"ಪತ್ನಿ ಸಂಗೀತಾ ವಿರೋಧದ ನಡುವೆಯೂ ತ್ರಿಷಾಗೆ ಚುಂಬಿಸಿದ ವಿಜಯ್ " ಪತ್ರಕರ್ತನ ಶಾಕಿಂಗ್ ಕಮೆಂಟ್
ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಪ್ರಬಲ ಪೈಪೋಟಿ ಕೊಡುತ್ತಿರುವ ಏಕೈಕ ನಟ ದಳಪತಿ ವಿಜಯ್. ವಿಶ್ವದ ಮೂಲೆ ಮೂಲೆಯಲ್ಲೂ ರಜನಿಗೆ ಇದ್ದಂತೆ ದಳಪತಿ ವಿಜಯ್‌ಗೂ ಅಪಾರ ಪ್ರಮಾಣದಲ್ಲಿ ಫ್ಯಾನ್ಸ್ ಇದ್ದಾರೆ. ಮೆಗಾ ಹಿಟ್‌ಗಳನ್ನು ಕೊಟ್ಟಿರೋ ವಿಜಯ್ ತಮಿಳಿನ ಮೆಗಾ ಹೀರೊ.
ಸದ್ಯ ವಿಜಯ್ ನಟಿಸಿರುವ 'ಲಿಯೋ' ಸಿನಿಮಾ ರಿಲೀಸ್ ಆಗಿದೆ. ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಖುಷಿಯಲ್ಲಿರುವಾಗಲೇ ದಳಪತಿ ವಿಜಯ್ ಬಗ್ಗೆ ಮತ್ತೊಂದು ಸುದ್ದಿ ತಮಿಳುನಾಡಿನಲ್ಲಿ ಹರಿದಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ವಿಜಯ್ ಹಾಗೂ ಪತ್ನಿ ಸಂಗೀತಾ ನಡುವೆ ವೈಮನಸ್ಸಿದೆ. ಪತ್ನಿ ಸಂಗೀತಾಗೆ ದಳಪತಿ ವಿಜಯ್ ವಿಚ್ಛೇದನ ನೀಡುವುದಕ್ಕೆ ಮುಂದಾಗಿದ್ದಾರೆಂಬ ಸುದ್ದಿನೂ ಓಡಾಡಿತ್ತು. ಈ ಬೆನ್ನಲ್ಲೇ ತಮಿಳುನಾಡಿನ ವಿವಾದಾತ್ಮಕ ಪತ್ರಕರ್ತ ಮತ್ತೊಂದು ಶಾಕಿಂಗ್ ಸುದ್ದಿಯನ್ನು ಕೊಟ್ಟಿದ್ದಾರೆ. ಸದ್ಯ ಈ ಬಗ್ಗೆನೇ ಈಗ ಸುದ್ದಿಯಾಗುತ್ತಿದೆ.
ವಿಜಯ್ ದಾಂಪತ್ಯ ಜೀವನದ ಬಗ್ಗೆ ಚರ್ಚೆ
ದಳಪತಿ ವಿಜಯ್ ಸುದೀರ್ಘ ಸಿನಿಮಾ ಜರ್ನಿಯಲ್ಲಿ ಹಲವು ಗಾಳಿ ಸುದ್ದಿಗಳು ಹಬ್ಬಿವೆ. ಇವುಗಳಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿರುವು ಪತ್ನಿ ಸಂಗೀತಾಗೆ ವಿಚ್ಛೇದನ ನೀಡುತ್ತಾರೆ ಎನ್ನುವ ಸುದ್ದಿ. ಇದು 'ಲಿಯೋ' ಸಿನಿಮಾ ಆರಂಭದ ವೇಳೆ ಹೆಚ್ಚು ಚರ್ಚೆಯಲ್ಲಿತ್ತು. ಅದಕ್ಕೆ ಕಾರಣ ತ್ರಿಷಾ ಅಂತಾನೂ ಹೇಳಲಾಗಿತ್ತು. ಈಗ ಮತ್ತೆ ಅದೇ ಮ್ಯಾಟರ್ ಚರ್ಚೆಯಲ್ಲಿದೆ. ಅಷ್ಟಕ್ಕೂ ವಿಜಯ್, ಪತ್ನಿ ಸಂಗೀತಾ ಹಾಗೂ ತ್ರಿಷಾ ಬಗ್ಗೆ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ..
