್ಕೆ ಸಿನಿಮಾ ಸೇಲ್ ಆಗಿದೆ. ಹೀಗಾಗಿ ನಿರ್ಮಾಪಕರು ಸೇಫ್ ಆಗಿದ್ದಾರೆ ಎನ್ನಲಾಗಿದೆ. ಹಾಗಿದ್ದರೆ, ಇಷ್ಟು ದೊಡ್ಡ ಮೊತ್ತದಲ್ಲಿ ಕರ್ನಾಟಕದ ವಿತರಕರು ಎಷ್ಟು ಮೊತ್ತ ಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಲಿಯೋ' ಮಾಫಿಯಾ ಹಿನ್ನೆಲೆಯ ಸಿನಿಮಾ

ಲೋಕೇಶ್ ಕನಗರಾಜ್ ಮಾಫಿಯಾ ಹಿನ್ನೆಲೆಯನ್ನು ಇಟ್ಟು ಸಿನಿಮಾ ಮಾಡುತ್ತಾರೆ. 'ಲಿಯೋ' ಕೂಡ ಇಂತಹದ್ದೇ ಒಂದು ಕಥೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈ ಕಾರಣಕ್ಕೆ ತೆಲುಗು ಹಾಗೂ ತಮಿಳು ಏರಿಯಾಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಬಹುದೆಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ 'ಲಿಯೋ' ಅತಿ ಹೆಚ್ಚು ಬ್ಯುಸಿನೆಸ್ ಮಾಡಿದ ತಮಿಳು ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಗೇ ಕರ್ನಾಟಕದಲ್ಲೂ 'ಲಿಯೋ' ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಅನ್ನೋದು ಟಾಕ್.

Thalapathy Vijay movie Leo Pre Release Business in Karnataka and rest of the world

'ಲಿಯೋ' ಕರ್ನಾಟಕ ಬ್ಯುಸಿನೆಸ್ ಎಷ್ಟು?

ದಳಪತಿ ವಿಜಯ್‌ಗೆ ಬೆಂಗಳೂರಿನಲ್ಲಿ ಫ್ಯಾನ್ಸ್ ಇದ್ದಾರೆ. ಜೊತೆ 'ಜೈಲರ್' ಸಿನಿಮಾದ ಯಶಸ್ಸಿನ ರುಚಿ ಕಂಡಿರೋ ಇಲ್ಲಿನ ವಿತರಕರು ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಕರ್ನಾಟಕದಲ್ಲಿ 'ಲಿಯೋ' ವಿತರಣೆ ಹಕ್ಕನ್ನು 11.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಬ್ಬಕ್ಕೆ ಬ್ಯುಸಿನೆಸ್ ಜೋರಾಗಿ ಆದರೆ, ಕರ್ನಾಟಕದಲ್ಲಿ ತಮಿಳು ಸಿನಿಮಾಗಳ ಹಾವಳಿ ಮತ್ತಷ್ಟು ಹೆಚ್ಚಾಗಬಹುದು.

ಉಳಿದಕಡೆ ಬ್ಯುಸಿನೆಸ್ ಹೇಗಿದೆ?

'ಲಿಯೋ' 454 ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ ಎಂದು ಇಂಡಿಯಾ ಹೆರಾಲ್ಡ್ ವರದಿ ಮಾಡಿದೆ. ಈ ವರದಿ ಪ್ರಕಾರ, 'ಲಿಯೋ' ಕೇವಲ ತಮಿಳುನಾಡಿನಲ್ಲೇ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಓವರ್‌ಸೀನ್ ರೈಟ್ಸ್ 60 ಕೋಟಿ ರೂಪಾಯಿ ಎನ್ನಲಾಗಿದೆ. ತೆಲುಗು ರೈಟ್ಸ್ 21 ಕೋಟಿ ರೂಪಾಯಿ., ಕೇರಳದಲ್ಲಿ 16 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ವಿತರಕರಿಂದಲೇ 200 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

ಸ್ಯಾಟಲೈಟ್-ಓಟಿಟಿ ಬ್ಯುಸಿನೆಸ್ ರೈಟ್ಸ್ ಎಷ್ಟು?

ವಿತರಣಾ ಹಕ್ಕುಗಳ ಬಳಿಕ ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಓಟಿಟಿ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಇಂಡಿಯಾ ಹೆರಾಲ್ಡ್ ಪ್ರಕಾರ, ನೆಟ್‌ಫ್ಲಿಕ್ಸ್ 140 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಸ್ಯಾಟಲೈಟ್ ರೈಟ್ಸ್ 80 ಕೋಟಿ ರೂಪಾಯಿ. ಮ್ಯೂಸಿಕ್ ರೈಟ್ಸ್ 16 ಕೋಟಿ. ಒಟ್ಟು 236 ಕೋಟಿ ರೂಪಾಯಿ ಬ್ಯುಸಿನೆಸ್ ಆಗಿದೆ ಎಂದು ಹೇಳಲಾಗುತ್ತಿದೆ.

More from Filmibeat

English summary
Thalapathy Vijay movie Leo Pre Release Business in Karnataka and rest of the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X