ವಿಜಯ್ ಜೊತೆ ಕಂಡಿಲ್ಲ ಪತ್ನಿ ಸಂಗೀತಾ
ದಳಪತಿ ವಿಜಯ್ ಜೊತೆ ಅವರ ಪತ್ನಿ ಸಂಗೀತಾ ಇತ್ತೀಚೆಗೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇದು ವಿಜಯ್ ಹಾಗೂ ಪತ್ನಿ ಸಂಗೀತಾ ನಡುವಿನ ಗಾಳಿ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದೆ. 'ವಾರಿಸು' ಸಿನಿಮಾದ ಪ್ರಚಾರದ ವೇಳೆ ಪತ್ನಿ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹಾಗೇ ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಲಿಯೋ' ಪ್ರಚಾರದಲ್ಲೂ ಸಂಗೀತಾ ಕಂಡಿಲ್ಲ. ಹೀಗಾಗಿ ವಿಜಯ್, ಸಂಗೀತಾ ಹಾಗೂ ತ್ರಿಷಾ ಬಗೆಗಿನ ಸುದ್ದಿಗಳು ಮತ್ತಷ್ಟು ಹೆಚ್ಚಾಗಿವೆ.

ವಿಜಯ್ ಸಂಗೀತಾ ಮಧ್ಯೆ ತ್ರಿಷಾ
'ವಾರಿಸು' ಸಿನಿಮಾ ಪ್ರಚಾರದ ವೇಳೆ ದಳಪತಿ ವಿಜಯ್ ತಂದೆ ತಾಯಿ ಕಾಣಿಸಿಕೊಂಡಿದ್ದರು. ಆದರೆ, ಪತ್ನಿ ಸಂಗೀತಾ ಕಂಡಿರಲಿಲ್ಲ. ಅಲ್ಲಿಂದ ವಿಜಯ್ ಹಾಗೂ ಪತ್ನಿ ಸಂಗೀತಾ ನಡುವೆ ಹರಿದಾಡುತ್ತಿರುವ ಸುದ್ದಿಗೆ ಮತ್ತಷ್ಟು ಪುಷ್ಠಿ ಕೊಟ್ಟಿತ್ತು. ಈಗ ತಮಿಳು ಪತ್ರಕರ್ತ ಬೈಲ್ವಾನ್ ರಂಗನಾಥನ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೆಟ್ರೋ ಮೇಲ್‌ಗೆ ನೀಡಿದ ಸಂದರ್ಶನದಲ್ಲಿ "ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ನಟಿಸುವುದು ಪತ್ನಿ ಸಂಗೀತಾಗೆ ಇಷ್ಟವಿರಲಿಲ್ಲ. ಆದರೂ ವಿಜಯ್ ಅವರೊಂದಿಗೆ ನಟಿಸಿದ್ದಾರೆ" ಎಂದು ಶಾಕಿಂಗ್ ಕಮೆಂಟ್ ಮಾಡಿದ್ದಾರೆ.
ಲಿಪ್‌ಲಾಕ್ ಸೀನ್‌ನಲ್ಲೂ ನಟನೆ
ಬೈಲ್ವಾನ್ ರಂಗನಾಥನ್ ಇನ್ನೂ ಕೆಲವು ಸಂಗತಿಗಳನ್ನು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ವಿಜಯ್ ಪತ್ನಿ ಇನ್ಮುಂದೆ ತ್ರಿಷಾ ಜೊತೆ ನಟಿಸಬೇಡಿ ಎಂದಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ನಟಿಸಿದ್ದಾರೆ. ಇಷ್ಟೇ ಅಲ್ಲ ಲಿಪ್‌ಲಾಕ್ ಸೀನ್‌ನಲ್ಲೂ ನಟಿಸಿದ್ದಾರೆ. ಇದು ಸಂಗೀತಾಗೆ ಇಷ್ಟವಿಲ್ಲ. ಹೀಗಾಗಿ ವಿಜಯ್ ಕುಟುಂಬ ಸಿನಿಮಾವನ್ನೇ ನೋಡಿಲ್ಲ. ವಿಜಯ್ ಪತ್ನಿ ಸಂಗೀತಾ ಅಷ್ಟೇ ಅಲ್ಲ. ಪುತ್ರ ಜೆಸನ್ ಸಂಜಯ್ ಕೂಡ ಸಿನಿಮಾ ನೋಡಿಲ್ಲ" ಎಂದು ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ.


Click it and Unblock the Notifications











